ಆಯೋಗವು ಸಭೆಗಳಲ್ಲಿ ಅಥವಾ ಅನ್ಯಥಾ ತೀರ್ಮಾನಗಳ ಮೂಲಕ ಯಾವುದೇ ವಿಷಯದ ಮೇಲೆ ಮಾಡಲಾದ ಯಾವುದೇ ವರದಿಯ ಒಳಾಂಶಗಳನ್ನು ರಹಸ್ಯವಾಗಿ ಇಟ್ಟುಕೊಳ್ಳತಕ್ಕದ್ದು. ಮತ್ತು ಅಂಥ ವರದಿಯ ಸಂಬಂಧ ಅಧಿಕೃತಗೊಳಿಸಲಾದ ವ್ಯಕ್ತಿಯ ಹೊರತಾಗಿ ಯಾವುದೇ ವ್ಯಕ್ತಿಗೆ ಬಹಿರಂಗ ಪಡಿಸಬಾರದೆಂದು ನಿರ್ದೇಶಿಸಬಹುದು.
(1)ಆಯೋಗವು ಸಫಾಯಿ ಕರ್ಮಚಾರಿಗಳ ರಕ್ಷಣೆ, ಕ್ಷೇಮಾಭಿವೃದ್ಧಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ತನಿಖೆ ಮಾಡಲು ಅಥವಾ ಆಯೋಗವು ನೇರವಾಗಿ ತನಿಖೆ ಅಥವಾ ವಿಚಾರಣೆ ನಡೆಸಲು ತೀರ್ಮಾನಿಸಿದೆಯೋ ಆ ನಿರ್ದಿಷ್ಟ ದೂರುಗಳ ವಿಚಾರಣೆಗಾಗಿ ಸಭೆಗಳನ್ನು ನಡೆಸಬಹುದು. ಅಂತಹ ಉಪವೇಶನಗಳನ್ನು ಆಯೋಗದ ಕೇಂದ್ರ ಸ್ಥಳದಲ್ಲಾಗಲಿ ಅಥವಾ ರಾಜ್ಯದ ಯಾವುದೇ ಇತರ ಸ್ಥಳದಲ್ಲಾಗಲಿ ನಡೆಸಬಹುದು.
(2)ಆಯೋಗದ ಸಭೆಗಳನ್ನು ವಿಚಾರಣೆ ನಡೆಸಲು ಉದ್ದೇಶಿಸಿದ ಪಕ್ಷಕಾರರಿಗೆ ಯುಕ್ತ ನೋಟೀಸನ್ನು ನೀಡಿದ ನಂತರ ನಡೆಸತಕ್ಕದ್ದು, ಅಗತ್ಯವಿದ್ದರೆ ಸಾರ್ವಜನಿಕರಿಗೆ ಮುಂಚಿತವಾಗಿ ಪ್ರಚಾರದ ನೋಟೀಸನ್ನು ನೀಡತಕ್ಕದ್ದು. ನೋಟೀಸು ಅಥವಾ ಸಂದರ್ಭಾನುಸಾರವಾಗಿ ಮುಂಚಿತವಾಗಿ ಮಾಹಿತಿ ನೀಡಿ ತನಿಖೆ ಅಥವಾ ವಿಚಾರಣೆ ಮೇರೆಗಿನ ವಿಷಯಗಳಲ್ಲಿ ಭಾದಿತವಾಗಿರುವಂತ ಸಫಾಯಿ ಕರ್ಮಚಾರಿಗಳ ಸದಸ್ಯರ ಬಗ್ಗೆ ಎಚ್ಚರಿಕೆ ವಹಿಸತಕ್ಕದ್ದು.
(3) ತನಿಖೆ ಅಥವಾ ವಿಚಾರಣೆಯು ನಡೆಯುವ ಅವಧಿಯಲ್ಲಿ ಆಯೋಗವು ಪ್ರಮಾಣವಚನ ಅಥವಾ ಶಪಥ ಪತ್ರಗಳ ಮೇಲೆ ಸಾಕ್ಷ್ಯವನ್ನು ಪಡೆಯಬಹುದು. ಆಯೋಗವು ಅವಶ್ಯವೆಂದು ಪರಿಗಣಿಸಿದರೆ, ತನಿಖೆ ಅಥವಾ ವಿಚಾರಣೆಯಲ್ಲಿ ಸಾಕ್ಷ್ಯವನ್ನು ತೆಗೆದುಕೊಳ್ಳುವ ಉದ್ದೇಶಕ್ಕಾಗಿ, ಅವಶ್ಯವೆಂದು ಪರಿಗಣಿಸುವ ಯಾಮೊಬ್ಬ ವ್ಯಕ್ತಿಯ ಖುದ್ದು ಹಾಜರಿಯನ್ನು ಅಗತ್ಯಪಡಿಸಬಹುದು ಮತ್ತು ಅವನಿಗೆ ಸಮನ್ಗಳನ್ನು ಜಾರಿಗೊಳಿಸಬಹುದು. ಸಮನ್ಗಳನ್ನು ಸ್ವೀಕರಿಸಿದ ದಿನಾಂಕದಿಂದ ಆಯೋಗದ ಮುಂದೆ ಹಾಜರಾಗಬೇಕೆಂದು ನಿರ್ದೇಶಿಸಿದ ವ್ಯಕ್ತಿಗೆ ಕನಿಷ್ಠ ಏಳು ದಿನಗಳ ನೋಟೀಸಿನ ಸಮನ್ಗಳನ್ನು ಒದಗಿಸತಕ್ಕದ್ದು.
(4) ಸಫಾಯಿ ಕರ್ಮಚಾರಿಗಳಿಗೆ ಸಂಬಂಧಿಸಿದ ವಿಷಯಗಳಾದ ಸ್ವತ್ತು, ಸೇವೆ ಅಥವಾ ಉದ್ಯೋಗದ ಸಂಬಂಧ ತುರ್ತು ಬೆದರಿಕೆ ಇರುವಾಗ ಮತ್ತು ಆಯೋಗವು ವಿವಾದಾಂಶವನ್ನು ಕೈಗೊಂಡಿದೆ ಎಂದು ಅವರಿಗೆ ತಿಳಿಸಲು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಫ್ಯಾಕ್ಸ್ ಅಥವಾ ಇ-ಮೇಲ್ ಮೂಲಕ ಸೂಚನೆ ನೀಡಿ, ಸಂಜ್ಞೇಯತೆಯನ್ನು ತೆಗೆದುಕೊಳ್ಳತಕ್ಕದ್ದು. ಫ್ಯಾಕ್ಸ್ ಅಥವಾ ಇ-ಮೇಲ್ ತುರ್ತು ಪ್ರತ್ಯುತ್ತರವನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ತರಿಸಿಕೊಳ್ಳತಕ್ಕದ್ದು. ಒಂದು ವಾರದೊಳಗೆ ಪತ್ರ ವನ್ನು ಸ್ವೀಕರಿಸದ ಸಂದರ್ಭದಲ್ಲಿ ಸಂಬಂಧಪಟ್ಟ ಪ್ರಾಧಿಕಾರವು ವಿಚಾರಣೆಗಾಗಿ ಶೀಘ್ರ ನೋಟೀಸಿ ನಲ್ಲಿ ಸಮನ್ ನೀಡತಕ್ಕದ್ದು.
(5) ಆಯೋಗವು ಅಗತ್ಯ ಸಭೆಗಳನ್ನು ನಡೆಸತಕ್ಕದ್ದು ಮತ್ತು ತನಿಖೆಯನ್ನು ನಡೆಸತಕ್ಕದ್ದು. ವಾಸ್ತವಾಂಶಗಳ ಮತ್ತು ಸಾಕ್ಷ್ಯಗಳ ಸಂಗ್ರಹಣ ನೋಟೀಸು, ವಿಚಾರಣಾ ನೋಟೀಸು ಮತ್ತು ಸಾರ್ವಜನಿಕ ನೋಟೀಸು ಕ್ರಮವಾಗಿ ನಮೂನೆ I,II ಮತ್ತು III ರಲ್ಲಿ ಇರತಕ್ಕದ್ದು.