(1)ಒಂದು ವಿಷಯವನ್ನು ಆಯೋಗವು ನೇರವಾಗಿ ತನಿಖೆ ಅಥವಾ ವಿಚಾರಣೆ ಮಾಡಬೇಕಾದಾಗ ಆಯೋಗದ ಸಭೆಗಳನ್ನು ನಡೆಸುವ ಮೂಲಕ ಹಾಗೆ ಮಾಡಬಹುದು.
(2) ಹಾಜರಿರಬೇಕಾದ ಅಧಿಕಾರಿಗಳು,- ಒಬ್ಬ ಸದಸ್ಯನು ಸಭೆಯನ್ನು ನಡೆಸುವಾಗ, ಆಯೋಗದ ಅಧಿಕೃತ ಅಧಿಕಾರಿ ಅಥವಾ ಸದಸ್ಯ-ಕಾರ್ಯದರ್ಶಿಯು ಪ್ರಕಾರ್ಯಗಳನ್ನು ಯುಕ್ತವಾಗಿ ಹಾಗೂ ಪ್ರಾಮಾಣಿಕವಾಗಿ ಸಭೆಯನ್ನು ನಡೆಸುವ ಸದಸ್ಯರಿಗೆ ನೆರವಾಗಲು ಹಾಜರಿರತಕ್ಕದ್ದು. ಸದಸ್ಯರು ವರದಿಯನ್ನು ಸಿದ್ಧಪಡಿಸಲು ಕೋರಿದರೆ ಅದನ್ನು ಸಿದ್ಧಪಡಿಸಲು ಸದಸ್ಯರುಗಳಿಗೆ ನೆರವಾಗುವುದು ಅಧಿಕೃತ ಅಧಿಕಾರಿಯ ಕರ್ತವ್ಯವಾಗಿರತಕ್ಕದ್ದು. ಕಾರ್ಯ ವಿಧಾನಗಳನ್ನು ಅನುಸರಿಸಲು ಸದಸ್ಯ(ರು)ಗೆ ನೆರವಾಗುವುದಕ್ಕೆ ಸಹ ಅಧಿಕಾರಿಯು ಜವಾಬ್ದಾರನಾಗಿರತಕ್ಕದ್ದು;
(3) ಸಭೆಗಳ ಸಂಖ್ಯೆ,-ಆಯೋಗದ ಸಭೆಗಳನ್ನು ಅಗತ್ಯವಿದ್ದಾಗಲೆಲ್ಲಾ ನಡೆಸಬಹುದು. ಆಯೋಗವು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುವ ವಿವಿಧ ಸದಸ್ಯರುಗಳೊಂದಿಗೆ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚಿನ ಸಭೆಗಳನ್ನು ನಡೆಸಬಹುದು.
(4) ಸಭೆಗಳ ಕಾರ್ಯಕ್ರಮ,- ಸಭೆಗಳ ಕಾರ್ಯಕ್ರಮವನ್ನು ಕೇಂದ್ರ ಕಛೇರಿಗಳು ಹಾಗೂ ಇತರ ಸ್ಥಳಗಳೆರಡು ಕಡೆಗಳಲ್ಲಿ ಸಾಮಾನ್ಯವಾಗಿ ಮುಂಚಿತವಾಗಿ ಮತ್ತು ಯುಕ್ತವಾಗಿ ತಿಳಿಸಿ ಪ್ರತಿ ತಿಂಗಳು ನಡೆಸಬಹುದು.
(5) ಸಾಕ್ಷಿದಾರರಿಗೆ ವೆಚ್ಚಗಳನ್ನು ಭರಿಸುವುದು:- (ಎ) ಸಭೆಯಲ್ಲಿ ಆಯೋಗದ ಮುಂದೆ ಹಾಜರಾಗಲು ಸಮನ್ಗಳ ಮೂಲಕ ಕರೆಯಲಾದಂಥ ವ್ಯಕ್ತಿಗಳಿಗೆ ಪ್ರಯಾಣ ವೆಚ್ಚಗಳನ್ನು ಆಯೋಗವು ಭರಿಸತಕ್ಕದ್ದು:
ಪರಂತು, ವ್ಯಕ್ತಿಯ ವಾಸ-ಸ್ಥಳವು ಆಯೋಗದ ಸಭೆಯ ಸ್ಥಳದಿಂದ 8 ಕಿ.ಮೀ. ಗಳಿಗಿಂತ ಹೆಚ್ಚಾಗಿರಬೇಕು. ಹಾಗೆ ಭರಿಸಲಾದ ಮೊತ್ತವು ವ್ಯಕ್ತಿಯು ಯಾವುದೇ ಇತರ ಮೂಲದಿಂದ ಪ್ರಯಾಣ ಮತ್ತು ದಿನಭತ್ಯಕ್ಕೆ ಹಕ್ಕುಳ್ಳವನಾಗಿಲ್ಲದಿದ್ದರೆ ವಾಸ್ತವಿಕ ಪ್ರಯಾಣವೆಚ್ಚಗಳು ಹಾಗೂ ವ್ಯಕ್ತಿಯು ಆಯೋಗದ ಸಭೆಯಲ್ಲಿ ಹಾಜರಾಗಿದ್ದ ದಿನಗಳ ಸಂಖ್ಯೆಗನುಗುಣವಾಗಿ ದಿನಭತ್ಯೆಗೆ ಒಳಪಟ್ಟಿರತಕ್ಕದ್ದು. ಪ್ರಯಾಣ ವೆಚ್ಚಗಳ ಮಿತಿಯು ಆಯೋಗವು ನಿರ್ಧಿಷ್ಟ ಪಡಿಸಬಹುದಾದ ದರಗಳ ಆಧಾರದ ಮೇಲೆ ಲೆಕ್ಕ ಹಾಕಲಾದ ರೈಲು ದರ ಹಾಗೂ ರಸ್ತೆಯ ದೂರದ ಆಧಾರದ ಮೇಲೆ ನಿರ್ಧರಿಸತಕ್ಕದ್ದು. ವ್ಯಕ್ತಿಗಳ ಅರ್ಹತೆಯ ಬಗ್ಗೆ ಯಾವುದೇ ಸಂದೇಹಗಳು ಇದ್ದ ಸಂದರ್ಭದಲ್ಲಿ, ಆಯೋಗದ ಸದಸ್ಯ ಕಾರ್ಯದರ್ಶಿಯ ನಿರ್ಣಯವು ಅಂತಿಮವಾಗಿರತಕ್ಕದ್ದು;
(ಬಿ) ಸರ್ಕಾರಿ/ಸಾರ್ವಜನಿಕ ವಲಯ ಉದ್ದಿಮೆ ನೌಕರರಾಗಿರುವ ವ್ಯಕ್ತಿಗಳನ್ನು ಆಯೋಗದ ಮುಂದೆ ಹೇಳಿಕೆ ನೀಡಲು ಅಥವಾ ದಾಖಲೆಗಳನ್ನು ಹಾಜರುಪಡಿಸಲು ಸಮನ್ ಮಾಡಿದ್ದರೆ, ಅದನ್ನು ಕರ್ತವ್ಯದ ಮೇಲೆ ಎಂಬುದಾಗಿ ಭಾವಿಸತಕ್ಕದ್ದು;
(ಸಿ) ಆಯೋಗದ ಸದಸ್ಯ ಕಾರ್ಯದರ್ಶಿಯು ಹಾಗೆ ಹಾಜರಾಗುವ ಸಂಬಂಧಪಟ್ಟ ವ್ಯಕ್ತಿಗಳಿಗೆ ಮೇಲಿನಂತೆ ಪಾವತಿ ಮಾಡುವ ಅಂಥ ಕ್ಲೇಮುಗಳ ಪಾವತಿಯನ್ನೂ ಖಚಿತಗೊಳಿಸಲು ಸೂಕ್ತ ವಿಧಾನವನ್ನು ರೂಪಿಸಬಹುದು;
(ಡಿ) ಮೇಲಿನಂತೆ ಪ್ರಯಾಣ ವೆಚ್ಚಗಳಿಗಾಗಿ ಕ್ಲೇಮು, ವ್ಯಕ್ತಿಯು ಸ್ವಂತ ಒಪ್ಪಿಗೆಯ ಮೇಲೆ ಮಾಡುವ ಯಾವುದೇ ತನಿಖೆ ಅಥವಾ ವಿಚಾರಣೆಯಲ್ಲಿ ಅಥವಾ ಆಯೋಗವು ಸಮನ್ ಜಾರಿಗೊಳಿಸಿರದ ಸೂಚನೆ ಅಥವಾ ನೋಟೀಸಿಗಾಗಿ ಆಯೋಗದ ಮುಂದೆ ಹಾಜರಾಗುವಂಥ ವ್ಯಕ್ತಿಯ ಸಂಬಂಧದಲ್ಲಿ ಅನ್ವಯಿಸತಕ್ಕದ್ದಲ್ಲ.