ಆಯೋಗದ ಬಜೆಟ್-ಅನ್ನು ಪ್ರತಿ ವರ್ಷದ 30ನೇ ನವೆಂಬರ್ ಮಾಹೆಗೆ ಮೊದಲೇ ತಯಾರಿಸತಕ್ಕದ್ದು ಹಾಗೂ ಪ್ರತಿ ವರ್ಷದ ಡಿಸೆಂಬರ್ನ ಮೊದಲ ವಾರದ ಅವಧಿಯನ್ನು ಅನುಮೋದನೆಗಾಗಿ ಸರ್ಕಾರಕ್ಕೆ ದ್ವಿ-ಪ್ರತಿಯಲ್ಲಿ ಸಲ್ಲಿಸತಕ್ಕದ್ದು.
ಆಯೋಗವು ಲೆಕ್ಕಪತ್ರವನ್ನು ಈ ಕೆಳಕಂಡಂತೆ ನಿರ್ವಹಿಸತಕ್ಕದ್ದು, ಎಂದರೆ:-
(1) ಆಯವ್ಯಯದ ಅನುದಾನಗಳನ್ನು ಸ್ವೀಕರಿಸುವುದಕ್ಕೆ ಸಂಬಂಧಪಟ್ಟಂಥ ಲೆಕ್ಕಪತ್ರಗಳ ವಿವರಣಾ ಪಟ್ಟಿ ಹಾಗೂ ಆಯ-ವ್ಯಯದ ಅನುದಾನಗಳ ಸಂಬಂಧದಲ್ಲಿನ ವೆಚ್ಚದ ಲೆಕ್ಕಪತ್ರಗಳ ವಿವರಣಾ ಪಟ್ಟಿ ಹಾಗೂ ಆಯೋಗದ ಎಲ್ಲಾ ಲೆಕ್ಕ ಪತ್ರಗಳನ್ನು, ಕಾಲಕಾಲಕ್ಕೆ ಸರ್ಕಾರದ ನಿರ್ದೇಶನಗಳಿಗನುಸಾರವಾಗಿ ನಿರ್ವಹಿಸತಕ್ಕದ್ದು.
(2)ಆಯೋಗದ ಲೆಕ್ಕಪತ್ರಗಳನ್ನು ಕರ್ನಾಟಕದ ಮಹಾಲೇಖಪಾಲರ ಮೂಲಕ ಆಯಾ ವರ್ಷದಲ್ಲಿ ಲೆಕ್ಕ ಪರಿಶೋಧನೆ ಮಾಡಿಸತಕ್ಕದ್ದು.
(1)ಆಯೋಗದ ವಾರ್ಷಿಕ ವರದಿಯನ್ನು ಸಿದ್ಧಪಡಿಸತಕ್ಕದ್ದು ಮತ್ತು ಅಧಿನಿಯಮದ 15ನೇ ಪ್ರಕರಣದ ಅಡಿಯಲ್ಲಿ ಅಗತ್ಯಪಡಿಸಲಾದಂತೆ ಕಳೆದ ವರ್ಷದ ಅವಧಿಯಲ್ಲಿ ನಡೆಸಿದ ತನ್ನ ಕಾರ್ಯ ಚಟುವಟಿಕೆಗಳ ಸಂಪೂರ್ಣ ಲೆಕ್ಕಪತ್ರಗಳನ್ನು ಸೂಚಿಸಿದ ಹಣಕಾಸು ವರ್ಷ ಪೂರ್ಣಗೊಂಡ ದಿನಾಂಕದಿಂದ ಮೂರು ತಿಂಗಳೊಳಗೆ ಸರ್ಕಾರಕ್ಕೆ ಕಳುಹಿಸತಕ್ಕದ್ದು. ಸರ್ಕಾರವು, ವಿಧಾನಮಂಡಲದ ಉಭಯ ಸದನಗಳ ಮುಂದೆ ಇದನ್ನು ಮಂಡಿಸಬಹುದು.
(2) ಲೆಕ್ಕ ಪರಿಶೋಧಕರ ವರದಿಯನ್ನು ಸ್ವೀಕರಿಸಿದ ಕೂಡಲೇ ಆದಷ್ಟು ಬೇಗನೆ ಆಯೋಗವು ವಿಧಾನಮಂಡಲದ ಉಭಯ ಸದನಗಳ ಮುಂದೆ ಇದನ್ನು ಮಂಡಿಸಲು ಸರ್ಕಾರದ ಲೆಕ್ಕಪರಿಶೋಧಕರ ವರದಿಯೊಂದಿಗೆ ಲೆಕ್ಕಪತ್ರಗಳ ವಾರ್ಷಿಕ ವಿವರಪಟ್ಟಿಯ ಪ್ರತಿಯನ್ನು ಕಳುಹಿಸತಕ್ಕದ್ದು.