(1)ಸರ್ಕಾರವು ಅಧ್ಯಕ್ಷರಿಗೆ ನೀಡಿದ ಸ್ಥಾನಮಾನಗಳಿಗನುಸಾರವಾಗಿ ವೇತನ ಮತ್ತು ಭತ್ಯೆಗಳು ಮತ್ತು ಇತರೆ ವಿಶೇಷ ಸೌಲಭ್ಯಗಳಿಗೆ ಅವರು ಹಕ್ಕುಳ್ಳವರಾಗಿರತಕ್ಕದ್ದು. ಅಧ್ಯಕ್ಷರು ಕರ್ನಾಟಕ ರಾಜ್ಯದ ವಿಧಾನಮಂಡಲದ ಸದಸ್ಯರಾಗಿದ್ದರೆ, ಅವರು ಸಂಬಂಧಪಟ್ಟ ಅಧಿನಿಯಮ ಅಥವಾ ನಿಯಮಗಳ ಅಡಿಯಲ್ಲಿ ವಿಧಾನ ಮಂಡಲದ ಸದಸ್ಯರಾಗಿ ಪಡೆಯುವ ಭತ್ಯೆಗಳನ್ನು ಹೊರತುಪಡಿಸಿ, ಯಾವುದೇ ಇತರೆ ಪರಿಶ್ರಮ ಧನಕ್ಕೆ ಹಕ್ಕುಳ್ಳವನಾಗಿರತಕ್ಕದ್ದಲ್ಲ. ಹಿಂದಿನ ಸೇವೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಅಥವಾ ಇತರೆ ಮೂಲಗಳಿಂದ ನಿವೃತ್ತಿ ವೇತನವನ್ನು ಪಡೆಯುತ್ತಿರುವ ಯಾಮೊಬ್ಬ ವ್ಯಕ್ತಿಯು ಅಧ್ಯಕ್ಷರಾಗಿನೇಮಕಗೊಂಡಿದ್ದಲ್ಲಿ ಈ ನಿಯಮಗಳ ಅಡಿಯಲ್ಲಿ ಅವರಿಗೆ ಪಾವತಿಸಬೇಕಾದ ಒಟ್ಟು ವೇತನವು ನಿವೃತ್ತಿ ಸಮಯದಲ್ಲಿ ಅವರು ಸೆಳೆಯುತ್ತಿರುವ (ಡ್ರಾಯಿಂಗ್) ಒಟ್ಟು ಸಂಬಳದಲ್ಲಿ ನಿವೃತ್ತಿ ವೇತನವನ್ನು ಕಡಿತಗೊಳಿಸಿ ಪಾವತಿಸುವುದು.
(2) ಸದಸ್ಯ-ಕಾರ್ಯದರ್ಶಿಯನ್ನು ಹೊರತುಪಡಿಸಿ ಇತರೆ ಸದಸ್ಯರು, ಈ ಮುಂದಿನ ಉಪವೇಶನ ಸಂಭಾವನೆ ಮತ್ತು ಭತ್ಯೆಗಳನ್ನು ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು, ಎಂದರೆ:-
(ಎ) ಆಯೋಗದ ಪ್ರತಿ ಉಪವೇಶನ/ ಸಭೆಯ ಉಪವೇಶನದ ಸಂಭಾವನೆಯು ರೂ.1000/- ಆಗಿದ್ದು ಇದು ತಿಂಗಳಿಗೆ ರೂ. 20,000/- ಮೀರತಕ್ಕದ್ದಲ್ಲ.ಸ್ಥಳೀಯ ಪ್ರಯಾಣ ವೆಚ್ಚ,ದೂರವಾಣಿ ಮತ್ತು ಲೇಖನ ಸಾಮಾಗ್ರಿ ವೆಚ್ಚಗಳಿಗಾಗಿ ಮಾಸಿಕ ಭತ್ಯೆಗಳು ರೂ. 5000/- (ಐದು ಸಾವಿರ ರೂಪಾಯಿಗಳು ಮಾತ್ರ) ಅಥವಾ ಸರ್ಕಾರ ಪ್ರತ್ಯೇಕ ಆದೇಶದ ಮೂಲಕ ನಿಗಧಿಪಡಿಸಿದ ಪ್ರತಿ ಉಪವೇಶನ/ ಸಭೆಯ ಉಪವೇಶನದ ಸಂಭಾವನೆ ಮತ್ತು ಭತ್ಯೆ ಇದರಲ್ಲಿ ಯಾವುದು ಹೆಚ್ಚಿಗೆ ಇರುತ್ತದೆಯೋ ಅದು.
(ಸಿ) ಪ್ರಯಾಣ ಭತ್ಯೆ ಮತ್ತು ದಿನಭತ್ಯೆಯು ರಾಜ್ಯ ಸರ್ಕಾರದ ಗ್ರೂಪ್-ಎ ಹಿರಿಯ ಶ್ರೇಣಿಯ ಅಧಿಕಾರಿಗಳಿಗೆ ಅನ್ವಯವಾಗುವಂತೆಯೇ ಇರತಕ್ಕದ್ದು, ಆಯೋಗದ ಅಂಗವಾಗಿ ಸದಸ್ಯನು ಕೈಗೊಳ್ಳುವ ಪ್ರವಾಸದ ದಿನಗಳ ಸಂಖ್ಯೆಯು ಒಂದು ತಿಂಗಳಿಗೆ 10 ದಿನಗಳನ್ನು ಮೀರತಕ್ಕದ್ದಲ್ಲ ಮತ್ತು ಅಂಥ ಪ್ರವಾಸಗಳು ಆಯೋಗದ ಪ್ರಕಾರ್ಯಕ್ಕೆ ಸಂಬಂಧಿಸಿದ ಉದ್ದೇಶಕ್ಕೆ ಸೀಮಿತವಾಗಿರತಕ್ಕದ್ದು.
(ಡಿ) ಅಧ್ಯಕ್ಷರು ಮತ್ತು ಸದಸ್ಯರು ಅಗತ್ಯವಿದ್ದರೆ ಸರ್ಕಾರದ ಪೂರ್ವಾನುಮೋದನೆಯೊಂದಿಗೆ ರಾಜ್ಯ ಮತ್ತು ದೇಶದ ಹೊರಗೆ ಪ್ರವಾಸಗಳನ್ನು ಕೈಗೊಳ್ಳಬಹುದು.