(1)ಆಯೋಗವು ಸರ್ಕಾರದ ಪೂರ್ವಾನುಮೋದನೆಯೊಂದಿಗೆ ಸರ್ಕಾರದಲ್ಲಿ ಸರಕುಗಳು ಮತ್ತು ಸೇವೆಗಳನ್ನು ಪಡೆಯುವುದಕ್ಕಾಗಿ ನಿಯಮಿಸಲಾದಂಥ ವಿಧಾನದಲ್ಲಿ ಈ ಸಂಬಂಧದಲ್ಲಿ ಹೊರಡಿಸಲಾದ ನಿರ್ಣಯಗಳ ಮೂಲಕ ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳ ಸೌಲಭ್ಯಕ್ಕೆ ಯಾವುದೇ ಮೌಲ್ಯಮಾಪನ ಹಾಗೂ ಅಧ್ಯಯನಗಳನ್ನು ಕೈಗೊಳ್ಳಬಹುದು.
(2)ಅಂಥ ಪ್ರತಿಯೊಂದು ಮೌಲ್ಯಮಾಪನ ಹಾಗೂ ಅಧ್ಯಯನಗಳ ತರುವಾಯ ವರದಿಯೊಂದನ್ನು ಆಯೋಗದ ಮುಂದೆ ಮಂಡಿಸತಕ್ಕದ್ದು ಹಾಗೂ ಆಯೋಗವು ತಾನು ಸೂಕ್ತವೆಂದು ಭಾವಿಸಬಹುದಾದಂಥ ಕ್ರಮವನ್ನು ಕೈಗೊಳ್ಳಬಹುದು ಅಥವಾ ಯುಕ್ತ ಕ್ರಮಕ್ಕೆ ಅಧ್ಯಯನದ ವರದಿಯ ಪ್ರತಿಯನ್ನು ಸರ್ಕಾರಕ್ಕೆ ಕಳುಹಿಸಬಹುದು.