ಆಯೋಗವು ಕಾನೂನಿನ ಮೇರೆಗೆ ಸ್ಪಷ್ಟವಾಗಿ ಉಲ್ಲೇಖಿಸಿರದಂಥ ವಿಷಯಗಳು ಅಥವಾ ಪ್ರಕರಣಗಳ ಅಥವಾ ವಿಶೇಷ ಪ್ರಕರಣಗಳಲ್ಲಿ ಅಂದರೆ ಸಫಾಯಿ ಕರ್ಮಚಾರಿ ಅಥವಾ ಸಫಾಯಿ ಕರ್ಮಚಾರಿ ಸಮೂಹದ ಕ್ಷೇಮಾಭಿವೃದ್ಧಿಯಂಥ ವಿಷಯವಾಗಿದ್ದರೆ ಪತ್ರ ವ್ಯವಹಾರವನ್ನು ಆರಂಭಿಸಬಹುದು ಹಾಗೂ ಈ ವರ್ಗಗಳ ವ್ಯಕ್ತಿಗಳ ಹಿತಾಸಕ್ತಿಯನ್ನು ರಕ್ಷಿಸುವಂಥ ತನ್ನ ಅಂತರ್ಗತ ಸಾಮಥ್ರ್ಯದಲ್ಲಿ ಆಯೋಗಕ್ಕೆ ಅಗತ್ಯವಾಗಿದ್ದರೆ ಕ್ರಮ ಕೈಗೊಳ್ಳಬಹುದು. ಆಯೋಗದಿಂದ ಬರುವ ಎಲ್ಲಾ ನಿಯತ ಔಪಚಾರಿಕ ಪತ್ರ ವ್ಯವಹಾರಗಳನ್ನು ಸದಸ್ಯ ಕಾರ್ಯದರ್ಶಿಯ ಅಥವಾ ಅಧಿಕೃತ ಅಧಿಕಾರಿಯ ಸಹಿಗಳಿಂದ ಹೊರಡಿಸತಕ್ಕದ್ದು. ಆಯೋಗವು, ತನ್ನ ಸದಸ್ಯ ಕಾರ್ಯದರ್ಶಿಯ ಮೂಲಕ ದಾವೆಯನ್ನು ಹೂಡಬಹುದು ಅಥವಾ ದಾವೆಗೆ ಗುರಿಯಾಗಿಸಬಹುದು.
Loading…