ಆಯೋಗವು ಕಾಲಕಾಲಕ್ಕೆ ಸಫಾಯಿ ಕರ್ಮಚಾರಿಗಳಿಗಾಗಿ ಉಪಬಂಧಿಸಲಾದ ಸುರಕ್ಷತೆಗಳು ಹಾಗೂ ಇತರ ಸಾಮಾಜಿಕ, ಆರ್ಥಿಕ ಪ್ರಗತಿಪರ ಕ್ರಮಗಳಿಗೆ ಸಂಬಂಧಪಟ್ಟಂತೆ ತಾನು ಮೇಲ್ವಿಚಾರಣೆ ಮಾಡುವ ವಿಷಯಗಳು ಅಥವಾ ಸಂಗತಿಗಳು ಮತ್ತು ಪ್ರದೇಶಗಳನ್ನು ನಿರ್ವಹಣೆ ಮಾಡಬಹುದು.
(1)ಆಯೋಗವು ಮೇಲ್ವಿಚಾರಣೆ ಮಾಡಬೇಕಾದಂಥ ವಿಷಯದ ನಿಯಂತ್ರಣದ ಜವಾಬ್ದಾರಿ ಹೊಂದಿರುವ ಯಾವುದೇ ಪ್ರಾಧಿಕಾರವು ಆಯೋಗವು ಅಗತ್ಯಪಡಿಸಿದಂತೆ ವರದಿಗಳನ್ನು ಒದಗಿಸತಕ್ಕದ್ದು.
(2) ಆಯೋಗವು ಕಾಲ-ಕಾಲಕ್ಕೆ ಸಫಾಯಿ ಕರ್ಮಚಾರಿಗಳಿಗಾಗಿ ಇರುವ ಸುರಕ್ಷತಾ ಕಾರ್ಯಗಳ ಅನುಷ್ಠಾನ ಪ್ರಭಾರ ಹೊಂದಿರುವಂಥ ರಾಜ್ಯ ಸರ್ಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ನಿಗಮಗಳು ಅಥವಾ ಇತರ ಪ್ರಾಧಿಕಾರಗಳಿಂದ ಯಾವುದೇ ನಿರ್ಧಿಷ್ಟ ವಿಷಯ ಅಥವಾ ಸಂಗತಿಯ ಬಗ್ಗೆ ಮಾಹಿತಿ ಹಾಗೂ ವಿವರವನ್ನು ಒದಗಿಸಲು ಸೂಚನೆಗಳನ್ನು ಹೊರಡಿಸಬಹುದು.
(1)ಮೇಲ್ವಿಚಾರಣೆ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡುವ ಸಲುವಾಗಿ ಆಯೋಗವು ಮಾಹಿತಿಯನ್ನು ಪಡೆದುಕೊಂಡ ನಂತರ ಸಾಧ್ಯವಾದಷ್ಟು ಬೇಗನೆ ನಿರ್ಣಯವನ್ನು ತೆಗೆದುಕೊಂಡ ಮೇಲೆ ರಕ್ಷಣಾ ಕಾರ್ಯಗಳ ಅನುಷ್ಠಾನದಲ್ಲಿ ಗಮನಿಸಿದಂಥ ನ್ಯೂನ್ಯತೆಗಳನ್ನು ವಿವರಿಸಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ವಿಷಯಗಳನ್ನು ತಿಳಿಸತಕ್ಕದ್ದು. ಹಾಗೂ ಅವಶ್ಯಕ ಸರಿಯಾದ ಕ್ರಮಗಳ ಬಗ್ಗೆ ಸಲಹೆ ನೀಡತಕ್ಕದ್ದು;
(2)ಆಯೋಗವು (1)ನೇ ಉಪನಿಯಮದ ಅಡಿಯಲ್ಲಿ ಕಳುಹಿಸಿದ ವಿಷಯಾನುಸಾರ ಕೈಗೊಂಡ ಕ್ರಮದ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದ ಅಭಿಪ್ರಾಯಗಳನ್ನು ಕೋರಬಹುದು;
(3) ಆಯೋಗವು ಸಂವಿಧಾನದ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಮೇರೆಗೆ ಅಥವಾ ರಾಜ್ಯ ಸರ್ಕಾರದ ಯಾವುದೇ ಆದೇಶದ ಮೇರೆಗೆ ಸಫಾಯಿ ಕರ್ಮಚಾರಿಗಳಿಗಾಗಿ ಇರುವ ರಕ್ಷಣಾ ಕ್ರಮಗಳು ಹಾಗೂ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಕ್ರಮಗಳಿಗೆ ಸಂಬಂಧಪಟ್ಟ ವಿಷಯಗಳ ಮೇಲ್ವಿಚಾರಣಾ ಕಾರ್ಯ ವಿಧಾನದ ಮೂಲಕ ಅಭಿಪ್ರಾಯಪಟ್ಟ ತಜ್ಞ ತೀರ್ಮಾನಗಳು ಮತ್ತು ಗೊತ್ತುವಳಿಗಳನ್ನು ತನ್ನ ವಾರ್ಷಿಕ ವರದಿ ಅಥವಾ ಯಾವುದೇ ವಿಶೇಷ ವರದಿಯಲ್ಲಿ ಸೇರಿಸಬಹುದು.