ಮೂಲ ಅಧಿನಿಯಮದ ಪ್ರಕರಣ 11ರ SOS, ಈ ಕೆಳಕಂಡ ಪ್ರಕರಣವನ್ನು ಸೇರಿಸತಕ್ಕದ್ದು, ಎಂದರೆ:-
“11ಎ-ಸಾಮಾನ್ಯ ಪದ್ಧತಿಯ ಪರಿಣಾಮವಾಗಿ ಸರಕುಗಳ ಮತ್ತು ಸೇವೆಗಳ ಮೇಲೆ ವಿಧಿಸಿದ ಅಥವಾ ಕಡಿಮೆ ವಿಧಿಸಿದ ತೆರಿಗೆಯನ್ನು ವಸೂಲು ಮಾಡದಿರಲು ಅಧಿಕಾರ.
ಈ ಅಧ್ಯಾದೇಶದಲ್ಲಿ ಏನೇ ಒಳಗೊಂಡಿದ್ದರೂ,-
(ಎ) ಯಾವುದೇ ಸರಕುಗಳ ಅಥವಾ ಸೇವೆಗಳ ಅಥವಾ ಅವುಗಳೆರಡರ ಪೂರೈಕೆಯ ಮೇಲೆ ರಾಜ್ಯ ತೆರಿಗೆಯನ್ನು ವಿಧಿಸುವುದಕ್ಕೆ ಸಂಬಂಧಿಸಿದಂತೆ (ತೆರಿಗೆಯನ್ನು ವಿಧಿಸದಿರುವುದನ್ನು ಒಳಗೊಂಡಂಅಂತೆ) ಒಂದು ಪದ್ಧತಿಯು ಸಾಮಾನ್ಯವಾಗಿ ಪ್ರಚಲಿತವಾಗಿತ್ತು ಅಥವಾ ಇದೆ ಎಂಬುದಾ?; ಮತ್ತು
(ಬಿ) ಅಂತಹ ಪೂರೈಕೆಗಳು,-
(i) ಸದರಿ ಪದ್ಧತಿಯ ಪ್ರಕಾರ, ರಾಜ್ಯ ತೆರಿಗೆಯು ವಿಧಿಸದಿರುವ ಅಥವಾ ವಿಧಿಸುತ್ತಿರುವ, ವಿಧಿಸಿದ ಪ್ರಕರಣಗಳಲ್ಲಿ ರಾಜ್ಯ ತೆರಿಗೆಗೆ ಬಾಧ್ಯವಾಗುತ್ತಿದ್ದವು, ಬಾಧ್ಯವಾಗುತ್ತವೆ, ಬಾಧ್ಯವಾಗಿವೆ ಎಂಬುದಾಗಿ, ಅಥವಾ (ಸದರಿ ಪದ್ಧತಿಗೆ ಅನುಗುಣವಾಗಿ ರಾಜ್ಯ ತೆರಿಗೆಯು ವಿಧಿಸದಿರುವ, ಅಥವಾ ವಿಧಿಸುತ್ತಿರುವ, ವಿಧಿಸಿದ ರಾಜ್ಯ ತೆರಿಗೆಯಿಂದ ಹೆಚ್ಚಿನ ಮೊತ್ತದ ತೆರಿಗೆಗೆ ಬಾಧ್ಯವಾಗುತ್ತಿದ್ದವು, ಬಾಧ್ಯವಾಗುತ್ತವೆ, ಬಾಧ್ಯವಾಗಿವೆ ಎಂಬುದಾಗಿ, ಸರ್ಕಾರವು. ಮನಗಂಡರೆ, ಪರಿಷತ್ತಿನ ಶಿಫಾರಸ್ಸುಗಳ ಮೇರೆಗೆ, ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ, ಅಂತಹ ಪೂರೈಕೆಗಳ ಮೇಲೆ ಸಂದಾಯ ಮಾಡಬೇಕಾದ ಸಂಪೂರ್ಣ ರಾಜ್ಯ ತೆರಿಗೆಯನ್ನು ಅಥವಾ ಸಂದರ್ಭಾನುಸಾರವಾಗಿ ಅಂತಹ ಪೂರೈಕೆಗಳ ಮೇಲೆ ಮಾಡಿದ ಹೆಚ್ಚಿನ ತೆರಿಗೆಯನ್ನು, ಆದರೆ ಸದರಿ ಪದ್ಧತಿಗೆ ಅನುಗುಣವಾಗಿ ವಿಧಿಸದಿರುವ ಅಥವಾ ವಿಧಿಸುತ್ತಿರುವ, ವಿಧಿಸಿದ ಪೂರೈಕೆಗಳಿಗೆ.. ಸಂಂಬಂಧಿಸಿದಂಂತೆ ಸಂದಾಯ ಮಾಡಬೇಕಾದ ಅಗತ್ಯವಿಲ್ಲವೆಂದು ನಿರ್ದೇಶಿಸಬಹುದು.”.