ಮೂಲ ಅಧಿನಿಯಮದ ಪ್ರಕರಣ 16ರಲ್ಲಿ, 2017ರ ಜುಲೈ, !ನೇ ದಿನಾಂಂಕದಿಂದ ಜಾರಿಗೆ ಬರುವಂತೆ ಉಪ-ಪ್ರಕರಣ (4ರ ನಂತರ, ಈ ಕೆಳಕಂಡ ಉಪ- ಪ್ರಕರಣಗಳನ್ನು ಸೇರಿಸತಕ್ಕದ್ದು, ಅವುಗಳೆಂದರೆ:-
“(5) ಉಪ-ಪ್ರಕರಣ (4ರಲ್ಲಿ ಏನೇ ಒಳಗೊಂಡಿದ್ದರೂ, 2017-18, 2018-19, 2019-20 ಮತ್ತು 2020-21ರ ಹಣಕಾಸು ವರ್ಷಗಳಿಗೆ ಸರಕುಗಳ ಅಥವಾ ಸೇವೆಗಳ ಅಥವಾ ಅವುಗಳೆರಡರ ಪೂರೈಕೆಗಾಗಿ ಒಂದು ಬೆಲೆಪಟ್ಟೆ ಅಥವಾ ಖರ್ಚು ಚೀಟಿಗೆ ಸಂಬಂಧಿಸಿದಂತೆ, ನೋಂ೦ದಾಯಿತ ವ್ಯಕ್ತಿಯು ಪ್ರಕರಣ 39ರ ಅಡಿಯಲ್ಲಿ ಯಾವುದೇ ರಿಟರ್ನ್ನನ್ನು 2021ರ ನವೆಂಬರ್ಮೂವತ್ತರದಿನಾಂಕದೊಳಗೆ ಸಲ್ಲಿಸಿದ್ದರೆ, ಹೂಡುವಳಿ ತೆರಿಗೆಯ ಜಮೆಯನ್ನು ತೆಗೆದುಕೊಳ್ಳಲು ಅರ್ಹನಾಗಿರತಕ್ಕದ್ದು.
(6) ಪ್ರಕರಣ 29ರ ಅಡಿಯಲ್ಲಿ ನೋಂದಾಯಿತ ವ್ಯಕ್ತಿಯ ನೋಂದಣಿಯು ವಜಾಗೊಂಡಿದ್ದರೆ ಮತ್ತು ತರುವಾಯವಾಗಿ ಪ್ರಕರಣ 30ರ ಅಡಿಯಲ್ಲಿ ನೋಂದಣಿ ರದೃತಿಯನ್ನು ಯಾವುದೇ ಆದೇಶದಿಂದ ಹಿಂಪಡೆದಿರುವುದಾಗಲಿ ಅಥವಾ ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣ ಅಥವಾ ನ್ಯಾಯಾಲಯದಿಂದ ಮಾಡಿದ ಯಾವುದೇ ಆದೇಶದ ಅನುಸಾರವಾಗಿ ಮತ್ತು ಒಂದು ಬೆಲೆಪಟ್ಟಿ ಅಥವಾ ಖರ್ಚು ಚೀಟಿಗೆ ಸಂಂಬಂಧಿಸಿದಂತೆ ಹೂಡುವಳಿ ತೆರಿಗೆ ಜಮೆ ಪಡೆಯುವುದನ್ನು ನೋಂದಣಿ ರದ್ದತಿಯ ಆದೇಶದ ದಿನಾಂಕದಂದು ಉಪ-ಪ್ರಕರಣ (4)ರ ಅಡಿಯಲ್ಲಿ ನಿರ್ಬಂಧಿಸಲಾಗಿಲ್ಲದಿದ್ದರೆ, ಸದರಿ ವ್ಯಕ್ತಿಯು,ಪ್ರಕರಣ 39ರ ಅಡಿಯಲ್ಲಿ.-
(i) ಒಂದು ರಿಟರ್ನ್ನನ್ನು, ಅಂತಹ 23383, ಅಥವಾ ಖರ್ಚು ಚೀಟಿಗೆ ಸಂಬಂಧಿಸಿದ ಹಣಕಾಸು ವರ್ಷದ ನಂತರದ ನವೆಂಬರ್ ಮೂವತ್ತನೇ ದಿನಾಂಕದವರೆಗೆ ಸಲ್ಲಿಸಿದ್ದರೆ ಅಥವಾ ಸಂಬಂಧಿತ ವಾರ್ಷಿಕ ರಿಟರ್ನ್ನನ್ನು ಸಲ್ಲಿಸಿರುವುದು, ಇವುಗಳಲ್ಲಿ ಯಾವುದು ಮೊದಲೋ ಅದು; ಅಥವಾ (ii) ನೋಂದಣಿ ರದ್ದತಿಯ ದಿನಾಂಕದಿಂದ ಅಥವಾ ನೋಂದಣಿ ರದ್ದಶಿಯ ದಿನಾಂಕದ ಪರಿಣಾಮಕಾರಿ ದಿನಾಂಕದ ಅವಧಿಗೆ, ಸಂದರ್ಭಾನುಸಾರವಾಗಿ, ನೋಂದಣಿ ರದೃ್ಧತಿಯ ಹಿಂಪಡೆಯುವಿಕೆಯ ಆದೇಶದ ದಿನಾಂಕವರೆಗೆ, ಅಂತಹ ರಿಟರ್ನ್ನನ್ನು ನೋಂದಣಿ ರದ್ದತಿಯ ಹಿಂಪಡೆಯುವಿಕೆಯ ಆದೇಶದ ದಿನಾಂಂಕದಿಂದ ಮೂವತ್ತು ದಿನದೊಳಗೆ ಸಲ್ಲಿಸಿದ್ದರೆ, ಇವುಗಳಲ್ಲಿ ಯಾವುದು ನಂತರವೋ ಅದು,ಅಂತಹ ಬೆಲೆಪಟ್ಟಿ ಅಥವಾ ಖರ್ಚು ಚೀಟಿಗೆ ಸಂಬಂಧಿಸಿದ ಸರಕುಗಳ ಅಥವಾ ಸೇವೆಗಳ ಅಥವಾ ಅವುಗಳೆರಡರ ಪೂರೈಕೆಯ ಮೇಲೆ ಹೂಡುವಳಿ ತೆರಿಗೆ ಜಮೆಯನ್ನು ಪಡೆಯಲು ಅರ್ಹನಾಗಿರತಕ್ಕದ್ದು.”.