ಮೂಲ ಅಧಿನಿಯಮದ ಪ್ರಕರಣ 54ರಲ್ಲಿ,-
(ಎ) ಉಪ-ಪ್ರಕರಣ (3ರಲ್ಲಿ, ಎರಡನೇ ಪರಂತುಕವನ್ನು ಬಿಟ್ಟುಬಿಡತಕ್ಕದ್ದು;
(ಬಿ) ಉಪ-ಪ್ರಕರಣ 14ರ ನಂತರ ಮತ್ತು ವಿವರಣೆಯ ಮೊದಲು, ಈ ಕೆಳಕಂಡ ಉಪ- ಪ್ರಕರಣವನ್ನು ಸೇರಿಸತಕ್ಕದ್ದು, ಅಂದರೆ:-
“(15) ಈ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಯಾವ ಸರಕುಗಳ ಶೂನ್ಯ ದರದ ಪೂರೈಕೆಗಳು ರಫ್ತು ಸುಂಕಕ್ಕೆ ಒಳಪಟ್ಟಿದ್ದರೆ, ಅಂತಹ ಶೂನ್ಯ ದರದ ಸರಕುಗಳ ಪೂರೈಕೆಗಳಿಂದಾಗಿ ಬಳಕೆಯಾಗದ ಹೂಡುವಳಿ ತೆರಿಗೆ ಜಮೆಯ ಅಥವಾ ಶೂನ್ಯ ದರದ ಸರಕುಗಳ ಪೂರೈಕೆಯ ಮೇಲೆ ಸಂದಾಯ ಮಾಡಿದ ಏಕೀಕೃತ ತೆರಿಗೆಯ ಮರುಪಾವತಿಯನ್ನು ಅನುಮತಿಸತಕ್ಕದ್ದಲ್ಲ.”. 17. ಪ್ರಕರಣ 61ರ ತಿದ್ದುಪಡಿ. ಮೂಲ ಅಧಿನಿಯಮದ ಪ್ರಕರಣ 61ರ ಉಪ-ಪ್ರಕರಣ (3ರಲ್ಲಿ, “ಪ್ರಕರಣ 73 ಅಥವಾ ಪ್ರಕರಣ 740” DOW ಪದಗಳು ಮತ್ತು ಅಂಕಿಗಳ ನಂತರ “ಅಥವಾ ಪ್ರಕರಣ 74ಎರ” DOW ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು. 18. ಪ್ರಕರಣ 62ರ ತಿದ್ದುಪಡಿ.. ಮೂಲ ಅಧಿನಿಯಮದ ಪ್ರಕರಣ 62ರ ಉಪ-ಪ್ರಕರಣ (1)ರಲ್ಲಿ, “ಪ್ರಕರಣ 73 ಅಥವಾ ಪ್ರಕರಣ 74ರಲ್ಲಿ” ಎಂಬ ಪದಗಳು ಮತ್ತು wosny ನಂತರ “ಅಥವಾ ಪ್ರಕರಣ 14ಎ ರಲ್ಲಿ” ಎಂಬ ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು.