ಈ ಮುಂದಿನವರು ವಿಶ್ವವಿದ್ಯಾಲಯದ ಅಧಿಕಾರಿಗಳಾಗಿರತಕ್ಕದ್ದು, ಎಂದರೆ:- (i) ಸಂದರ್ಶಕರು; (ii) ಕುಲಾಧಿಪತಿಗಳು; (iii) ಕುಲಪತಿಗಳು; (iv) ಸಹಕುಲಪತಿಗಳು; (v) ಕುಲಸಚಿವರು; (vi) ಹಣಕಾಸು ಅಧಿಕಾರಿ; ಮತ್ತು (vii) ಶಾಸನದ ಮೂಲಕ ವಿಶ್ವವಿದ್ಯಾಲಯದ ಅಧಿಕಾರಿಗಳೆಂದು ಘೋಷಿಸಬಹುದಾದಂಥ ಇತರ ಅಧಿಕಾರಿಗಳು.