ಈ ಮುಂದಿನವರು ವಿಶ್ವವಿದ್ಯಾಲಯದ ಅಧಿಕಾರಿಗಳಾಗಿರತಕ್ಕದ್ದು, ಎಂದರೆ:-
(i) ಸಂದರ್ಶಕರು;
(ii) ಕುಲಾಧಿಪತಿಗಳು;
(iii) ಕುಲಪತಿಗಳು;
(iv) ಸಹಕುಲಪತಿಗಳು;
(v) ಕುಲಸಚಿವರು;
(vi) ಹಣಕಾಸು ಅಧಿಕಾರಿ; ಮತ್ತು
(vii) ಶಾಸನದ ಮೂಲಕ ವಿಶ್ವವಿದ್ಯಾಲಯದ ಅಧಿಕಾರಿಗಳೆಂದು ಘೋಷಿಸಬಹುದಾದಂಥ ಇತರ ಅಧಿಕಾರಿಗಳು.
(1) ಕುಲಾಧಿಪತಿಯವರನ್ನು ಪ್ರಾಯೋಜಕ ಸಂಸ್ಥೆಯು ನೇಮಿಸತಕ್ಕದ್ದು.
(2) ಪ್ರಾಯೋಜಕ ಸಂಸ್ಥೆಯ ಹಾಲಿ ಅಧ್ಯಕ್ಷರು ಮೊದಲನೇ ಕುಲಾಧಿಪತಿಗಳಾಗಿರತಕ್ಕದ್ದು, ಅವರು ತಮ್ಮ ಜೀವನಪರ್ಯಂತ ಕುಲಾಧಿಪತಿಗಳಾಗಿ ಪದಧಾರಣ ಮಾಡಿರತಕ್ಕದ್ದು.
(3) ತದನಂತರದ ಕುಲಾಧಿಪತಿಗಳು, ಅಂಥ ನೇಮಕಾತಿಯನ್ನು ಪರಿಗಣಿಸುವ ಸಂದರ್ಭದಲ್ಲಿ ಪ್ರಾಯೋಜಕ ಸಂಸ್ಥೆಯು ನಿರ್ಧರಿಸಬಹುದಾದಂತೆ, ಪ್ರಾಯೋಜಕ ಸಂಸ್ಥೆಯ ಅಧ್ಯಕ್ಷರಾಗಿರತಕ್ಕದ್ದು ಅಥವಾ ಪ್ರಾಯೋಜಕ ಸಂಸ್ಥೆಯ ನಿರ್ದೇಶಕರೂ ಸೇರಿದಂತೆ ಇತರ ವ್ಯಕ್ತಿಯಾಗಿರತಕ್ಕದ್ದು.
(4) ಹಾಗೆ ನೇಮಕಗೊಂಡ ತದನಂತರದ ಕುಲಾಧಿಪತಿಗಳು ಪ್ರಾಯೋಜಕ ಸಂಸ್ಥೆಯು ನಿರ್ಧರಿಸಬಹುದಾದಂತೆ ಪದಧಾರಣ ಮಾಡತಕ್ಕದ್ದು.
(5) ಕುಲಾಧಿಪತಿಗಳು ಈ ಅಧ್ಯಾದೇಶದ ಅಥವಾ ಅದರಡಿಯಲ್ಲಿ ರಚಿಸಿದ ಶಾಸನಗಳ ಅಡಿಯಲ್ಲಿ ಅವರಿಗೆ ಪ್ರದಾನ ಮಾಡಬಹುದಾದಂಥ ಅಧಿಕಾರಗಳನ್ನು ಹೊಂದಿರತಕ್ಕದ್ದು, ಅವುಗಳಲ್ಲಿ ಈ ಮುಂದಿನ ಅಧಿಕಾರಗಳು ಒಳಗೊಂಡಿರತಕ್ಕದ್ದು, ಎಂದರೆ:-
(i) ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುವುದು;
(ii) ಸಂದರ್ಶಕರ ಅನುಪಸ್ಥಿತಿಯಲ್ಲಿ ವಿಶ್ವವಿದ್ಯಾಲಯದ ಎಲ್ಲಾ ಘಟಿಕೋತ್ಸವಗಳಲ್ಲಿ ಅಧ್ಯಕ್ಷತೆಯನ್ನು ವಹಿಸುವುದು;
(iii) ವಿಶ್ವವಿದ್ಯಾಲಯದ ಪ್ರಬಂಧಕ ಮಂಡಳಿಯ ಒಬ್ಬ ಸದಸ್ಯ ಮತ್ತು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವುದು ಹಾಗೂ ಆಡಳಿತ ಮಂಡಳಿಯ ಎಲ್ಲಾ ಸಭೆಗಳಲ್ಲಿ ಹಾಜರಾಗುವುದು;
(iv) ಈ ಅಧ್ಯಾದೇಶ ಮತ್ತು ಶಾಸನಗಳ ಉಪಬಂಧಗಳಿಗೆ ಅನುಸಾರವಾಗಿ ಕುಲಪತಿಗಳನ್ನು ನೇಮಿಸುವುದು ಅಥವಾ ಪುನರ್ನೇಮಿಸುವುದು ಅಥವಾ ಅವರ ನೇಮಕಾತಿ ಅಂತ್ಯಗೊಳಿಸುವುದು;
(v) ಈ ಅಧ್ಯಾದೇಶದ 15ನೇ ಪ್ರಕರಣದ (2)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಿದ ನಾಮನಿರ್ದೇಶಕ ಸಮಿತಿಯ ಸದಸ್ಯರಾಗಿ ಒಬ್ಬ ವ್ಯಕ್ತಿಯನ್ನು ನಾಮನಿರ್ದೇಶನ ಮಾಡುವುದು;
(vi) ಸಹಕುಲಪತಿಗಳು, ಡೀನ್, ಕುಲಸಚಿವರು ಹಾಗೂ ಹಣಕಾಸು ಅಧಿಕಾರಿಗಳ ನೇಮಕಾತಿಯನ್ನು ಪೂರ್ವಾನುಮೋದಿಸುವುದು;
(vii) ಪ್ರಬಂಧಕ ಮಂಡಳಿಯ ಸದಸ್ಯರನ್ನಾಗಿ ಇಬ್ಬರು ಶಿಕ್ಷಣ ತಜ್ಞರನ್ನು ನಾಮನಿರ್ದೇಶಿಸುವುದು;
(viii) ಮೊದಲ ಸಹಕುಲಪತಿಗಳು ಮತ್ತು ಹಣಕಾಸು ಅಧಿಕಾರಿಗಳನ್ನು ನೇಮಿಸುವುದು;
(ix) ಮೊದಲ ಆಡಳಿತ ಮಂಡಳಿ, ಹಣಕಾಸು ಸಮಿತಿ, ಸಂಶೋಧನಾ ಪರಿಷತ್ತು, ದೂರ ಶಿಕ್ಷಣ ಸಮಿತಿ ಹಾಗೂ ಪ್ರಶಿಕ್ಷಣ ಪರಿಷತ್ತುಗಳನ್ನು ರಚಿಸುವುದು;
(x) ಈ ಅಧ್ಯಾದೇಶದಲ್ಲಿ ಉಪಬಂಧಿಸಿದ ವಿಧಾನದಲ್ಲಿ ಕಾರ್ಯಸೂಚಿ ವಿಷಯಗಳನ್ನು ಪೂರ್ವಾನುಮೋದಿಸುವುದು;
(xi) ಈ ಅಧ್ಯಾದೇಶದಲ್ಲಿ ಉಪಬಂಧಿಸಿದ ವಿಧಾನದಲ್ಲಿ (ಪ್ರಬಂಧಕ ಮಂಡಳಿಯ ಸಭೆಯಲ್ಲಿ ಉಂಟಾದ ಸಂಘರ್ಷಗಳನ್ನು ಹೊರತುಪಡಿಸಿ) ಸಂಘರ್ಷಗಳನ್ನು ಪರಿಹರಿಸುವುದು.
(6) ಪದಾಧಿಕಾರಿ ಅಥವಾ ಪದಾಧಿಕಾರಿಗಳು ಅಥವಾ ಸಂಸ್ಥೆ ಅಥವಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯದ ಯಾವುದೇ ಇತರ ಪದಾಧಿಕಾರಿ ಅಥವಾ ಸಂಸ್ಥೆಗಳ ನಡುವೆ ಸಂಘರ್ಷಗಳು ಉಂಟಾದಲ್ಲಿ ಆಗ ಆ ವಿವಾದವನ್ನು ಕುಲಾಧಿಪತಿಯವರ ಪರ್ಯಾಲೋಚನೆಗೆ ಕಳುಹಿಸತಕ್ಕದ್ದು ಮತ್ತು ಅಂಥ ವಿವಾದದ ಸಂದರ್ಭದಲ್ಲಿ ಕುಲಾಧಿಪತಿಯವರ ತೀರ್ಮಾನವು ಅಂತಿಮವಾಗಿರತಕ್ಕದ್ದು ಮತ್ತು ಅದಕ್ಕೆ ವಿಶ್ವವಿದ್ಯಾಲಯವು ಬದ್ಧವಾಗಿರತಕ್ಕದ್ದು.
(1) ಕರ್ನಾಟಕದ ರಾಜ್ಯಪಾಲರು ವಿಶ್ವವಿದ್ಯಾಲಯದ ಸಂದರ್ಶಕರಾಗಿರತಕ್ಕದ್ದು.
(2) ಸಂದರ್ಶಕರು ತಾವು ಹಾಜರಿದ್ದಾಗ ಪದವಿಗಳನ್ನು ಮತ್ತು ಡಿಪ್ಲೋಮಗಳನ್ನು ಪ್ರದಾನ ಮಾಡಲು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅಧ್ಯಕ್ಷತೆಯನ್ನು ವಹಿಸತಕ್ಕದ್ದು.
(3) ಸಂದರ್ಶಕರು ಈ ಮುಂದಿನ ಅಧಿಕಾರಗಳನ್ನು ಹೊಂದಿರತಕ್ಕದ್ದು, ಎಂದರೆ:-
(i) ವಿಶ್ವವಿದ್ಯಾಲಯದ ವ್ಯವಹಾರಗಳಿಗೆ ಸಂಬಂಧಿಸಿದಂತೆ, ಯಾವುದೇ ಪತ್ರ ಅಥವಾ ಮಾಹಿತಿಯನ್ನು ತರಿಸಿಕೊಳ್ಳುವುದು.
(ii) ಸಂದರ್ಶಕರು, ತಾವು ಸ್ವೀಕರಿಸಿದ ಮಾಹಿತಿಯ ಆಧಾರದ ಮೇಲೆ ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರವು ಮಾಡಿದ ಯಾವುದೇ ಆದೇಶ, ನಡೆಸಿದ ವ್ಯವಹರಣೆಗಳು ಅಥವಾ ಕೈಗೊಂಡ ತೀರ್ಮಾನಗಳು ಈ ಅಧ್ಯಾದೇಶ, ವಿನಿಯಮಗಳು, ಪರ್ಯಾದೇಶಗಳು ಅಥವಾ ನಿಯಮಗಳಿಗೆ ಪೂರಕವಾಗಿಲ್ಲವೆಂದು ಮನಗಂಡರೆ ಅವರು ವಿಶ್ವವಿದ್ಯಾಲಯದ ಹಿತಾಸಕ್ತಿಯಿಂದ ತಾವು ಸೂಕ್ತವೆಂದು ಭಾವಿಸಬಹುದಾದಂಥ ನಿರ್ದೇಶನಗಳನ್ನು ಹೊರಡಿಸಬಹುದು ಮತ್ತು ಹಾಗೆ ಹೊರಡಿಸಿದ ನಿರ್ದೇಶನಗಳನ್ನು ಸಂಬಂಧಪಟ್ಟವರೆಲ್ಲರೂ ಪಾಲಿಸತಕ್ಕದ್ದು.
(1) (2)ನೇ ಉಪಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ ನಾಮನಿರ್ದೇಶಕ ಸಮಿತಿಯು ಶಿಫಾರಸ್ಸು ಮಾಡಿದ ಮೂರು ವ್ಯಕ್ತಿಗಳ ಪೈಕಿ ಒಬ್ಬರನ್ನು ಕುಲಪತಿಗಳಾಗಿ, ಶಾಸನಗಳಲ್ಲಿ ನಿಯಮಿಸಬಹುದಾದಂಥ ನಿಬಂಧನೆಗಳು ಮತ್ತು ಷರತ್ತುಗಳ ಮೇಲೆ ಕುಲಾಧಿಪತಿಯವರು ನೇಮಿಸತಕ್ಕದ್ದು.
(2) (1)ನೇ ಉಪಪ್ರಕರಣದಲ್ಲಿ ಹೇಳಿರುವ ನಾಮನಿರ್ದೇಶಕ ಸಮಿತಿಯಲ್ಲಿ ಈ ಮುಂದಿನ ವ್ಯಕ್ತಿಗಳು ಇರತಕ್ಕದ್ದು, ಎಂದರೆ.:-
(i) ಕುಲಾಧಿಪತಿಯವರು ನಾಮನಿರ್ದೇಶಿಸಿದ ಒಬ್ಬ ವ್ಯಕ್ತಿ;
(ii) ಪ್ರಬಂಧಕ ಮಂಡಳಿಯು ನಾಮ ನಿರ್ದೇಶಿಸಿದ ಇಬ್ಬರು ವ್ಯಕ್ತಿಗಳು, ಇವರಲ್ಲಿ ಒಬ್ಬರನ್ನು ಪ್ರಬಂಧಕ ಮಂಡಳಿಯು ಸಮಿತಿಯ ಸಂಚಾಲಕರೆಂದು ನಾಮನಿರ್ದೇಶಿಸತಕ್ಕದ್ದು.
(3) ನಾಮನಿರ್ದೇಶಕ ಸಮಿತಿಯು ಅರ್ಹತೆಯ ಆಧಾರದ ಮೇಲೆ ಕುಲಪತಿಯ ಹುದ್ದೆಗೆ ಸೂಕ್ತ ವ್ಯಕ್ತಿಗಳೆಂದು ಮೂರು ವ್ಯಕ್ತಿಗಳ ಹೆಸರನ್ನು ಶಿಫಾರಸ್ಸು ಮಾಡತಕ್ಕದ್ದು ಮತ್ತು ಅದನ್ನು ಪ್ರತಿಯೊಬ್ಬ ವ್ಯಕ್ತಿಯ ವಿದ್ಯಾರ್ಹತೆ ಮತ್ತಿತರ ವಿಶಿಷ್ಟ ಪ್ರಶಸ್ತಿಗಳನ್ನು ತಿಳಿಸುವ ಒಂದು ಸಂಕ್ಷಿಪ್ತ ವರದಿಯೊಂದಿಗೆ ಕುಲಾಧಿಪತಿಯವರಿಗೆ ಕಳುಹಿಸತಕ್ಕದ್ದು.
(4) ಕುಲಪತಿಯವರು ವಿಶ್ವವಿದ್ಯಾಲಯದ ಪ್ರಧಾನ ಕಾರ್ಯನಿರ್ವಾಹಕ ಮತ್ತು ಶೈಕ್ಷಣಿಕ ಅಧಿಕಾರಿಯಾಗಿರತಕ್ಕದ್ದು ಮತ್ತು ವಿಶ್ವವಿದ್ಯಾಲಯದ ವ್ಯವಹಾರಗಳ ಬಗ್ಗೆ ಸಾಮಾನ್ಯ ಮೇಲ್ವಿಚಾರಣೆ ಮತ್ತು ನಿಯಂತ್ರಣವನ್ನು ಚಲಾಯಿಸತಕ್ಕದ್ದು ಹಾಗೂ ವಿಶ್ವವಿದ್ಯಾಲಯದ ಪ್ರಾಧಿಕಾರಗಳ ತೀರ್ಮಾನಗಳನ್ನು ಜಾರಿಗೊಳಿಸತಕ್ಕದ್ದು.
(5) ಶಿಕ್ಷಕರ ನೇಮಕಾತಿಯನ್ನು ಹೊರತುಪಡಿಸಿ ಕೂಡಲೇ ಕ್ರಮವನ್ನು ಕೈಗೊಳ್ಳಬೇಕಾದ ತುರ್ತು ಸ್ವರೂಪದ ಯಾವುದೇ ಇತರ ವಿಷಯಗಳಲ್ಲಿ ಮತ್ತು ಅದನ್ನು ಈ ಅಧ್ಯಾದೇಶದ ಅಡಿಯಲ್ಲಿ ಅಥವಾ ವಿಶ್ವವಿದ್ಯಾಲಯವು ಇದಕ್ಕಾಗಿ ಅಧಿಕೃತಗೊಳಿಸಿದ್ದ ಯಾಮೊಬ್ಬ ಅಧಿಕಾರಿ ಅಥವಾ ಪ್ರಾಧಿಕಾರ ಅಥವಾ ಇತರ ನಿಕಾಯವು ಕೂಡಲೇ ಕ್ರಮಕೈಗೊಳ್ಳುವುದು ಸಾಧ್ಯವಿರದಿರುವಾಗ ಕುಲಪತಿಯವರು ತಾನು ಸೂಕ್ತವೆಂದು ಭಾವಿಸಬಹುದಾದಂತಹ ಕ್ರಮವನ್ನು ಕುಲಾಧಿಪತಿಯವರ ಲಿಖಿತ ಪೂರ್ವಾನುಮೋದನೆಯನ್ನು ಪಡೆದು ಕೈಗೊಳ್ಳತಕ್ಕದ್ದು.
(6) ಕುಲಪತಿಯವರು ಶಾಸನಗಳು ಅಥವಾ ನಿಯಮಗಳಲ್ಲಿ ಹೇಳಲಾದಂಥ ಇತರ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಹಾಗೂ ಅಂಥ ಇತರ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು.
(7) ಕುಲಪತಿಯವರ ಸೇವೆಗಳನ್ನು ಪ್ರಬಂಧಕ ಮಂಡಳಿಯ ಅನುಮೋದನೆಯೊಂದಿಗೆ, ಕುಲಾಧಿಪತಿಯು ಸಹಜ ನ್ಯಾಯದ ತತ್ವಗಳನ್ನು ಅನುಸರಿಸಿದ ನಂತರ ಮತ್ತು ಶಿಸ್ತಿನ ಆಧಾರದ ಮೇಲೆ ಅಂತ್ಯಗೊಳಿಸುವ ಸಂದರ್ಭವೂ ಸೇರಿದಂತೆ ಪ್ರಕರಣದ ಬಗ್ಗೆ ಕುಲಪತಿಯು ತನ್ನ ಅಹವಾಲನ್ನು ಹೇಳಿಕೊಳ್ಳಲು ಸೂಕ್ತ ಅವಕಾಶವನ್ನು ನೀಡಿದ ತರುವಾಯ ಆತನ ಸೇವೆಯನ್ನು ಕುಲಾಧಿಪತಿಯವರು ಅಂತ್ಯಗೊಳಿಸಬಹುದು.
(8) ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸಂದರ್ಶಕರು ಮತ್ತು ಕುಲಾಧಿಪತಿಯವರು ಇಬ್ಬರೂ ಹಾಜರಿರದ ಸಂದರ್ಭದಲ್ಲಿ ಕುಲಪತಿಯವರು ಅಧ್ಯಕ್ಷತೆಯನ್ನು ವಹಿಸತಕ್ಕದ್ದು.