ಈ ಅಧ್ಯಾದೇಶದಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(1) “ಗೋಮಾಂಸ” ಎಂದರೆ ಯಾವುದೇ ರೂಪದಲ್ಲಿನ ಜಾನುವಾರು ಮಾಂಸ;
(2) “ಜಾನುವಾರು” ಎಂದರೆ ಎಲ್ಲಾ ವಯಸ್ಸಿನ ಆಕಳು, ಆಕಳ ಕರು, ಗೂಳಿ ಮತ್ತು ಎತ್ತು ಹಾಗೂ ಹದಿಮೂರು ವರ್ಷದೊಳಗಿನ ಕೋಣ ಅಥವಾ ಎಮ್ಮೆ;
(3) “ಸಕ್ಷಮ ಪ್ರಾಧಿಕಾರಿ” ಎಂದರೆ 3ನೇ ಪ್ರಕರಣದ ಅಡಿಯಲ್ಲಿ ನೇಮಿಸಿದ ಸಕ್ಷಮ ಪ್ರಾಧಿಕಾರಿ;
(4) “ಗೋ ಶಾಲೆ” ಎಂದರೆ ರಾಜ್ಯ ಅಥವಾ ಕೇಂದ್ರ ಕಾನೂನಿನ ಅಡಿಯಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯೊಂದಿಗೆ ಹಾಗೆ ನೋಂದಾಯಿಸಿದ ಜಾನುವಾರು ರಕ್ಷಣೆ ಮತ್ತು ಸಂರಕ್ಷಣೆಗಾಗಿ ಸ್ಥಾಪಿಸಿದ ಆಸರೆದಾಣ;
(5) “ಅಧಿಸೂಚನೆ” ಎಂದರೆ ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ಅಧಿಸೂಚನೆ;
(6) “ಆವರಣಗಳು” ಎಂದರೆ ಮತ್ತು ಯಾವುದೇ ಭೂಮಿ, ಆವರಣಗಳು, ನೌಕೆ ಅಥವಾ ವಾಹನವನ್ನು ಒಳಗೊಳ್ಳುವುದು;
(7) “ನಿಯಮಿಸಿದ” ಎಂದರೆ ಈ ಅಧ್ಯಾದೇಶದ ಅಡಿಯಲ್ಲಿ ರಚಿಸಿದ ನಿಯಮಗಳ ಮೂಲಕ ನಿಯಮಿಸಲಾದುದು; ಮತ್ತು
(8) “ಜಾನುವಾರು ಹತ್ಯೆ” ಎಂದರೆ ಯಾವುದೇ ವಿಧಾನದಿಂದ ಕೊಲ್ಲುವುದು ಮತ್ತು ಸಾಮಾನ್ಯವಾಗಿ ಸಾವಿಗೆ ಕಾರಣವಾಗುವ ದೈಹಿಕ ಹಾನಿಯ ಊನಗೊಳಿಸುವಿಕೆ ಮತ್ತು ಗಾಯಗೊಳಿಸುವಿಕೆಯನ್ನು ಒಳಗೊಳ್ಳುವುದು.