(1) ಯಾವುದೇ ಜಾನುವಾರುಗಳನ್ನು ರಾಜ್ಯದೊಳಗಿನ ಯಾವುದೇ ಸ್ಥಳದಿಂದ ರಾಜ್ಯದ ಹೊರಗೆ ಜಾನುವಾರು ಹತ್ಯೆಯ ಉದ್ದೇಶಕ್ಕಾಗಿ ಸಾಗಾಣಿಕೆ ಮಾಡತಕ್ಕದ್ದಲ್ಲ ಅಥವಾ ಸಾಗಾಣಿಕೆಗಾಗಿ ಕೊಡತಕ್ಕದ್ದಲ್ಲ ಅಥವಾ ಯಾವುದೇ ರೀತಿಯಲ್ಲಿ ಸಾಗಿಸುವಂತೆ ಮಾಡತಕ್ಕದ್ದಲ್ಲ:
ಪರಂತು ಸಕ್ಷಮ ಪ್ರಾಧಿಕಾರಿಯು ನಂಬಿಕಸ್ಥ ಕೃಷಿ ಅಥವಾ ಪಶುಸಂಗೋಪನೆ ಉದ್ದೇಶಗಳಿಗಾಗಿ ಜಾನುವಾರು ಸಾಗಾಣಿಕೆಗೆ ಪರವಾನಗಿಯನ್ನು (permit) ಹೊರಡಿಸಬಹುದು:
ಮತ್ತು ಪರಂತು ಪ್ರಾಣಿಗಳಿಗೆ ಕ್ರೌರ್ಯ ತಡೆ ಅಧಿನಿಯಮ, 1960ರ (1960ರ ಕೇಂದ್ರ ಅಧಿನಿಯಮ 59) ಅಡಿಯಲ್ಲಿ, ಕೇಂದ್ರ ಸರ್ಕಾರವು ಜಾನುವಾರು ಸಾಗಾಣಿಕೆಯನ್ನು ನಿರ್ವಹಿಸುವ ನಿಯಮಗಳಲ್ಲಿ ನಿಯಮಿಸಿದ ವಿಧಾನದಲ್ಲಿ ಜಾನುವಾರುಗಳನ್ನು ಸಾಗಾಣಿಕೆ ಮಾಡತಕ್ಕದ್ದು.
(2) (1)ನೇ ಪ್ರಕರಣದ ಅಡಿಯಲ್ಲಿ ಹೊರಡಿಸಿದ ಪರವಾನಗಿಯು ನಿಯಮಿಸಬಹುದಾದ ಅಂಥ ನಮೂನೆಯಲ್ಲಿ ಮತ್ತು ಅಂಥ ವಿಧಾನದಲ್ಲಿ ಹಾಗೂ ಅಂಥ ಶುಲ್ಕ ಪಾವತಿಗೊಳಪಟ್ಟು ಇರತಕ್ಕದ್ದು.