ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣೆ ಅಧಿನಿಯಮ, 1964ನ್ನು (1964ರ ಕರ್ನಾಟಕ ಅಧಿನಿಯಮ 35) ಈ ಮೂಲಕ ನಿರಸನಗೊಳಿಸಲಾಗಿದೆ:
ಪರಂತು ಕರ್ನಾಟಕ ಸಾಮಾನ್ಯ ಖಂಡಗಳ ಅಧಿನಿಯಮ, 1899ರ (1899ರ ಕರ್ನಾಟಕ ಅಧಿನಿಯಮ III) 6ನೇ ಪ್ರಕರಣದ ಉಪಬಂಧಗಳು ಸದರಿ ಅಧಿನಿಯಮಿತಿಯ ನಿರಸನಕ್ಕೆ ಸಂಬಂಧಿಸಿದಂತೆ ಅನ್ವಯವಾಗತಕ್ಕದ್ದು ಹಾಗೂ ಸದರಿ ಅಧಿನಿಯಮದ 8 ಮತ್ತು 24ನೇ ಪ್ರಕರಣಗಳು ಈ ಅಧ್ಯಾದೇಶದ ಮೂಲಕ ಸದರಿ ಅಧಿನಿಯಮಿತಿಯು ನಿರಸನಗೊಂಡು ಮತ್ತು ಪ್ರಖ್ಯಾಪಿಸಿದಂತೆ ಅನ್ವಯವಾಗತಕ್ಕದ್ದು.
ಮತ್ತು ಪರಂತು, ನಿರಸನಗೊಂಡ ಅಧಿನಿಯಮದ ಅಡಿಯಲ್ಲಿ ಮಾಡಿದ ಅಥವಾ ಹೊರಡಿಸಿದ ಯಾವುದೇ ನಿಯಮ, ಅಧಿಸೂಚನೆ, ಆದೇಶ ಅಥವಾ ನೇಮಕಾತಿಯು ಈ ಅಧ್ಯಾದೇಶದ ಸಂವಾದಿ ಉಪಬಂಧಗಳ ಅಡಿಯಲ್ಲಿ ಅವುಗಳನ್ನು ಮಾಡಿದರೆ ಅಥವಾ ಹೊರಡಿಸಿದರೆ ಅಥವಾ ನೇಮಕ ಮಾಡಿದರೆ ಹೇಗೋ ಹಾಗೆ, ಈ ಅಧ್ಯಾದೇಶದ ಉಪಬಂಧಗಳೊಂದಿಗೆ ಅವುಗಳು ಅಸಂಗತವಾಗದಷ್ಟರ ಮಟ್ಟಿಗೆ, ಈ ಅಧ್ಯಾದೇಶ ಅಡಿಯಲ್ಲಿ ಅವುಗಳನ್ನು ರದ್ದುಗೊಳಿಸುವ, ಮಾರ್ಪಡಿಸುವ ಅಥವಾ ಹೊಸ ನಿಯಮಗಳು, ಅಧಿಸೂಚನೆ, ಆದೇಶ ಅಥವಾ ನೇಮಕಾತಿಗಳನ್ನು ಮಾಡುವವರೆಗೆ ಜಾರಿಯಲ್ಲಿರತಕ್ಕದ್ದು ಹಾಗೂ ಮುಂದುವರೆಯತಕ್ಕದ್ದು.
ವಜೂಭಾಯಿವಾಲಾ ಕರ್ನಾಟಕದ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಕೆ. ದ್ವಾರಕನಾಥ್ ಬಾಬು)
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳು ಮತ್ತು ಶಾಸನ
ರಚನೆ ಇಲಾಖೆ.