ಯಾವುದೇ ಜಾನುವಾರು ಮತ್ತು ಆವರಣಗಳು ಹಾಗೂ ಸಾಮಗ್ರಿಗಳನ್ನು ಅಂಥ ಅಪರಾಧವನ್ನು ಎಸಗಲು ಬಳಸಿದಾಗ ಅಥವಾ ಬಳಸಲು ಉದ್ದೇಶಿಸಿದಾಗ ಮತ್ತು ಈ ಅಧ್ಯಾದೇಶದ ಉಪಬಂಧಗಳ ಅಡಿಯಲ್ಲಿ ಬಂಧಿಸಿದಾಗ, ಉಪ-ವಿಭಾಗೀಯ ದಂಡಾಧಿಕಾರಿಗಳು ಅಥವಾ 10ನೇ ಪ್ರಕರಣದ ಅಡಿಯಲ್ಲಿ ಮೇಲ್ಮನವಿಯನ್ನು ಆಲಿಸುವ ಸತ್ರ ನ್ಯಾಯಾಧೀಶರು, ಅಂಥ ಸ್ವತ್ತಿನ ಅಭಿರಕ್ಷೆ, ಸ್ವಾಧೀನ, ರವಾನೆ, ವಿಕ್ರಯ ಅಥವಾ ವಿತರಣೆಗೆ ಸಂಬಂಧಿಸಿದ ಆದೇಶಗಳನ್ನು ಮಾಡಲು ಅಧಿಕಾರವ್ಯಾಪ್ತಿಯನ್ನು ಹೊಂದಿರತಕ್ಕದ್ದು ಹಾಗೂ ಇತರ ಯಾವೊಬ್ಬ ಅಧಿಕಾರಿ ಅಥವಾ ನ್ಯಾಯಾಲಯ, ನ್ಯಾಯಾಧಿಕರಣ ಅಥವಾ ಪ್ರಾಧಿಕಾರವು ಅಧಿಕಾರ ವ್ಯಾಪ್ತಿಯನ್ನು ಹೊಂದಿರತಕ್ಕದ್ದಲ್ಲ.
Loading…