(1) ನಿಯಮಿಸಬಹುದಾದ ಅಂಥ ಷರತ್ತುಗಳಿಗೆ ಒಳಪಟ್ಟು ಈ ಅಧ್ಯಾದೇಶವು ಈ ಮುಂದಿನ ಸಂದರ್ಭಗಳಿಗೆ ಅನ್ವಯಿಸತಕ್ಕದ್ದಲ್ಲ.-
(ಎ) ರಾಜ್ಯ ಸರ್ಕಾರದಿಂದ ಸ್ಥಾಪಿಸಿದ, ನಡೆಸುತ್ತಿರುವ ಅಥವಾ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಲಸಿಕೆ ಸ್ರಾವ, ರಕ್ತ ಸಾರ ಅಥವಾ ಯಾವುದೇ ಪ್ರಾಯೋಗಿಕ ಅಥವಾ ಸಂಶೋಧನಾ ಉದ್ದೇಶದ ಮೇಲೆ ಯಾವುದೇ ಜಾನುವಾರನ್ನು ಕೊಯ್ದದ್ದು (operate) ಮಾಡಿದರೆ; ಅಥವಾ
(ಬಿ) ಯಾವುದೇ ಜಾನುವಾರು,-
(i) ಸಾರ್ವಜನಿಕ ಆರೋಗ್ಯದ ಹಿತಾಸಕ್ತಿಯಲ್ಲಿ ಜಾನುವಾರು ಹತ್ಯೆ ಅಗತ್ಯವಾಗಿರುವುದೆಂದು, ರಾಜ್ಯ ಸರ್ಕಾರವು ಅಧಿಕೃತಗೊಳಿಸಿದ ಪಶುವೈದ್ಯಾಧಿಕಾರಿಯು ಪ್ರಮಾಣಿಸಿದರೆ;
(ii) ಯಾವುದೇ ರೋಗದಿಂದ ಬಳಲುತ್ತಿದ್ದು, ಇತರ ಜಾನುವಾರುಗಳಿಗೆ ಸಾಂಕ್ರಾಮಿಕ ಮತ್ತು ಮಾರಕವೆಂದು ರಾಜ್ಯ ಸರ್ಕಾರವು ಅಧಿಕೃತಗೊಳಿಸಿದ ಪಶುವೈದ್ಯಾಧಿಕಾರಿಯು ಪ್ರಮಾಣಿಸಿದರೆ;
(ಸಿ) ಯಾವುದೇ ಜಾನುವಾರು ವಾಸಿಯಾಗದ ರೋಗದಿಂದ ಖಾಯಿಲೆಯಲ್ಲಿಯೇ ಅಂತ್ಯವಾಗುವ ಆಧಾರದ ಮೇಲೆ ಜಾನುವಾರು ಹತ್ಯೆ ನಡೆಸುವುದು ಅವಶ್ಯಕವೆಂದು ಪ್ರಮಾಣೀಕರಿಸಿದರೆ,-
(i) ಕೇಂದ್ರ ಸರ್ಕಾರದಲ್ಲಿ ರಕ್ಷಣಾ ಮಂತ್ರಾಲಯಕ್ಕೆ ಸೇರಿರುವ ಜಾನುವಾರಿನ ಸಂದರ್ಭದಲ್ಲಿ ಭಾರತೀಯ ಸೇನೆಯ ಪಶು ವೈದ್ಯಾಧಿಕಾರಿ;
(ii) ಯಾವುದೇ ಇತರ ಜಾನುವಾರಿನ ಸಂದರ್ಭದಲ್ಲಿ, ರಾಜ್ಯ ಸರ್ಕಾರದ ಪಶು ವೈದ್ಯಾಧಿಕಾರಿ ದರ್ಜೆಗೆ ಕಡಿಮೆಯಿಲ್ಲದ ಯಾವೊಬ್ಬ ಅಧಿಕಾರಿ.
(ಡಿ) ಸಕ್ಷಮ ಪ್ರಾಧಿಕಾರಿಯ ಪ್ರಮಾಣೀಕರಣದೊಂದಿಗೆ ಹದಿಮೂರು ವರ್ಷಗಳ ವಯಸ್ಸಿನ ಮೇಲಿರುವ ಎಮ್ಮೆ ಅಥವಾ ಕೋಣ.
(2) (1)ನೇ ಉಪ ಪ್ರಕರಣದ ಅಡಿಯಲ್ಲಿ ಜಾನುವಾರು ಹತ್ಯೆ ಮಾಡಲಾದ ಯಾವುದೇ ಜಾನುವಾರನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಪಶು ವೈದ್ಯಾಧಿಕಾರಿ ದರ್ಜೆಗೆ ಕಡಿಮೆಯಿಲ್ಲದ ಪಶು ವೈದ್ಯಾಧಿಕಾರಿಯ ಮೇಲ್ವಿಚಾರಣೆಯಲ್ಲಿ ವಿಲೇ ಮಾಡತಕ್ಕದ್ದು.