ಯಾವೊಬ್ಬ ವ್ಯಕ್ತಿಯು ಯಾವುದೇ ಜಾನುವಾರನ್ನು ರಾಜ್ಯದೊಳಗಿನ ಯಾವುದೇ ಸ್ಥಳದಿಂದ ರಾಜ್ಯದೊಳಗಿನ ಯಾವುದೇ ಇತರ ಸ್ಥಳಕ್ಕೆ ಜಾನುವಾರು ಹತ್ಯೆಗಾಗಿ ಸಾಗಾಣಿಕೆ ಮಾಡತಕ್ಕದ್ದಲ್ಲ ಅಥವಾ ಸಾಗಾಣಿಕೆಗಾಗಿ ಕೊಡತಕ್ಕದ್ದಲ್ಲ ಅಥವಾ ಯಾವುದೇ ರೀತಿಯಲ್ಲಿ ಸಾಗಿಸುವಂತೆ ಮಾಡತಕ್ಕದ್ದಲ್ಲ:
ಪರಂತು ಈ ಪ್ರಕರಣದ ಅಡಿಯಲ್ಲಿ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರವು ನಿಯಮಿಸಿದ ವಿಧಾನದಲ್ಲಿ ನಂಬಿಕಸ್ಥ ಕೃಷಿ ಅಥವಾ ಪಶು ಸಂಗೋಪನೆಯ ಉದ್ದೇಶಕ್ಕಾಗಿ ಯಾವುದೇ ಜಾನುವಾರು ಸಾಗಾಣಿಕೆಯನ್ನು ಅಪರಾಧವೆಂದು ಅರ್ಥೈಸತಕ್ಕದ್ದಲ್ಲ.