(1) 8ನೇ ಪ್ರಕರಣದ ಅಡಿಯಲ್ಲಿ ಹೊರಡಿಸಿದ ಯಾವುದೇ ಆದೇಶದಿಂದ ಬಾಧಿತನಾದ ಯಾರೇ ವ್ಯಕ್ತಿಯು, ಅಂಥ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ, ಅಂಥ ಆದೇಶವು ಯಾವ ಸ್ವತ್ತಿನ ಜಫ್ತಿಗೆ ಸಂಬಂಧಿಸಿದೆಯೋ ಆ ಸ್ವತ್ತು ಇರುವ ಪ್ರದೇಶದ ಮೇಲೆ ಅಧಿಕಾರವ್ಯಾಪ್ತಿಯನ್ನು ಹೊಂದಿರುವ ಸತ್ರ ನ್ಯಾಯಾಧೀಶರಿಗೆ ಮೇಲ್ಮನವಿ ಸಲ್ಲಿಸಬಹುದು.
(2) ಸತ್ರ ನ್ಯಾಯಾಧೀಶರು, ಬಾಧಿತ ವ್ಯಕ್ತಿಗಳಿಗೆ ಅಹವಾಲು ಹೇಳಿಕೊಳ್ಳುವ ಸೂಕ್ತ ಅವಕಾಶವನ್ನು ನೀಡಿದ ನಂತರ, ಅವರು ಸೂಕ್ತವೆಂದು ಭಾವಿಸಬಹುದಾದ ಅಂಥ ಆದೇಶವನ್ನು ಹೊರಡಿಸಬಹುದು.