(1) ಈ ಅಧ್ಯಾದೇಶವನ್ನು ಕರ್ನಾಟಕ ಲಾಟರಿಗಳ ಮೇಲೆ ತೆರಿಗೆ ಅಧ್ಯಾದೇಶ, 2003 ಎಂದು ಕರೆಯತಕ್ಕದ್ದು.
(2) ಇದು ಇಡೀ ಕರ್ನಾಟಕ ರಾಜ್ಯಕ್ಕೆ ವ್ಯಾಪ್ತವಾಗುತ್ತದೆ.
(3) ಇದು ರಾಜ್ಯಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸ ಬಹುದಾದಂಥ ದಿನಾಂಕದಂದು ಜಾರಿಗೆ ಬರತಕ್ಕದ್ದು.
ಕರ್ನಾಟಕ ಲಾಟರಿಗಳ ಮೇಲೆ ತೆರಿಗೆ ಅಧ್ಯಾದೇಶ, 2003, Finance Department
2003 · PDF page 3
Hover any section to copy its link or text, ask Copilot about it, or bookmark it.
ಈ ಅಧ್ಯಾದೇಶದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
ಕರ್ನಾಟಕ ರಾಜ್ಯ ಪತ್ರದ ಭಾಗ-IVಎ ವಿಶೇಷ ಪತ್ರಿಕೆ ಸಂಖ್ಯೆ: 1488 ದಿನಾಂಕ: 6.12.2003 ರಲ್ಲಿ ಪ್ರಕಟಿತ ಕಡತ ಸಂಖ್ಯೆ: ಸಂವ್ಯಶಾಇ 75 ಶಾಸನ 2003
(1) “ಸಹಾಯಕ ಆಯುಕ್ತ” ಎಂದರೆ, ಕರ್ನಾಟಕ ಮಾರಾಟ ತೆರಿಗೆ ಅಧಿನಿಯಮ 1957ರ (1957ರ ಕರ್ನಾಟಕ ಅಧಿನಿಯಮ 25) 3ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ ನೇಮಕ ಮಾಡಲಾದ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ;
(2) “ಆಯುಕ್ತ” ಎಂದರೆ, ಕರ್ನಾಟಕ ಮಾರಾಟ ತೆರಿಗೆ ಅಧಿನಿಯಮ 1957ರ (1957ರ ಕರ್ನಾಟಕ ಅಧಿನಿಯಮ 25) 3ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ ನೇಮಕಮಾಡಲಾದ ವಾಣಿಜ್ಯ ತೆರಿಗೆಗಳ ಆಯುಕ್ತ;
(3) “ಜಂಟಿ ಆಯುಕ್ತ” ಎಂದರೆ, ಕರ್ನಾಟಕ ಮಾರಾಟ ತೆರಿಗೆ ಅಧಿನಿಯಮ, 1957ರ (1957ರ ಕರ್ನಾಟಕ ಅಧಿನಿಯಮ 25) 3ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ ನೇಮಕಮಾಡಲಾದ ಜಂಟಿ ಆಯುಕ್ತ;
(4) “ಲಾಟರಿ” ಎಂದರೆ, ಭಾರತ ಸರ್ಕಾರವು ಅಥವಾ ಒಂದು ರಾಜ್ಯಸರ್ಕಾರವು ಅಥವಾ ಕೇಂದ್ರಾಡಳಿತ ಪ್ರದೇಶವು ಅಥವಾ ಭಾರತ ಸರ್ಕಾರದೊಡನೆ ದ್ವಿಪಕ್ಷೀಯ ಒಪ್ಪಂದ ಅಥವಾ ಒಡಂಬಡಿಕೆ ಮಾಡಿಕೊಂಡ ಯಾವುದೇ ದೇಶವು ವ್ಯವಸ್ಥೆಗೊಳಿಸಲಾದ ಲಾಟರಿ ಟಿಕೆಟ್ಗಳನ್ನು ಖರೀದಿಸುವ ಮೂಲಕ, ಬಹುಮಾನಗಳನ್ನು ಪಡೆಯಲು ಅದೃಷ್ಟ ಅವಕಾಶದಲ್ಲಿ ಭಾಗವಹಿಸುವ ವ್ಯಕ್ತಿಗಳಿಗೆ ಲಾಟರಿ ಎತ್ತುವ ಅಥವಾ ಅದೃಷ್ಟದ ಅವಕಾಶದಿಂದ ಬಹುಮಾನ ಹಂಚುವುದಕ್ಕಾಗಿ ನಡೆಸುವ ಯಾವುದೇ ಬಗೆಯ ಮತ್ತು ಯಾವುದೇ ಹೆಸರಿನಿಂದ ಕರೆಯಲಾಗುವ ಒಂದು ಕಾರ್ಯಯೋಜನೆ;
(5) “ಪ್ರವರ್ತಕ” ಎಂದರೆ, ಒಂದು ಲಾಟರಿಯನ್ನು ವ್ಯವಸ್ಥೆಗೊಳಿಸುತ್ತಿರುವ, ನಡೆಸುತ್ತಿರುವ ಅಥವಾ ಪ್ರವರ್ತಿಸುತ್ತಿರುವ ಭಾರತಸರ್ಕಾರ ಅಥವಾ ಒಂದು ರಾಜ್ಯ ಸರ್ಕಾರ ಅಥವಾ ಒಂದು ಕೇಂದ್ರಾಡಳಿತ ಪ್ರದೇಶ ಅಥವಾ ಯಾವುದೇ ದೇಶ ಮತ್ತು ಅದರಲ್ಲಿ ಅಂಥ ಸರ್ಕಾರ ಅಥವಾ ದೇಶವು ರಾಜ್ಯದಲ್ಲಿ ನೇರವಾಗಿ ಲಾಟರಿ ಟಿಕೆಟ್ಗಳನ್ನು ಮಾರಾಟಮಾಡದಿರುವಲ್ಲಿ ಅಂಥ ಸರ್ಕಾರವು ಅಥವಾ ದೇಶವು ತನ್ನ ಪರವಾಗಿ ರಾಜ್ಯದಲ್ಲಿ ಲಾಟರಿ ಟಿಕೆಟ್ಗಳನ್ನು ಮಾರಾಟಮಾಡುವುದಕ್ಕಾಗಿ ನೇಮಕಮಾಡಿರುವ ಯಾವೊಬ್ಬ ವ್ಯಕ್ತಿಯು ಒಳಗೊಳ್ಳುತ್ತಾನೆ;
(6) “ತೆರಿಗೆ” ಎಂದರೆ, ಈ ಅಧ್ಯಾದೇಶದ ಅಡಿಯಲ್ಲಿ ಲಾಟರಿಗಳ ಮೇಲೆ ವಿಧಿಸಲಾದ ಮತ್ತು ಸಂಗ್ರಹಿಸಲಾದ ತೆರಿಗೆ;
(7) “ವಾರ” ಎಂದರೆ, ಸೋಮವಾರದಿಂದ ಪ್ರಾರಂಭವಾಗಿ ಭಾನುವಾರದ ವರೆಗಿನ ಒಂದು ವಾರ;
(8) “ವರ್ಷ” ಎಂದರೆ, ಏಪ್ರಿಲ್ ಒಂದನೇ ದಿನಾಂಕದಿಂದ ಪ್ರಾರಂಭವಾಗುವ ವರ್ಷ;