(1) ಲಾಟರಿಗಳ ಮೇಲೆ ಈ ಮುಂದಿನ ದರಗಳಲ್ಲಿ ತೆರಿಗೆಯನ್ನು ವಿಧಿಸತಕ್ಕದ್ದು ಮತ್ತು ಸಂಗ್ರಹಿಸತಕ್ಕದ್ದು, ಎಂದರೆ:-
(ಎ) ಪ್ರತಿಯೊಂದು ಬಂಪರ್ ‘ಡ್ರಾ’ ಕ್ಕೆ ಒಂದು ಲಕ್ಷ ಐವತ್ತು ಸಾವಿರ ರೂಪಾಯಿಗಳು; ಮತ್ತು
(ಬಿ) ಯಾವುದೇ ಇತರ ‘ಡ್ರಾ’ದ ಸಂಬಂಧದಲ್ಲಿ ಒಂದು ಲಕ್ಷ ರೂಪಾಯಿಗಳು.
(2) (1)ನೇ ಪ್ರಕರಣದ ಅಡಿಯಲ್ಲಿ ವಿಧಿಸಲಾದ ತೆರಿಗೆಯನ್ನು ಪ್ರತಿಯೊಬ್ಬ ಪ್ರವರ್ತಕನು ಸಂದಾಯಮಾಡತಕ್ಕದ್ದು.