(1) 20ನೇ ಪ್ರಕರಣದ (1)ನೇ ಉಪ ಪ್ರಕರಣದ (ಎಫ್) ಖಂಡದ ಉಪಬಂಧಗಳ ಅಡಿಯಲ್ಲಿ ಲಗತ್ತಿಸಿದ ಮೊಹರನ್ನು ತೆಗೆದುಹಾಕುವ ಅಥವಾ ಯಾವುದೇ ಇತರ ರೀತಿಯಲ್ಲಿ ಹಸ್ತಕ್ಷೇಪ ಮಾಡುವ ಯಾವೊಬ್ಬ ವ್ಯಕ್ತಿಯು, ಮೊದಲ ದರ್ಜೆಯ ಮ್ಯಾಜೆಸ್ಟ್ರೇಟರ ದರ್ಜೆಗಿಂತ ಕಡಿಮೆಯಲ್ಲದ, ನ್ಯಾಯಾಲಯದಿಂದ, ಅಪರಾಧ ನಿರ್ಣಯವಾದ ತರುವಾಯ, ಐದು ಸಾವಿರ ರೂಪಾಯಿಗಳಿಗಿಂತ ಕಡಿಮೆಯಲ್ಲದ ಆದರೆ ಐವತ್ತು ಸಾವಿರ ರೂಪಾಯಿಗಳನ್ನು ಮೀರದ ಜುಲ್ಮಾನೆಗೆ ಮತ್ತು ಹದಿನೈದು ದಿನಗಳಿಗಿಂತ ಕಡಿಮೆಯಲ್ಲದ ಆದರೆ ಒಂದು ವರ್ಷವನ್ನು ಮೀರದ ಅವಧಿಯ ಕಾರಾವಾಸಕ್ಕೆ ಗುರಿಯಾಗತಕ್ಕದ್ದು.
(2) 20ನೇ ಪ್ರಕರಣದ (1)ನೇ ಉಪ ಪ್ರಕರಣದ (ಐ) ಖಂಡದ ಉಪಬಂಧಗಳ ಅಡಿಯಲ್ಲಿ ಲೆಕ್ಕವಿಡದ ಲಾಟರಿ ಟಿಕೆಟುಗಳ ಸ್ವಾಧೀನವನ್ನು ಹೊಂದಿರುವುದು ಕಂಡುಬಂದ ಯಾವೊಬ್ಬ ವ್ಯಕ್ತಿ ಅಥವಾ ಪ್ರವರ್ತಕನು, ದಂಡವನ್ನು ವಿಧಿಸುವುದರ ವಿರುದ್ಧ ಲಿಖಿತದಲ್ಲಿ ಕಾರಣಗಳನ್ನು ತೋರಿಸಲು ಅವಕಾಶವನ್ನು ನೀಡಿದ ತರುವಾಯ, ಐದು ಸಾವಿರ ರೂಪಾಯಿಗಳ ಜುಲ್ಮಾನೆಗೆ ಗುರಿಯಾಗತಕ್ಕದ್ದು.
(3) (2)ನೇ ಉಪ ಪ್ರಕರಣದ ಅಡಿಯಲ್ಲಿ ದಂಡವನ್ನು ವಿಧಿಸುವ ಅಧಿಕಾರವು 20ನೇ ಪ್ರಕರಣದ ಅಡಿಯಲ್ಲಿ ಪ್ರಾಧಿಕಾರಿಸಿದ ಅಧಿಕಾರಿಯಲ್ಲಿ ನಿಹಿತವಾಗಿರತಕ್ಕದ್ದು.