(1) ಈ ಸಂಬಂಧದಲ್ಲಿ ಆಯುಕ್ತನು ಅಥವಾ ರಾಜ್ಯಸರ್ಕಾರವು ಪ್ರಾಧಿಕೃತಗೊಳಿಸಿದ ಯಾವೊಬ್ಬ ಅಧಿಕಾರಿಯು, ಈ ಅಧ್ಯಾದೇಶದ ಉದ್ದೇಶಕ್ಕಾಗಿ ಈ ಮುಂದಿನ ಅಧಿಕಾರಗಳನ್ನು ಹೊಂದಿರತಕ್ಕದ್ದು,-
(ಎ) ಯಾವೊಬ್ಬ ಪ್ರವರ್ತಕ ಅಥವಾ ಇತರ ವ್ಯಕ್ತಿಯು ಲಾಟರಿ ವ್ಯವಹಾರ ನಡೆಸುತ್ತಿರುವ ವ್ಯವಹಾರ ಸ್ಥಳವನ್ನು ಅಥವಾ ಅಂಥ ವ್ಯವಹಾರವು ನಡೆಯುತ್ತಿದೆ ಎಂದು ಅಥವಾ ಅಂಥ ಪ್ರವರ್ತಕನು ಅಥವಾ ವ್ಯಕ್ತಿಯು, ದಸ್ತಾವೇಜುಗಳೂ ಸೇರಿದಂತೆ ಲೆಕ್ಕಪತ್ರಗಳನ್ನು ಇಟ್ಟಿದ್ದಾನೆಂದು ಅಂಥ ಅಧಿಕಾರಿಯು ನಂಬಿದ ಇತರ ಯಾವುದೇ, ಸ್ಥಳವನ್ನು ಪ್ರವೇಶಿಸುವುದು ಮತ್ತು ಪರಿಶೀಲಿಸುವುದು;
(ಬಿ) ಅಂಥ ಪ್ರವರ್ತಕನು ಅಥವಾ ವ್ಯಕ್ತಿಯು ತನ್ನ ವ್ಯವಹಾರದ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ಲೆಕ್ಕಪತ್ರಗಳು, ರಿಜಿಸ್ಟರುಗಳು ಮತ್ತು ದಸ್ತಾವೇಜುಗಳನ್ನು, ಅಂಥ ಸಮಯದಲ್ಲಿ ಮತ್ತು ಅಂಥ ಸ್ಥಳದಲ್ಲಿ ಪರಿಶೀಲನೆಗಾಗಿ ಹಾಜರುಪಡಿಸುವಂತೆ ನಿರ್ದೇಶಿಸುವುದು;
(ಸಿ) ಅಂಥ ಲಾಟರಿ ಟಿಕೆಟ್ಗಳನ್ನು ಎಲ್ಲೆಲ್ಲಿ ಇಡಲಾಗಿದೆಯೋ ಆ ಸ್ಥಳಗಳನ್ನು ಪ್ರವೇಶಿಸುವುದು ಮತ್ತು ಅಂಥ ಪ್ರವರ್ತಕನ ಸ್ವಾಧೀನತೆಯಲ್ಲಿರುವ ಅಥವಾ ಅಂಥ ಪ್ರವರ್ತಕನ ಪರವಾಗಿ ಇತರ ಯಾವೊಬ್ಬ ವ್ಯಕ್ತಿಯ ಸ್ವಾಧೀನತೆಯಲ್ಲಿರುವ ಲಾಟರಿ ಟಿಕೇಟುಗಳನ್ನು ಪರಿಶೀಲಿಸುವುದು;
(ಡಿ) ವ್ಯವಹಾರಗಳಿಗೆ ಸಂಬಂಧಪಟ್ಟಂತೆ ವಾಸ್ತವಾಂಶಗಳನ್ನು ಮುಚ್ಚಿಡಲಾಗಿದೆ ಎಂದು ಅನುಮಾನಬಂದಲ್ಲಿ, ಪ್ರವರ್ತಕನ ನಿವಾಸ ಸ್ಥಳವೂ ಒಳಗೊಂಡಂತೆ ಪ್ರವರ್ತಕನ ಅಥವಾ ಪ್ರವರ್ತಕನ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಅಲ್ಲಿ ಇರುವ ವ್ಯಕ್ತಿಯ ಶೋಧನೆ ಮಾಡುವುದೂ ಸೇರಿದಂತೆ, ಅಂಥ ಸ್ಥಳಗಳನ್ನು ಪ್ರವೇಶಿಸುವುದು ಮತ್ತು ಪರಿಶೀಲಿಸುವುದು;
(ಇ) ಒಬ್ಬ ಪ್ರವರ್ತಕನು ಅಥವಾ ಇತರ ವ್ಯಕ್ತಿಯು, ಯಾವುದೇ ರೀತಿಯಲ್ಲಿ ತೆರಿಗೆಯನ್ನು ತಪ್ಪಿಸುವ ಅಥವಾ ತೆರಿಗೆಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ ಅಥವಾ ತನ್ನ ತೆರಿಗೆ ಹೊಣೆಗಾರಿಕೆಯನ್ನು ಮರೆಮಾಚುತ್ತಿದ್ದಾನೆಂದು ಅನುಮಾನಿಸಲು ಕಾರಣಗಳಿದ್ದಲ್ಲಿ, ಅಂಥ ಕಾರಣಗಳನ್ನು ಲಿಖಿತದಲ್ಲಿ ದಾಖಲಿಸಿದ ತರುವಾಯ ಆ ಪ್ರವರ್ತಕನಿಂದ ಅಥವಾ ಯಾವೊಬ್ಬ ಇತರ ವ್ಯಕ್ತಿಯಿಂದ ಯಾವುವೇ ಲೆಕ್ಕಪತ್ರಗಳು, ರಿಜಿಸ್ಟರುಗಳು ಅಥವಾ ದಸ್ತಾವೇಜುಗಳನ್ನು ವಶಕ್ಕೆತೆಗೆದುಕೊಳ್ಳುವುದು ಮತ್ತು ಯಾರ ಅಭಿರಕ್ಷೆಯಿಂದ ಅಂಥ ಲೆಕ್ಕ ಪತ್ರಗಳು, ದಾಖಲೆಗಳು ಅಥವಾ ದಸ್ತಾವೇಜುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆಯೋ ಆ ಪ್ರವರ್ತಕನಿಗೆ ಅಥವಾ ಯಾವೊಬ್ಬ ಇತರ ವ್ಯಕ್ತಿಗೆ ಆ ಬಗ್ಗೆ ಸ್ವೀಕೃತಿ ಪತ್ರವನ್ನು ಮತ್ತು ಅವನು ಕೋರಿಕೊಂಡಲ್ಲಿ, ಅದರ ಪ್ರತಿಗಳನ್ನು ನೀಡತಕ್ಕದ್ದು ಮತ್ತು ತಾನು ಅವಶ್ಯಕವೆಂದು ಪರಿಗಣಿಸಬಹುದಾದ ಅವಧಿಯವರೆಗೆ ಪರಿಶೀಲನೆ, ವಿಚಾರಣೆ, ಪ್ರಾಷಿಕ್ಯೂಷನ್ ಅಥವಾ ಇತರ ಕಾನೂನು ವ್ಯವಹರಣೆಗಳಿಗಾಗಿ ಅವುಗಳನ್ನು ತನ್ನ ಅಭಿರಕ್ಷೆಯಲ್ಲಿ ಇಟ್ಟುಕೊಳ್ಳಬಹುದು;
(ಎಫ್) ಲೆಕ್ಕಪತ್ರಗಳನ್ನು ಅಥವಾ ತೆರಿಗೆಗೆ ಗುರಿಯಾಗತಕ್ಕ ಲಾಟರಿ ಟಿಕೆಟ್ಗಳನ್ನು ಇಡಲಾಗಿದೆಯೆಂದು ಅಥವಾ ದಾಸ್ತಾನು ಮಾಡಲಾಗಿದೆಯೆಂದು ಅನುಮಾನ ಬರುವಂಥ ಯಾವುದೇ ಪೆಟ್ಟಿಗೆ ಅಥವಾ ಧಾರಕ, ಗೋದಾಮು ಅಥವಾ ಕಟ್ಟಡ ಅಥವಾ ಗೋದಾಮಿನ ಅಥವಾ ಕಟ್ಟಡದ ಯಾವುದೇ ಭಾಗವನ್ನು ಅಲ್ಲಿ ವ್ಯವಹಾರ ನಡೆಸುತ್ತಿರುವ ಮಾಲೀಕ ಅಥವಾ ಅದರ ಪ್ರಭಾರದಲ್ಲಿರುವ ವ್ಯಕ್ತಿ ಅಥವಾ ವ್ಯವಹಾರದ ಪ್ರಭಾರದಲ್ಲಿರುವ ಇತರ ಯಾವೊಬ್ಬ ವ್ಯಕ್ತಿ ಅಥವಾ ಅನುಭೋಗದಲ್ಲಿರುವ ಇತರ ಯಾವೊಬ್ಬ ವ್ಯಕ್ತಿಯು ಆವರಣವನ್ನು ಬಿಟ್ಟುಹೋಗಿದ್ದಲ್ಲಿ ಅಥವಾ ಅವನು ಅಲ್ಲಿ ದೊರೆಯದಿದ್ದಲ್ಲಿ ಅಥವಾ ಯಾವುದೇ ಪೆಟ್ಟಿಗೆ ಅಥವಾ ಧಾರಕವನ್ನು, ಗೋದಾಮು ಅಥವಾ ಕಟ್ಟಡ ಅಥವಾ ಗೋದಾಮು ಅಥವಾ ಕಟ್ಟಡದ ಯಾವುದೇ ಭಾಗವನ್ನು ತೆರೆಯಲು ಹೇಳಿದಾಗ ಹಾಗೆ ಮಾಡಲು ತಪ್ಪಿದಲ್ಲಿ ಅಥವಾ ನಿರಾಕರಿಸಿದಲ್ಲಿ ಆ ಯಾವುದನ್ನೂ ಮೊಹರು (ಸೀಲ್) ಮಾಡುವುದು;
(ಜಿ) ವ್ಯವಹಾರವನ್ನು ನಡೆಸುತ್ತಿರುವ ಮಾಲೀಕ ಅಥವಾ ಅದರ ಪ್ರಭಾರದಲ್ಲಿರುವ ವ್ಯಕ್ತಿ ಅಥವಾ ಅನುಭೋಗದಲ್ಲಿರುವ ವ್ಯಕ್ತಿಯು, ಆವರಣವನ್ನು ಬಿಟ್ಟುಹೋಗಿದ್ದಲ್ಲಿ ಅಥವಾ ಧಾರಕ, ಗೋದಾಮು ಅಥವಾ ಕಟ್ಟಡ ಅಥವಾ ಗೋದಾಮಿನ ಅಥವಾ ಕಟ್ಟಡದ ಭಾಗವನ್ನು ತೆರೆಯಲು ಅವನಿಗೆ ಅವಕಾಶವನ್ನು ಕೊಟ್ಟ ತರುವಾಯ ಅವನು ಹಾಗೆ ಮಾಡಲು ತಪ್ಪಿದಲ್ಲಿ, ಧಾರಕ ಅಥವಾ ಗೋದಾಮು ಅಥವಾ ಕಟ್ಟಡ ಅಥವಾ ಗೋದಾಮಿನ ಅಥವಾ ಕಟ್ಟಡದ ಭಾಗವನ್ನು ಒಡೆದು ತೆರೆಯುವುದು ಮತ್ತು ಅದರಲ್ಲಿ ಕಂಡುಬಂದ ಸರಕುಗಳು ಮತ್ತು ದಸ್ತಾವೇಜುಗಳ ಒಂದು ಪಟ್ಟಿಯನ್ನು ತಯಾರಿಸುವುದು;
(ಎಚ್) ಯಾವೊಬ್ಬ ಪ್ರವರ್ತಕನು ಅಥವಾ ಅವನ ವ್ಯವಸ್ಥಾಪಕ, ಏಜೆಂಟ್ ಅಥವಾ ನೌಕರನ ಹೇಳಿಕೆಯನ್ನು ದಾಖಲಿಸುವುದು, ಯಾವುದೇ ಆವರಣದಲ್ಲಿ ಕಂಡುಬರುವ ದಾಖಲೆಗಳಿಂದ ಉದ್ದೃತ ಭಾಗವನ್ನು ತೆಗೆದುಕೊಳ್ಳುವುದು ಮತ್ತು ಲೆಕ್ಕಪತ್ರಗಳು, ರಿಜಿಸ್ಟರುಗಳು ದಸ್ತಾವೇಜುಗಳ ಅಥವಾ ಸರಕುಗಳ ಮೇಲೆ ಗುರುತು ಚಿಹ್ನೆಗಳನ್ನು ಹಾಕುವುದು.
(ಐ) ಒಬ್ಬ ಪ್ರವರ್ತಕನ ಅಥವಾ ಒಬ್ಬ ಪ್ರವರ್ತಕನ ಪರವಾಗಿ ಯಾವೊಬ್ಬ ವ್ಯಕ್ತಿಯ ಸ್ವಾಧೀನದಲ್ಲಿ ಕಂಡುಬಂದ ಮತ್ತು ಅವನ ವ್ಯವಹಾರದ ಕ್ರಮದಲ್ಲಿ ನಿರ್ವಹಿಸಲಾಗುತ್ತಿರುವ ಲೆಕ್ಕಪತ್ರಗಳು, ದಾಖಲೆಗಳು ಅಥವಾ ದಸ್ತಾವೇಜುಗಳಲ್ಲಿ ಲೆಕ್ಕ ತೋರಿಸದೇ ಇದ್ದ ತೆರಿಗೆಗೆ ಬದ್ದವಾದ ಲಾಟರಿ ಟಿಕೆಟ್ಗಳ ದಾಸ್ತನನ್ನು ವಶಕ್ಕೆತೆಗೆದುಕೊಳ್ಳುವುದು ಮತ್ತು ಹಾಗೆ ವಶಕ್ಕೆ ತೆಗೆದುಕೊಂಡ ಲಾಟರಿ ಟಿಕೇಟುಗಳನ್ನು ನೀಡಲು ಬಳಸುವ ಸಾಧನ ಅಥವಾ ಉಪಕರಣವೂ ಸೇರಿದಂತೆ ಹಾಗೆ ವಶಕ್ಕೆ ತೆಗೆದುಕೊಂಡ ಲಾಟರಿ ಟಿಕೆಟ್ಗಳ ಒಂದು ಪಟ್ಟಿಯನ್ನು ಅಂಥ ಅಧಿಕಾರಿಯು ತಯಾರಿಸತಕ್ಕದ್ದು ಮತ್ತು ಅದರ ಒಂದು ಪ್ರತಿಯನ್ನು ಪ್ರವರ್ತಕನಿಗೆ ಅಥವಾ ಯಾರ ಅಭಿರಕ್ಷೆಯಿಂದ ಆ ಲಾಟರಿ ಟಿಕೆಟ್ಗಳನ್ನು ಅಂಥ ಸಾಧನ ಅಥವಾ ಉಪಕರಣವನ್ನು ವಶಕ್ಕೆ ತೆಗೆದುಕೊಳ್ಳಲಾಯಿತೋ ಆ ಯಾವೊಬ್ಬ ಇತರ ವ್ಯಕ್ತಿಗೆ ನೀಡತಕ್ಕದ್ದು;
(ಜೆ) ಮೇಲಿನ (ಇ) ಖಂಡದ ಅಡಿಯಲ್ಲಿ ಲೆಕ್ಕಪತ್ರಗಳು, ದಾಖಲೆಗಳು ಅಥವಾ ದಸ್ತಾವೇಜುಗಳನ್ನು ಅಥವಾ (ಐ) ಖಂಡದ ಅಡಿಯಲ್ಲಿ ಲಾಟರಿ ಟಿಕೆಟ್ಗಳನ್ನು ವಶಕ್ಕೆ ತೆಗೆದುಕೊಳ್ಳುವುದು ಸಾಧ್ಯವಾಗದಿರುವ ಸಂದರ್ಭಗಳಲ್ಲಿ ಅಂಥ ಅಧಿಕಾರಿಯು, ಅವುಗಳ ಮಾಲೀಕ ಅಥವಾ ನಿಕಟ ಸ್ವಾಧೀನ ಅಥವಾ ನಿಯಂತ್ರಣ ಹೊಂದಿರುವ ವ್ಯಕ್ತಿಗೆ, ಅಂಥ ಅಧಿಕಾರಿಯ ಪೂರ್ವಾನುಮತಿ ಪಡೆದ ಹೊರತು ಅವುಗಳನ್ನು ಸಾಗಿಸತಕ್ಕದ್ದಲ್ಲ, ಬಿಟ್ಟುಕೊಡತಕ್ಕದ್ದಲ್ಲ, ಅಥವಾ ಅನ್ಯಥಾ ವ್ಯವಹರಿಸತಕ್ಕದ್ದಲ್ಲವೆಂಬ ಆದೇಶವನ್ನು ಜಾರಿಮಾಡುವುದು ಮತ್ತು ಅಂಥ ಆದೇಶವನ್ನು ಜಾರಿಗೊಳಿಸಿದ ತರುವಾಯ, ಆದೇಶದಲ್ಲಿ ಉಲ್ಲೇಖಿಸಿದ ವಸ್ತುಗಳನ್ನು ಪಡೆದುಕೊಳ್ಳುವುದಕ್ಕಾಗಿ ಅವಶ್ಯಕವೆಂದು ಭಾವಿಸಬಹುದಾದಂಥ ಕ್ರಮಗಳನ್ನು ಕೈಗೊಳ್ಳುವುದು;
(2) 19ನೇ ಪ್ರಕರಣದ ಅಡಿಯಲ್ಲಿನ ದಾಖಲೆಗಳು ಮತ್ತು ಲೆಕ್ಕಪತ್ರಗಳನ್ನು ಎಲೆಕ್ಟ್ರಾನಿಕ್ ಉಪಕರಣಗಳ ಮೂಲಕ ನಿರ್ವಹಿಸಲಾಗಿದ್ದಲ್ಲಿ, ಪ್ರವರ್ತಕನು, ಮೇಲ್ಕಂಡ (1)ನೇ ಉಪ-ಪ್ರಕರಣದ ಅಡಿಯಲ್ಲಿ ಪ್ರಾಧಿಕೃತನಾದ ಅಧಿಕಾರಿಯು ಅಗತ್ಯಪಡಿಸಬಹುದಾದಂತೆ ಅಂಥ ಲೆಕ್ಕ ಪತ್ರಗಳು ಮತ್ತು ದಾಖಲೆಗಳಿಗೆ ಪ್ರವೇಶಾವಕಾಶವನ್ನು ಒದಗಿಸತಕ್ಕದ್ದು.
(3) (1)ನೇ ಉಪ-ಪ್ರಕರಣದ (ಡಿ) ಯಿಂದ (ಜಿ), (ಐ) ಮತ್ತು (ಐ) ಖಂಡಗಳ ಅಡಿಯಲ್ಲಿ ಒಬ್ಬ ಅಧಿಕಾರಿಗೆ ಪ್ರದತ್ತವಾದ ಅಧಿಕಾರಗಳನ್ನು ಆತನು ದಂಡ ಪ್ರಕ್ರಿಯಾ ಸಂಹಿತೆ, 1973ರ (1974ರ ಕೇಂದ್ರ ಅಧಿನಿಯಮ 2) ಉಪಬಂಧಗಳಿಗನುಸಾರವಾಗಿ ಚಲಾಯಿಸತಕ್ಕದ್ದು ಮತ್ತು ಪ್ರವರ್ತಕನ ಅಥವಾ ಆ ಇತರ ವ್ಯಕ್ತಿಯ ವಾಸ ಸ್ಥಳವನ್ನು ಪ್ರವೇಶಿಸುವ ಅಧಿಕಾರವನ್ನು, ಆಯುಕ್ತನು ಪ್ರಾಧಿಕೃತಗೊಳಿಸತಕ್ಕದ್ದು.
(4) ಮೇಲ್ಕಂಡ (1)ನೇ ಉಪ-ಪ್ರಕರಣದ ಅಡಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾದ, ಕಂಪ್ಯೂಟರ್ ಯಂತ್ರಾಂಶ ಮತ್ತು ತಂತ್ರಾಂಶವೂ ಸೇರಿದಂತೆ ಮತ್ತು ಲೆಕ್ಕಪತ್ರಗಳು, ರಿಜಿಸ್ಟರುಗಳು, ದಾಖಲೆಗಳ ಮತ್ತು ಇತರ ದಸ್ತಾವೇಜುಗಳನ್ನು ಅಂಥ ಅಧಿಕಾರಿಯು ಅವುಗಳನ್ನು ವಶಕ್ಕೆ ತೆಗೆದುಕೊಂಡ ದಿನಾಂಕದಿಂದ ಒಂದು ನೂರಾ ಎಂಭತ್ತು ದಿನಗಳನ್ನು ಮೀರದ ಅವಧಿಗಾಗಿ, ಆದರೆ, ಸದರಿ ಅವಧಿಯನ್ನು ಮೀರಿ ಅವುಗಳನ್ನು ತನ್ನಲ್ಲಿ ಉಳಿಸಿಕೊಳ್ಳುವುದಕ್ಕೆ ಕಾರಣಗಳನ್ನು ಅವನು ಲಿಖಿತದಲ್ಲಿ ದಾಖಲಿಸಿದ್ದ ಹೊರತು ಮತ್ತು ಅದಕ್ಕೆ ತನ್ನ ನಿಕಟ ಮೇಲಾಧಿಕಾರಿಯ ಅನುಮೋದನೆಯನ್ನು ಪಡೆದಿದ್ದ ಹೊರತು ತನ್ನಲ್ಲಿ ಇಟ್ಟುಕೊಳ್ಳತಕ್ಕದ್ದಲ್ಲ ಮತ್ತು ಯಾವುದೇ ಸಂದರ್ಭದಲ್ಲಿ ಅಂಥ ಅನುಮೋದನೆಯು ಒಂದು ಬಾರಿಗೆ ಅರವತ್ತು ದಿನಗಳನ್ನು ಮೀರತಕ್ಕದ್ದಲ್ಲ.
(5) ವ್ಯವಹಾರದ ಯಾವುದೇ ಸ್ಥಳದಲ್ಲಿ ಕಂಡುಬಂದ ಸಾಧನಗಳು, ಉಪಕರಣಗಳು ಲೆಕ್ಕಪತ್ರಗಳು, ರಿಜಿಸ್ಟರುಗಳು ಅಥವಾ ದಸ್ತಾವೇಜುಗಳಿಗೆ ಸಂಬಂಧಪಟ್ಟಂತೆ ಯಾರ ವ್ಯವಹಾರವು ಆ ಸ್ಥಳದಲ್ಲಿ ನಡೆಯುತ್ತಿದೆಯೋ ಆ ಪ್ರವರ್ತಕನು ಅಥವಾ ವ್ಯಕ್ತಿಯು ತದ್ವಿರುದ್ದವಾಗಿ ರುಜುವಾತು ಪಡಿಸಿದ ಹೊರತು ಅವುಗಳು ಆ ವ್ಯವಹಾರಕ್ಕೆ ಸಂಬಂಧಪಟ್ಟಿವೆ ಎಂಬ ಪೂರ್ವಭಾವನೆ ಮಾಡತಕ್ಕದ್ದು.
(6) ಮೇಲಿನ (1)ನೇ ಉಪ-ಪ್ರಕರಣದ (ಐ) ಖಂಡದ ಅಡಿಯಲ್ಲಿ ಲಾಟರಿ ಟಿಕೆಟ್ಗಳನ್ನು ಮುಟ್ಟುಗೋಲು ಹಾಕಿಕೊಂಡುದರ ವಿರುದ್ದ ಮುಟ್ಟುಗೋಲು ಹಾಕಿಕೊಂಡ ಲಾಟರಿ ಟಿಕೆಟ್ಗಳ ಪ್ರವರ್ತಕನು ಅಥವಾ ವ್ಯಕ್ತಿಯು ಅಪೀಲನ್ನು ಸಲ್ಲಿಸಲು ಏಳು ದಿನಗಳ ಅವಕಾಶವಿರತಕ್ಕದ್ದು.
(7) ಮೇಲಿನ (6)ನೇ ಉಪ-ಪ್ರಕರಣಕ್ಕೆ ಒಳಪಟ್ಟು, ನಿರ್ದಿಷ್ಟಪಡಿಸಿದ ಅವಧಿಯ ಮುಕ್ತಾಯದ ತರುವಾಯ, ಯಾವುದೇ ನಿರ್ಧರಣೆಯನ್ನು ಮಾಡಿದ ತೆರಿಗೆಯನ್ನು ಅಥವಾ ಬಾಕಿ ಇರುವ ದಂಡ ಅಥವಾ ಬಡ್ಡಿಯನ್ನು ಸಂದಾಯ ಮಾಡದಿದ್ದಲ್ಲಿ, ಅಧಿಕಾರಿಯು, ಲಾಟರಿ ಟಿಕೆಟ್ಗಳನ್ನು ಅಥವಾ ಇತರ ಸರಕನ್ನು ಸಾರ್ವಜನಿಕ ಹರಾಜಿನ ಮೂಲಕ ವಿಲೆ ಮಾಡತಕ್ಕದ್ದು ಮತ್ತು ಮಾರಾಟದಿಂದ ಬಂದ ಮೊಬಲಗನ್ನು ಅಂಥ ಬಾಕಿ ಮೊಬಲಗಿಗೆ ಹೊಂದಾಣಿಕೆ ಮಾಡತಕ್ಕದ್ದು ಮತ್ತು ಹೆಚ್ಚುವರಿಯಾದ ಮೊಬಲಗನ್ನು, ರಾಜ್ಯದಿಂದ ಭರಿಸಲಾದ ವೆಚ್ಚಗಳನ್ನು ಮುರಿದುಕೊಂಡ ತರುವಾಯ, ನಿಯಮಿಸಲಾದ ರೀತಿಯಲ್ಲಿ ಮರುಸಂದಾಯ ಮಾಡತಕ್ಕದ್ದು.