(1) ಯಾವೊಬ್ಬ ಪ್ರವರ್ತಕನು ಅಥವಾ ವ್ಯಕ್ತಿಯು 26ನೇ ಪ್ರಕರಣದ (1)ನೇ ಉಪ-ಪ್ರಕರಣದ ಅಥವಾ 28ನೇ ಪ್ರಕರಣದ ಅಡಿಯಲ್ಲಿ ಒಂದು ಅಪರಾಧ ಮಾಡಿದ್ದರೆ, ಪ್ರಾಧಿಕೃತ ಅಧಿಕಾರಿಯು ಅಂಥ ಪ್ರವರ್ತಕನು ಅಥವಾ ವ್ಯಕ್ತಿಯು ಲಿಖಿತದಲ್ಲಿ ತಪ್ಪೊಪ್ಪಿಗೆ ನೀಡಿದ ಮೇಲೆ ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಾಲಯ ವ್ಯವಹರಣೆಗಳು ಪ್ರಾರಂಭವಾಗುವುದಕ್ಕೆ ಮೊದಲು ಯಾವುದೇ ಸಮಯದಲ್ಲಿ ರಾಜಿ ಮಾಡಿಕೊಳ್ಳಲು ಆಯ್ಕೆ ಮಾಡಿಕೊಂಡ ತರುವಾಯ ಅಂಥ ಅಪರಾಧದ ಬಗ್ಗೆ ರಾಜಿ ಮಾಡಿಕೊಳ್ಳಬಹುದು ಮತ್ತು ಪ್ರಾಧಿಕೃತ ಅಧಿಕಾರಿಯು ನಿರ್ದಿಷ್ಟಪಡಿಸಬಹುದಾದಂತೆ ಹಣವನ್ನು ಸಂದಾಯ ಮಾಡಲು ಪ್ರವರ್ತಕನಿಗೆ ಅಥವಾ ವ್ಯಕ್ತಿಗೆ ಆದೇಶಿಸಬಹುದು, ಪರಂತು, ಅದು ಆ ಮೊಬಲಗು, ಬಾಕಿ ಇರುವ ಯಾವುದೇ ತೆರಿಗೆ ಮತ್ತು ಬಡ್ಡಿಯ ಜೊತೆಯಾಗಿ ಅಪರಾಧಕ್ಕಾಗಿ ನಿಯಮಿಸಲಾದ ಜುಲ್ಮಾನೆಯ ಮೊಬಲಗನ್ನು ಮೀರತಕ್ಕದ್ದಲ್ಲ.
(2) ಯಾವೊಬ್ಬ ಅಂಥ ಪ್ರವರ್ತಕನು ಒಂದು ಮೊತ್ತದ ಸಂದಾಯಕ್ಕೆ ಸಂಬಂಧಪಟ್ಟಂತೆ ಚೆಕ್ ಅಥವಾ ಇತರ ಯಾವುದೇ ಲಿಖಿತ ಪತ್ರವನ್ನು ಒದಗಿಸುವುದು ಅಪರಾಧದ ರಾಜಿಗಾಗಿ ಹಾಕಿಕೊಂಡ ಒಂದು ಅರ್ಜಿ ಎಂದು ಭಾವಿಸತಕ್ಕದ್ದು.
(3) ಈ ಪ್ರಕರಣದ ಅಡಿಯಲ್ಲಿ ಪ್ರಾಧಿಕೃತ ಅಧಿಕಾರಿಯು ಅಪರಾಧದ ಬಗ್ಗೆ ರಾಜಿಮಾಡಿಕೊಂಡಿರುವಲ್ಲಿ, (1)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಲಾದ ಆದೇಶವು,-
(ಎ) ಲಿಖಿತದಲ್ಲಿರತಕ್ಕದ್ದು ಮತ್ತು ಮಾಡಲಾದ ಅಪರಾಧವನ್ನು, ಸಂದಾಯ ಮಾಡತಕ್ಕ ಹಣದ ಮೊತ್ತ ಮತ್ತು ಸಂದಾಯ ಮಾಡುವುದಕ್ಕಾಗಿನ ನಿಗದಿತ ದಿನಾಂಕವನ್ನು ಅದರಲ್ಲಿ ನಿರ್ದಿಷ್ಟಪಡಿಸತಕ್ಕದ್ದು; ಮತ್ತು
(ಬಿ) ಅಪರಾಧವನ್ನು ಮಾಡಿದ ಪ್ರವರ್ತಕನಿಗೆ ಅಥವಾ ವ್ಯಕ್ತಿಗೆ ಅದನ್ನು ಜಾರಿ ಮಾಡತಕ್ಕದ್ದು; ಮತ್ತು
(ಸಿ) ಅಂತಿಮವಾಗಿರತಕ್ಕದ್ದು ಹಾಗೂ ಯಾವುದೇ ಅಪೀಲಿಗೆ ಒಳಪಟ್ಟಿರತಕ್ಕದ್ದಲ್ಲ; ಮತ್ತು
(ಡಿ) ಆದೇಶದಲ್ಲಿ ಹೇಳಲಾದ ಮೊಬಲಗಿನ ಸಂದಾಯಕ್ಕಾಗಿ ಒಂದು ನ್ಯಾಯಾಲಯದ ಡಿಕ್ರಿ ಎಂಬಂತೆ ಅದೇ ರೀತಿಯಲ್ಲಿಯೇ ಜಾರಿಗೊಳಿಸಬಹುದು.
(4) ಪ್ರಾಧಿಕೃತ ಅಧಿಕಾರಿಯು, ಈ ಪ್ರಕರಣದ ಅಡಿಯಲ್ಲಿನ ಅಪರಾಧದ ಸಂಬಂಧದಲ್ಲಿ ರಾಜಿ ಮಾಡಿಕೊಂಡಿರುವಾಗ, ಸಂಬಂಧಪಟ್ಟ ಪ್ರವರ್ತಕನು ಅಥವಾ ವ್ಯಾಪಾರಿಯು, ಅಂಥ ಅಪರಾಧದ ಸಂಬಂಧದಲ್ಲಿ ಪ್ರಾಷಿಕ್ಯೂಷನ್ಗೆ ಅಥವಾ ಈ ಪ್ರಕರಣದ ಅಡಿಯಲ್ಲಿ ಯಾವುದೇ ಮತ್ತಷ್ಟು ದಂಡಕ್ಕೆ ಗುರಿಯಾಗತಕ್ಕದ್ದಲ್ಲ ಮತ್ತು ಅಂಥ ಪ್ರವರ್ತಕನು ಅಥವಾ ವ್ಯಾಪಾರಿಯು, ಸದರಿ ವ್ಯವಹರಣೆಗಳ ವಿರುದ್ಧ ಅಪೀಲು ಮಾಡತಕ್ಕದ್ದಲ್ಲ.