(1) ಈ ಅಧ್ಯಾದೇಶದ ಅಡಿಯಲ್ಲಿ ನೋಂದಾಯಿತನಾದ ಅಥವಾ ನೋಂದಾಯಿತನಾಗಲು ಬದ್ದನಾದ ಪ್ರತಿಯೊಬ್ಬ ಪ್ರವರ್ತಕನು ಅಥವಾ ಇತರೆ ವ್ಯಕ್ತಿಯು, ತನ್ನ ವ್ಯವಹಾರಗಳಿಗೆ ಸಂಬಂಧಪಟ್ಟಂತೆ, ನಿಯಮಿಸಬಹುದಾದಂಥ ವಿವರಗಳನ್ನು ತೋರಿಸುವಂಥ ನಿಯಮಿಸಬಹುದಾದಂಥ ನಿಜವಾದ ಮತ್ತು ಸರಿಯಾದ ಲೆಕ್ಕಪತ್ರಗಳನ್ನು ಮತ್ತು ಅಂಥ ಇತರ ದಾಖಲೆಗಳನ್ನು ಇಟ್ಟುಕೊಂಡು ಬರತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು.
(2) ಅಂಥ ಎಲ್ಲಾ ಲೆಕ್ಕಪತ್ರಗಳು ಮತ್ತು ದಾಖಲೆಗಳನ್ನು, ಅವು ಸಂಬಂಧಪಡುವ ವರ್ಷವು ಮುಗಿದ ತರುವಾಯ ಮೂರು ವರ್ಷಗಳು ಮುಕ್ತಾಯವಾಗುವವರೆಗೆ ಅಥವಾ ತೆರಿಗೆ ನಿರ್ಧರಣೆಯ ಅಂತಿಮವಾಗುವವರೆಗೆ ಇವುಗಳಲ್ಲಿ ಯಾವುದು ಅನಂತರದ್ದೋ ಅಲ್ಲಿಯವರೆಗೆ ಪ್ರವರ್ತಕ ಅಥವಾ ಇತರ ವ್ಯಕ್ತಿಯು ತನ್ನ ಅಭಿರಕ್ಷೆಯಲ್ಲಿ ಇಟ್ಟುಕೊಂಡುಬರತಕ್ಕದ್ದು.
(3) ಈ ಅಧ್ಯಾದೇಶದ ಅಡಿಯಲ್ಲಿ ಅಂಥ ಪ್ರವರ್ತಕನು, ಅಪೀಲು ಹೂಡುವ ಪಕ್ಷಕಾರನಾಗಿರುವಲ್ಲಿ, ಅಪೀಲಿನ ಅಥವಾ ಪುನರೀಕ್ಷಣೆಯ ವಸ್ತು ವಿಷಯಕ್ಕೆ ಸಂಬಂಧಪಟ್ಟ ಪ್ರತಿಯೊಂದು ದಾಖಲೆ ಮತ್ತು ಲೆಕ್ಕಪತ್ರ ದಾಸ್ತಾವೇಜುಗಳನ್ನು, ಅಂಥ ಅಪೀಲು ಅಥವಾ ಪುನರೀಕ್ಷಣೆಯು ಮತ್ತು ಆ ಬಗ್ಗೆ ಯಾವುದೇ ಅಪೀಲು ಅಂತಿಮವಾಗಿ ವಿಲೆಯಾಗುವವರೆಗ ಅವುಗಳನ್ನು ಇಟ್ಟುಕೊಂಡು ಬರತಕ್ಕದ್ದು.