(1) ಪ್ರತಿಯೊಬ್ಬ ಪ್ರವರ್ತಕನು ಮತ್ತು ಪ್ರವರ್ತಕನಿಂದ ನೇರವಾಗಿ ಅಥವಾ ಅನ್ಯಥಾ ಸ್ವೀಕರಿಸಿದ ಲಾಟರಿ ಟಿಕೆಟ್ಗಳನ್ನು ಮಾರಾಟ ಮಾಡುವ ಪ್ರತಿಯೊಬ್ಬ ವ್ಯಕ್ತಿಯು, ಈ ಅಧ್ಯಾದೇಶದ ಅಡಿಯಲ್ಲಿ, ನಿಯಮಿಸಬಹುದಾದಂಥ ರೀತಿಯಲ್ಲಿ ಅಂಥ ಶುಲ್ಕವನ್ನು ಸಂದಾಯಮಾಡಿ ಮತ್ತು ಅಂಥ ಅವಧಿಯೊಳಗೆ ತನ್ನನ್ನು ನೋಂದಾಯಿಸಿಕೊಳ್ಳತಕ್ಕದ್ದು:
ಪರಂತು, (ಯಾವುದೇ ಗಣಕೀಕೃತ ಲಾಟರಿ ಜಾಲದ ಲಾಟರಿ ಟಿಕೆಟ್ಗಳ ಹೊರತಾಗಿ) ಚಿಲ್ಲರೆಯಾಗಿ ಲಾಟರಿ ಟಿಕೆಟ್ಗಳನ್ನು ಸಾಮಾನ್ಯವಾಗಿ ಮಾರಾಟಮಾಡುವ ಒಬ್ಬ ವ್ಯಕ್ತಿಯು, ತನ್ನನ್ನು ನೋಂದಾಯಿಸಿಕೊಳ್ಳಲು ಬದ್ಧನಾಗಿರತಕ್ಕದ್ದಲ್ಲ.
(2) ನೋಂದಣಿಯನ್ನು, ಅದನ್ನು ರದ್ದುಪಡಿಸುವ ವರೆಗೆ ವರ್ಷದಿಂದ ವರ್ಷಕ್ಕೆ ನಿಯಮಿಸಲಾದ ಶುಲ್ಕವನ್ನು ಸಂದಯಮಾಡಿ ನವೀಕರಿಸಬಹುದು.
(3) ಈ ಪ್ರಕರಣದಲ್ಲಿರುವುದಾವುದೂ, ಭಾರತ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶ ಅಥವಾ ದೇಶವು ಸ್ವಯಂ ತಾನೇ ಲಾಟರಿ ಟಿಕೆಟ್ಗಳನ್ನು ಮಾರಾಟಮಾಡಿದಾಗ ಹೊರತು, ಅನ್ವಯವಾಗಿರತಕ್ಕದ್ದಲ್ಲ.