(1) ಒಬ್ಬ ಪ್ರವರ್ತಕನು, ಸೂಕ್ತ ಕಾರಣಗಳಿಲ್ಲದೆ, ನಿಯಮಿಸಲಾದ ಕಾಲದೊಳಗೆ ನೋಂದಣಿಗಾಗಿ ಅರ್ಜಿ ಸಲ್ಲಿಸಲು ತಪ್ಪಿದಲ್ಲಿ, ಅವನು ಇಪ್ಪತ್ತೈದು ಸಾವಿರ ರೂಪಾಯಿಗಳ ದಂಡ ನೀಡುವುದಕ್ಕೆ ಗುರಿಯಾಗತಕ್ಕದ್ದು.
(2) ಯಾವೊಬ್ಬ ವ್ಯಕ್ತಿಯು, ಸೂಕ್ತ ಕಾರಣಗಳಿಲ್ಲದೆ ನಿಯಮಿಸಲಾದ ಕಾಲದೊಳಗೆ ನೋಂದಣಿಗಾಗಿ ಅರ್ಜಿ ಸಲ್ಲಿಸಲು ತಪ್ಪಿದಲ್ಲಿ, ಅವನು ಇಪ್ಪತ್ತೈದು ಸಾವಿರ ರೂಪಾಯಿಗಳ ದಂಡ ನೀಡುವುದಕ್ಕೆ ಗುರಿಯಾಗತಕ್ಕದ್ದು
(3) ದಂಡಗಳನ್ನು ವಿಧಿಸುವ ಅಧಿಕಾರವು, ಸಹಾಯಕ ಆಯುಕ್ತನಲ್ಲಿ ನಿಹಿತವಾಗಿರತಕ್ಕದ್ದು.