(1) ರಾಜ್ಯ ಸರ್ಕಾರವು ಅಥವಾ ಆಯುಕ್ತನು, ಈ ಅಧ್ಯಾದೇಶದ ಪ್ರಶಾಸನಕ್ಕಾಗಿ ಈ ಅಧ್ಯಾದೇಶವನ್ನು ಜಾರಿಗೊಳಿಸಲು ನೇಮಕಗೊಂಡ ಎಲ್ಲ ಅಧಿಕಾರಿಗಳಿಗೆ ಮತ್ತು ವ್ಯಕ್ತಿಗಳಿಗೆ ತಾನು ಸೂಕ್ತವೆಂದು ಭಾವಿಸಬಹುದಾದಂಥ ಆದೇಶಗಳನ್ನು, ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಕಾಲಕಾಲಕ್ಕೆ ನೀಡಬಹುದು ಮತ್ತು ಎಲ್ಲ ಅಂಥ ಅಧಿಕಾರಿಗಳು ಮತ್ತು ವ್ಯಕ್ತಿಗಳು, ರಾಜ್ಯಸರ್ಕಾರದ ಮತ್ತು ಆಯುಕ್ತನ ಅಂಥ ಆದೇಶಗಳು, ಸೂಚನೆಗಳು ಮತ್ತು ನಿರ್ದೇಶನಗಳನ್ನು ಪಾಲಿಸತಕ್ಕದ್ದು ಮತ್ತು ಅನುಸರಿಸತಕ್ಕದ್ದು:
ಪರಂತು, ಅಂಥ ಯಾವುದೇ ಆದೇಶಗಳನ್ನು, ಸೂಚನೆಗಳನ್ನು ಅಥವಾ ನಿರ್ದೇಶನಗಳನ್ನು, ಯಾವುದೇ ಅಪೀಲು ಪ್ರಾಧಿಕಾರವು ತನ್ನ ಅಪೀಲು ವಿಚಾರಣಾ ಪ್ರಕಾರ್ಯಗಳನ್ನು ಚಲಾಯಿಸುವಲ್ಲಿ, ಅದರ ವಿವೇಚನೆಗೆ ಅಡ್ಡಿಯಾಗುವಂತೆ ನೀಡತಕ್ಕದ್ದಲ್ಲ.
(2) ಈ ಅಧ್ಯಾದೇಶವನ್ನು ಜಾರಿಗೊಳಿಸಲು ನೇಮಕ ಮಾಡಲಾದ ಎಲ್ಲ ಅಧಿಕಾರಿಗಳು ಮತ್ತು ವ್ಯಕ್ತಿಗಳು, ತಮ್ಮ ಪ್ರಕಾರ್ಯಗಳನ್ನು ನಿರ್ವಹಿಸುತ್ತಿರುವ ಅಧಿಕಾರ ಕ್ಷೇತ್ರದೊಳಗಿನ ಜಂಟಿ ಆಯುಕ್ತರು, ಅವರ ಮಾರ್ಗದರ್ಶನಕ್ಕಾಗಿ ನೀಡಬಹುದಾದಂಥ ಆಡಳಿತಾತ್ಮಕ ಸೂಚನೆಗಳನ್ನು ಪಾಲಿಸತಕ್ಕದ್ದು ಮತ್ತು ಅನುಸರಿಸತಕ್ಕದ್ದು.