(1) ರಾಜ್ಯ ಸರ್ಕಾರವು, ಪೂರ್ವ ಪ್ರಕಟಣೆಯ ಷರತ್ತಿಗೊಳಪಟ್ಟು, ಅಧಿಸೂಚನೆಯ ಮೂಲಕ, ಈ ಅಧ್ಯಾದೇಶದ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ನಿಯಮಗಳನ್ನು ರಚಿಸಬಹುದು.
(2) ವಿಶೇಷವಾಗಿ ಮತ್ತು ಹಿಂದೆ ಹೇಳಿದ ಅಧಿಕಾರದ ಸಾಮಾನ್ಯಾನ್ವಯಕ್ಕೆ ಬಾಧಕವಾಗದಂತೆ, ಅಂಥ ನಿಯಮಗಳು,-
(ಎ) ನಿಯಮಿಸಬೇಕೆಂದು ಈ ಅಧ್ಯಾದೇಶವು ಸ್ಪಷ್ಟವಾಗಿ ಅಗತ್ಯಪಡಿಸಿದ ಅಥವಾ ಅನುಮತಿಸಿದ ಎಲ್ಲಾ ವಿಷಯಗಳು;
(ಬಿ) ನೋಂದಣಿಯ ಉದ್ದೇಶಗಳಿಗಾಗಿ ಯಾವೊಬ್ಬ ವ್ಯಕ್ತಿಯ ಹೊಣೆಗಾರಿಕೆಯ ನಿರ್ಧರಣೆ;
(ಸಿ) ನಿಲ್ಲಿಸಿಬಿಟ್ಟಂಥ ಅಥವಾ ಯಾವುದರ ಒಡೆತನವು ಬದಲಾವಣೆಯಾಗಿದೆಯೋ ಆ ವ್ಯವಹಾರದ ಸಂಬಂಧದಲ್ಲಿ ಈ ಅಧ್ಯಾದೇಶದ ಅಡಿಯಲ್ಲಿಯ ತೆರಿಗೆ ನಿರ್ಧರಣೆ;
(ಡಿ) ವಿವರ ಪತ್ರ ಅಥವಾ ವಿವರ ಪಟ್ಟಿಕೆಗಳ ಒಪ್ಪಿಸುವಿಕೆ ಮತ್ತು ದಸ್ತಾವೇಜುಗಳ ಹಾಜರುಪಡಿಸುವಿಕೆಯನ್ನು ಒತ್ತಾಯಿಸುವುದು ಮತ್ತು ವ್ಯಕ್ತಿಗಳ ಹಾಜರಾತಿಯನ್ನು ಅಮಲ್ಜಾರಿಗೊಳಿಸುವುದು ಹಾಗೂ ಅವರನ್ನು ಪ್ರಮಾಣ ಅಥವಾ ಸತ್ಯ ದೃಢೀಕರಣದ ಮೇಲೆ ವಿಚಾರಣೆ ಮಾಡುವುದು;
(ಇ) ಈ ಅಧ್ಯಾದೇಶದ ಅಡಿಯಲ್ಲಿ ಯಾವುದೇ ನಿಯಮಿಸಲಾದ ಪ್ರಾಧಿಕಾರದ ಮುಂದೆ ಅಥವಾ ಅಂಥ ಪ್ರಾಧಿಕಾರದ ಯಾವುದೇ ತೀರ್ಮಾನದ ಮೇಲಿನ ಅಪೀಲು ಅಥವಾ ಪುನರೀಕ್ಷಣೆಯಲ್ಲಿ ಒದಗಿಸಿದ ವಿವರ ಪಟ್ಟಿಕೆಗಳು ಅಥವಾ ಹಾಜರುಪಡಿಸಿದ ಲೆಕ್ಕ ಪತ್ರಗಳು ಅಥವಾ ದಸ್ತಾವೇಜುಗಳು ಅಥವಾ ಕೊಟ್ಟ ಯಾವುದೇ ಬಗೆಯ ಸಾಕ್ಷ್ಯವನ್ನು ರಹಸ್ಯವಾಗಿಡುವಂತೆ ಖಚಿತ ಪಡಿಸಿಕೊಳ್ಳುವುದು;
(ಎಫ್) ಈ ಅಧ್ಯಾದೇಶದ ಉಪಬಂಧಗಳನ್ನು ಜಾರಿಗೊಳಿಸುವ ಉದ್ದೇಶಕ್ಕಾಗಿ ನೇಮಕಗೊಂಡ ಅಧಿಕಾರಿಗಳ ಕರ್ತವ್ಯಗಳು ಮತ್ತು ಅಧಿಕಾರಗಳು;
(ಜಿ) ನೋಂದಣಿ ಪ್ರಮಾಣ ಪತ್ರಗಳು ಅಥವಾ ಅಂಥ ಪ್ರಮಾಣ ಪತ್ರಗಳ ಅಥವಾ ಯಾವುದೇ ಇತರ ದಸ್ತಾವೇಜಿನ ಪ್ರತಿಗಳ ನೀಡಿಕೆಗಾಗಿ ಸಂದಾಯ ಮಾಡಬೇಕಾದ ಶುಲ್ಕಗಳು;
(ಎಚ್) ಪ್ರವರ್ತಕರು ಅಥವಾ ವ್ಯಕ್ತಿಗಳಿಂದ ಮಾಡಲಾದ ಲಾಟರಿ ಟಿಕೆಟ್ಗಳ ಸ್ವೀಕೃತಿಗಳು ಅಥವಾ ಖರೀದಿಗಳ ಮತ್ತು ಮಾರಾಟಗಳ ದಸ್ತಾವೇಜುಗಳ ಅಥವಾ ಲೆಕ್ಕ ಪತ್ರಗಳ ನಿರ್ವಹಣೆ ಮತ್ತು ಅವುಗಳನ್ನು ರಕ್ಷಿಸಿಡತಕ್ಕ ಅವಧಿ.
(ಐ) ಈ ಅಧ್ಯಾದೇಶದ ಅಡಿಯಲ್ಲಿಯ ವ್ಯವಹರಣೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನ ಮತ್ತು ಅಳವಡಿಸಿ ಕೊಳ್ಳಬೇಕಾದ ನಮೂನೆಗಳನ್ನು ಸಾಮಾನ್ಯವಾಗಿ ನಿಯಂತ್ರಿಸುವುದು;
(ಜಿ) ಈ ಅಧ್ಯಾದೇಶದಲ್ಲಿ ಉಪಬಂಧಿಸಿರದ ಅಥವಾ ಸಾಕಷ್ಟು ಉಪಬಂಧಿಸಿರದ, ಸರ್ಕಾರದ ಅಭಿಪ್ರಾಯದಲ್ಲಿ ಈ ಅಧ್ಯಾದೇಶದ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ಉಪಬಂಧ ಅವಶ್ಯವಾಗಿರು ವಂಥ ಯಾವುದೇ ಇತರ ವಿಷಯ, - ಇವುಗಳಿಗಾಗಿ ಉಪಬಂಧಿಸಬಹುದು.
(3) ಮೇಲಿನ (1)ನೇ ಉಪಪ್ರಕರಣದ ಅಥವಾ (2)ನೇ ಉಪಪ್ರಕರಣದ ಅಡಿಯಲ್ಲಿ ನಿಯಮಗಳನ್ನು ರಚಿಸುವಲ್ಲಿ ಸರ್ಕಾರವು, ಅದರ ಉಲ್ಲಂಘನೆಯ ತಪ್ಪಿತಸ್ಥನಾದ ವ್ಯಕ್ತಿಯು ಮೊದಲನೇ ದರ್ಜೆಯ ಮ್ಯಾಜಿಸ್ಟ್ರೇಟನಿಂದ ಅಪರಾಧ ನಿರ್ಣಯವಾದ ಮೇಲೆ ಐದು ಸಾವಿರ ರೂಪಾಯಿಗಳವರೆಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ಮತ್ತು ಆ ಉಲ್ಲಂಘನೆಯು ಮುಂದುವರೆಯುತ್ತಿರುವಲ್ಲಿ, ಮೊದಲನೆಯ ಉಲ್ಲಂಘನೆಯ ತರುವಾಯ, ಆ ಉಲ್ಲಂಘನೆಯು ಮುಂದುವರೆಯುತ್ತಿರುವ ಪ್ರತಿಯೊಂದು ದಿವಸಕ್ಕೆ ಒಂದು ನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾಂಥ ಇನ್ನೂ ಹೆಚ್ಚಿನ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದೆಂದು ಉಪಬಂಧಿಸಬಹುದು.
(4) ಈ ಅಧ್ಯಾದೇಶದ ಅಡಿಯಲ್ಲಿನ ಯಾವುದೇ ನಿಯಮವನ್ನು ಪೂರ್ವಾನ್ವಯ ಪರಿಣಾಮವುಳ್ಳಂತೆ ರಚಿಸಬಹುದು ಮತ್ತು ಯಾವುದೇ ಅಂಥ ನಿಯಮವನ್ನು ರಚಿಸಿದಾಗ, ಅಂಥ ನಿಯಮವನ್ನು ರಚಿಸುವುದಕ್ಕಾಗಿನ ಕಾರಣಗಳನ್ನು ನಿರ್ದಿಷ್ಟಪಡಿಸುವ ವಿವರ ಪತ್ರವನ್ನು 38ನೇ ಪ್ರಕರಣದ ಅಡಿಯಲ್ಲಿಯ ನಿಯಮದೊಂದಿಗೆ ರಾಜ್ಯ ವಿಧಾನ ಮಂಡಲದ ಎರಡೂ ಸದನಗಳ ಮುಂದೆ ಮಂಡಿಸತಕ್ಕದ್ದು ಮತ್ತು ಎಲ್ಲಾ ನಿಯಮಗಳು, 38ನೇ ಪ್ರಕರಣದ ಅಡಿಯಲ್ಲಿ ಮಾಡಿದ ಯಾವುವೇ ಮಾರ್ಪಾಟುಗಳಿಗೆ ಒಳಪಟ್ಟು ಈ ಅಧ್ಯಾದೇಶದಲ್ಲಿ ಉಪಬಂಧಿಸಿದ್ದರೆ ಹೇಗೋ ಹಾಗೆ ಪರಿಣಾಮವುಳ್ಳವುಗಳಾಗಿರತಕ್ಕದ್ದು.