(1) BIL ಸರ್ಕಾರಿ ನೌಕರನು, ನಿಯಮಿಸಲಾದ ಪ್ರಾಧಿಕಾರದ ಪೂರ್ವಾನುಮತಿಯನ್ನು ಪಡೆದ ಹೊರತು, ಯಾವುದೇ ವೃತ್ತ ಪತ್ರಿಕೆ ಅಥವಾ ಇತರ ನಿಯತಕಾಲಿಕ ಪ್ರಕಟಣೆಯ ಪೂರ್ಣ ಅಥವಾ ಭಾಗಶಃ ಒಡೆತನವನ್ನು ಹೊಂದಿರತಕ್ಕದ್ದಲ್ಲ ಅಥವಾ ಅವುಗಳ ಸಂಪಾದನಾ ಕಾರ್ಯ ಅಥವಾ ವ್ಯವಸ್ಥಾಪನಾ ಕಾರ್ಯಮಾಡತಕ್ಕದ್ದಲ್ಲ ಅಥವಾ ಅವುಗಳಲ್ಲಿ ಭಾಗವಹಿಸತಕ್ಕದ್ದಲ್ಲ.
(2) ಯಾರೇ ಸರ್ಕಾರಿ ನೌಕರನು, ನೇಮಿಸಲಾದ ಪ್ರಾಧಿಕಾರದ ಪೂರ್ವಾನುಮತಿಯನ್ನು ಪಡೆದ ಹೊರತು ಅಥವಾ ಆತನ ಕರ್ತವ್ಯದ ಪ್ರಮಾಣಿಕ ನಿರ್ವಹಣೆ ಸಂದರ್ಭದಲ್ಲಿ ಹೊರತು.-
ತಾನೇ ಅಥವಾ ಪ್ರಕಾಶಕರ ಮೂಲಕ ಪುಸ್ತಕವನ್ನು ಪ್ರಕಟಿಸತಕ್ಕದ್ದಲ್ಲ a) ಅಥವಾ ಪುಸ್ತಕಕ್ಕೆ ಅಥವಾ ಲೇಖನಗಳ ಸಂಕಲನಕ್ಕೆ ಲೇಖನವನ್ನು ಬರೆದುಕೊಡತಕ್ಕದ್ದಲ್ಲ;
ಆಕಾಶವಾಣಿ ಪ್ರಸಾರ, ಚಲನಚಿತ್ರ ಅಥವಾ ದೂರದರ್ಶನ, ದಾರವಾಹಿಗಳಲ್ಲಿ ಭಾಗವಹಿಸತಕ್ಕದ್ದಲ್ಲ . ಅಥವಾ ತನ್ನ ಹೆಸರಿನಲ್ಲಾಗಲ್ಲಿ. ಅಥವಾ ಅನಾಮಧೇಯವಾಗಿಯಾಗಲೀ ಅಥವಾ ಗುಪ್ತ ನಾಮದಿಂದಾಗಲೀ ಅಥವಾ ಬೇರೋಬ್ಬ ಹೆಸರಿನಲ್ಲಾಗಲೀ ಯಾವುದೇ ವೃತ್ತ ಪತ್ರಿಕೆ ಅಥವಾ ನಿಯತಕಾಲಿಕೆಗೆ ಲೇಖನವನ್ನು ಬರೆಯತಕ್ಕದ್ದಲ್ಲ ಅಥವಾ ಪತ್ರವನ್ನು ಬರೆಯತಕ್ಕದ್ದಲ್ಲ.
ಪರಂತು,
(i) ಅಂತಹ ಪ್ರಕಟಣೆಯು ಪ್ರಕಾಶಕರ ಮೂಲಕ ಆಗಿದ್ದರೆ ಮತ್ತು ಅದು ಸಂಪೂರ್ಣವಾಗಿ ಸಾಹಿತ್ಯಕ, ಕಲಾತ ಅಥವಾ ವೈಜ್ಞಾನಿಕ ಸ್ವರೂಪದ್ಧಾಗಿದ್ದರೆ: ಅಥವಾ ಅಂತಕ ಆಕಾಶವಾಣಿ ದೂರದರ್ಶನ ಪುಸಾರ, ಚಲನಚಿತ್ರ ಅಥವಾ (ii) ಬರವಣಿಗೆಯು ಸಂಪೂರ್ಣವಾಗಿ ಸಾಹಿತ್ಯಕ, ಕಲಾತ್ ಅಥವಾ ವೈಜ್ಞಾನಿಕ ಸ್ವರೂಪದ್ಧಾಗಿದ್ದರೆ ಅಂತಹ ಯಾವುದೇ ಅನುಮತಿಯು ಅಗತ್ಯವಿರತಕ್ಕದ್ದಲ್ಲ.
ಮತ್ತೂ ಪರಂತು, ಸರ್ಕಾರಿ ನೌಕರನು, ನೇಮಿಸಿದ ಪ್ರಾಧಿಕಾರದ ಮಂಜೂರಾತಿ ಇಲ್ಲದೇ ವಾಣಿಜ್ಯ ಲಾಭವಿಲ್ಲದ ಹಾಗೂ ತನ್ನ ಅಧಿಕೃತ ಕರ್ತವ್ಯಗಳಿಗೆ ಬಾಧಕವಾಗದಂತೆ ಕಲಾತ್ಮಕ, ಸಾಹಿತ್ಯಕ, ವೈಜ್ಞಾನಿಕ. ಮತ್ತು ಇತರ ಅಂತಹ ಸಾಂಸ್ಕೃತಿಕ ಅಥವಾ ಶೈಕ್ಷಣಿಕ ಚಟುವಟಿಕೆಗಳಲ್ಲಿ, ಸಾಂದರ್ಭಿಕವಾಗಿ ತನ್ನನ್ನು ತೊಡಗಿಸಿಕೊಳ್ಳಬಹುದು.