ಯಾರೇ ಸರ್ಕಾರಿ ನೌಕರನು,-
(1) ವಧು/ ವರದಕ್ಷಿಣೆಯನ್ನು ಕೊಡತಕ್ಕದ್ದಲ್ಲ ಅಥವಾ ತೆಗೆದುಕೊಳ್ಳತಕ್ಕದ್ದಲ್ಲ ಅಥವಾ ಕೊಡಲು ಅಥವಾ ತೆಗೆದುಕೊಳ್ಳಲು ದುಷ್ಟೇರಿಸತಕ್ಕದ್ದಲ್ಲ; ಅಥವಾ
(2) ವಧುವಿನ ಅಥವಾ ಸಂದರ್ಭಾನುಸಾರ ವರನ ತಂದೆ ತಾಯಿಯರನ್ನು ಅಥವಾ ಪೋಷಕರನ್ನು ವಧು/ವರದಕ್ಷಿಣೆಯನ್ನು ಕೊಡುವಂತೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒತ್ತಾಯಪಡಿಸತಕ್ಕದ್ದಲ್ಲ.
ವಿವರಣೆ:- ಈ ನಿಯಮದ ಉದ್ದೇಶಗಳಿಗಾಗಿ ವಧು/ವರದಕ್ಷಿಣೆಯು, ವಧು/ವರದಕ್ಷಿಣೆ ನಿಷೇಧ ಅಧಿನಿಯಮ, 1961 (ಕೇಂದ್ರ ಅಧಿನಿಯಮ 1961ರ... 28)ರಲ್ಲಿ ಕೊಟ್ಟಿರುವ ಅರ್ಥವನ್ನೇ ಹೊಂ೦ದಿರತಕ್ಕದ್ದು.