(1) ಈ ನಿಯಮಗಳಲ್ಲಿ ಅನ್ಯಥಾ ಉಪಬಂಧಿಸಿರುವುದನ್ನುಳಿದು, ಯಾರೇ ಸರ್ಕಾರಿ ನೌಕರನು, ಯಾವುದೇ ಉಡುಗೊರೆಯನ್ನು ಸ್ವೀಕರಿಸತಕ್ಕದ್ದಲ್ಲ ಅಥವಾ ತನ್ನ ಕುಟುಂಬದ ಯಾರೇ ಸದಸ್ಯನು ಅಥವಾ ಅವನ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಇತರ ಯಾರೇ ವ್ಯಕ್ತಿಯು ಯಾವುದೇ ಉಡುಗೊರೆಯನ್ನು ಸ್ವೀಕರಿಸಲು ಅನುಮತಿಸತಕ್ಕದ್ದಲ್ಲ.
ವಿವರಣೆ: "ಉಡುಗೊರೆ" ಎಂಬ ಅಭಿವ್ಯಕ್ತಿಯು, ಸರ್ಕಾರಿ ನೌಕರನೊಡನೆ ಯಾವುದೇ ರೀತಿಯ ಅಧಿಕೃತ ವ್ಯವಹಾರ ಹೊಂದಿರದ ಹತ್ತಿರದ ಸಂಬಂಧಿಯನ್ನು ಅಥವಾ ಆಪ್ತ ಸ್ನೇಹಿತನನ್ನು ಹೊರತುಪಡಿಸಿ ಯಾರೇ ವ್ಯಕ್ತಿಯು ಒದಗಿಸಿದ ಉಚಿತ ಸಾರಿಗೆ, ಊಟ, ವಸತಿ ಅಥವಾ ಇತರ ಸೇವೆ ಅಥವಾ ಯಾವುದೇ ಇತರ ಹಣಕಾಸಿನ ಅನುಕೂಲಗಳನ್ನು ಒಳಗೊಳ್ಳುತ್ತದೆ.
ಟಿಪ್ಪಣಿ |: ಸಾಂದರ್ಭಿಕವಾಗಿ ಕೊಡಿಸುವ ಊಟ, ವಾಹನದಲ್ಲಿ ಕರೆದೊಯ್ಯುವುದು ಅಥವಾ ಇನ್ನಿತರ ಸ್ಥಳೀಯ ಆದರಾತಿಥ್ಯವನ್ನು ಉಡುಗೊರೆಯೆಂದು ಭಾವಿಸತಕ್ಕದ್ದಲ್ಲ.
ಟಿಪ್ಪಣಿ ॥: ಸರ್ಕಾರಿ ನೌಕರನು, ತನ್ನ ಜೊತೆ ಅಧಿಕೃತ ವ್ಯವಹಾರವನ್ನು ಹೊಂದಿರುವ ವ್ಯಕ್ತಿಯಿಂದಾಗಲಿ ಅಥವಾ ಕೈಗಾರಿಕೆ ಅಥವಾ ವಾಣಿಜ್ಯ ಫರ್ಮ್ಗಳು ಅಥವಾ ಸಂಸ್ಥೆಗಳಿಂದಾಗಲಿ ವೈಭವದ ಆತಿಥ್ಯವನ್ನು ಅಥವಾ ಪದೇ ಪದೇ ಆತಿಥ್ಯವನ್ನು ಸ್ವೀಕರಿಸುವುದರಿಂದ ದೂರವಿರತಕ್ಕದ್ದು.
(2) ವಿವಾಹಗಳು, ವಾರ್ಷಿಕೋತ್ಸವಗಳು, ಉತ್ತರಕ್ರಿಯೆಗಳು ಅಥವಾ ಧಾರ್ಮಿಕ ಸಮಾರಂ೦ಭಗಳಂಥ ಸಂದರ್ಭಗಳಲ್ಲಿ ಆ ರೀತಿಯಾಗಿ ಉಡುಗೊರೆ ನೀಡುವುದು ರೂಢಿಯಲ್ಲಿರುವ ಧಾರ್ಮಿಕ ಅಥವಾ ಸಾಮಾಜಿಕ ಪದ್ಮತಿಗನುಗುಣವಾಗಿದ್ದರೆ, ಸರ್ಕಾರಿ ನೌಕರನು ತನ್ನ ಯಾರೇ ಹತ್ತಿರದ ಸಂಬಂ೦ಧಿಗಳಿಂದ ಉಡುಗೊರೆಯನ್ನು ಸ್ವೀಕರಿಸಬಹುದು. ಆದರೆ ಯಾವುದೇ ಅಂಥ ಉಡುಗೊರೆಯ ಮೌಲ್ಯವು, ಸರ್ಕಾರಿ ನೌಕರರ ಮಾಸಿಕ ಮೂಲ ವೇತನಕ್ಕಿಂತ ಹೆಚ್ಚಾಗಿದ್ದರೆ ಅವನು ನಿಯಮಿಸಲಾದ ಪ್ರಾಧಿಕಾರಕ್ಕೆ ವರದಿ ಮಾಡತಕ್ಕದ್ದು.
(3) ಉಪ-ನಿಯಮ (2) ರಲ್ಲಿ ವಿರ್ದಿಷ್ಟಪಡಿಸಲಾದಂಥ ಸಂದರ್ಭಗಳಲ್ಲಿ, ಸರ್ಕಾರಿ ನೌಕರನು ತನ್ನೊಂ೦ದಿಗೆ ಯಾವುದೇ ರೀತಿಯ ಅಧಿಕೃತ ವ್ಯವಹಾರಗಳನ್ನು ಹೊಂದಿಲ್ಲದ ಆಪ್ತ ಸ್ನೇಹಿತನಿಂದ ಉಡುಗೊರೆಗಳನ್ನು ಸ್ವೀಕರಿಸಬಹುದು. ಆದರೆ ಯಾವುದೇ ಅಂಥ ಉಡುಗೊರೆಯ ಮೌಲ್ಯವು, ಸರ್ಕಾರಿ ನೌಕರರ ಮಾಸಿಕ ಮೂಲ ವೇತನದ ಅರ್ಥ ಭಾಗಕ್ಕಿಂತ ಹೆಚ್ಚಾಗಿದ್ದರೆ ಅವನು ನಿಯಮಿಸಿದ ಪ್ರಾಧಿಕಾರಕ್ಕೆ ವರದಿ ಮಾಡತಕ್ಕದ್ದು.
(4) ಇತರ ಯಾವುದೇ ಸಂದರ್ಭದಲ್ಲಿ, ಸರ್ಕಾರಿ ನೌಕರನು ಯಾವುದೇ ಉಡುಗೊರೆಯನ್ನು, ಅದರ ಮೌಲ್ಯವು, ಸರ್ಕಾರಿ ನೌಕರರ ಒಂದು BONY ಮೂಲ ವೇತನದ ಕಾಲು ಭಾಗಕ್ಕಿಂತ ಹೆಚ್ಚಾಗಿದ್ದರೆ, ನಿಯಮಿಸಲಾದ ಪ್ರಾಧಿಕಾರದ ಮಂಜೂರಾತಿಯನ್ನು ಪಡೆಯದೆ ಸ್ವೀಕರಿಸತಕ್ಕದ್ದಲ್ಲ ಅಥವಾ ಅವನ ಕುಟುಂಬದ ಯಾರೇ ಸದಸ್ಯನು ಅಥವಾ ಅವನ ಪರವಾಗಿ ಕಾರ್ಯನಿರ್ವಹಿಸುವ ಯಾರೇ ಇತರ ವ್ಯಕ್ತಿಯು ಸ್ವೀಕರಿಸಲು ಅನುಮತಿಸತಕ್ಕದ್ದಲ್ಲ.
(5) ಯಾವುದೇ ಉಡುಗೊರೆಯು ವಿಯಮಿಸಲಾದ ಪ್ರಾಧಿಕಾರದ ಅನುಮತಿ ಪಡೆಯದೆ ಸ್ವೀಕರಿಸಬಹುದಾದ ಉಡುಗೊರೆಯೇ ಎಂಬ ಬಗ್ಗೆ ಪ್ರಶ್ನೆ ಉದ್ಭವಿಸಿದರೆ ಅಥವಾ ಒಬ್ಬ ಸರ್ಕಾರಿ ನೌಕರನಿಗೆ, ತನಗೆ ನೀಡಲು ಆಹ್ವಾನಿಸಿದ ಉಡುಗೊರೆಯು ನಿಯಮಿಸಲಾದ ಪ್ರಾಧಿಕಾರದ ಅನುಮತಿ ಪಡೆಯದೆ ಸ್ವೀಕರಿಸಬಹುದಾದ ಉಡುಗೊರೆಯೇ ಎಂಬ ಅನುಮಾನವಿದ್ದರೆ, ಅದನ್ನು ಸರ್ಕಾರದ ಅಭಿಪ್ರಾಯಕ್ಕೆ ಕಳುಹಿಸತಕ್ಕದ್ದು ಮತ್ತು ಆ ಬಗ್ಗೆ ಸರ್ಕಾರವು ನೀಡುವ ತೀರ್ಮಾನವೇ ಅಂ೦ತಿಮವಾಗಿರತಕ್ಕದ್ದು.