(ಎ) ತಾನು ತತ್ಕಾಲದಲ್ಲಿ ಇರುವ ಯಾವುದೇ ಪ್ರದೇಶದಲ್ಲಿ ಮಾದಕ ಪಾನೀಯಗಳಿಗೆ ಅಥವಾ ಮಾದಕ ವಸ್ತುಗಳಿಗೆ ಸಂಬಂಧಪಟ್ಟ ಜಾರಿಯಲ್ಲಿರುವ ಯಾವುದೇ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.
(ಬಿ) ತನ್ನ ಅಧಿಕೃತ ಕರ್ತವ್ಯದ ಸಮಯದಲ್ಲಿ ಯಾವುದೇ ಅಮಲುಕಾರಕ ಮದ್ಯಪಾನ ಅಥವಾ ಮಾದಕ ವಸ್ತುಗಳ ಸೇವನೆಯ ಅಮಲಿನಲ್ಲಿರಬಾರದು.
(2) ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮಾದಕ ಪಾನೀಯವನ್ನು ಅಥವಾ ಮಾದಕ ವಸ್ತುವನ್ನು ಸೇವಿಸತಕ್ಕದ್ದಲ್ಲ;
(ಡಿ) ಕುಡಿದು ಮತ್ತೇರಿದ ಸ್ಥಿಶಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳತಕ್ಕದ್ದಲ್ಲ ಮತ್ತು
(ಇ) ರೂಢಿಗತವಾಗಿ ಯಾವುದೇ ಮಾದಕ ಪಾನೀಯವನ್ನು ಅಥವಾ ಮಾದಕ ವಸ್ತುವನ್ನು ಅತಿಯಾಗಿ ಸೇವನೆ ಮಾಡತಕ್ಕದ್ದಲ್ಲ.
ವಿವರಣೆ: ಈ ನಿಯಮದ ಉದ್ದೇಶಕ್ಕಾಗಿ AWE WAT ಸ್ಮಳ'. ಎಂದರೆ ಹಣ ಪಾವತಿ ಮಾಡಿ ಅಥವಾ ಅನ್ಯಥಾ ಸಾರ್ವಜನಿಕರಿಗೆ (ವಾಹನವೂ ಸೇರಿದಂತೆ) ಪ್ರವೇಶಾವಕಾಶವಿರುವ ಅಥವಾ ಪ್ರವೇಶವನ್ನು ಅನುಮತಿಸಲಾಗಿರುವ ಯಾವುದೇ ಸಾರ್ವಜನಿಕ AY ಅಥವಾ ಆವರಣಗಳು ಎಂದು ಅರ್ಥ: ಆದರೆ, ಸಕ್ಷಮ ಪ್ರಾಧಿಕಾರಿಯಿಂದ ಅನುಮತಿ ಪತ್ರ ಪಡೆದ ಆವರಣಗಳು ಒಳಗೊಳ್ಳುವುದಿಲ್ಲ. 32. ಅಪ್ರಾಪ, ಮಕ್ಕಳನ್ನು ಕೆಲಸಗಳಿಗೆ ತೊಡಗಿಸುವುದು:
(1) ಯಾರೇ ಸರ್ಕಾರಿ ನೌಕರನು ತನ್ನ ಗೃಹ ಕೃತ್ಯಕ್ಕಾಗಿ ಅಥವಾ ತನ್ನ ಅಧಿಕೃತ ಕಾರ್ಯದ ಬಳಕೆಗಾಗಿ. ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಗುವನ್ನು ಕೆಲಸಕ್ಕೆ ಇಟ್ಟುಕೊಳ್ಳತಕ್ಕದ್ದಲ್ಲ;
(2) ಯಾರೇ ಸರ್ಕಾರಿ ನೌಕರನು (1)ನೇ ಉಪನಿಯಮವನ್ನು ಉಲ್ಲಂಘನೆ ಮಾಡುವುದು ತೀವ್ರ ದುರ್ನಡತೆ ಎನಿಸಿಕೊಳ್ಳುತ್ತದೆ.