(1) ಪ್ರತಿಯೊಬ್ಬ ಸರ್ಕಾರಿ ನೌಕರನು ಯಾವುದೇ ಸೇವೆಗೆ ಅಥವಾ ಹುದ್ದೆಗೆ ಮೊದಲು ನೇಮಕವಾಗುವಾಗ, ಆತನು ತನ್ನ ಸ್ವಂತ ಹೆಸರಿನಲ್ಲಾಗಲಿ ಅಥವಾ ತನ್ನ ಕುಟುಂಬದ ಯಾರೇ ಸದಸ್ಯರ ಹೆಸರಿನಲ್ಲಾಗಲಿ ಅಥವಾ ಯಾವುದೇ ಇತರೆ ವ್ಯಕ್ತಿಯ ಹೆಸರಿನಲ್ಲಾಗಲಿ ಪಿತ್ರಾರ್ಜಿತವಾಗಿ ಬಂದ ಸ್ವಯಂ೦ ಆರ್ಜಿಸಿದ ಅಥವಾ ಗುತ್ತಿಗೆ ಅಥವಾ ಅಡಮಾನದ ಮೇಲೆ ತಾನು ಹೊಂದಿರುವ ಸ್ಮಿರಾಸ್ತಿಯ ಸಂಪೂರ್ಣ ವಿವರಗಳನ್ನು ನೀಡಿ, ನಿಗದಿತ ನಮೂನೆಯಲ್ಲಿ ತನ್ನ ಚರ ಮತ್ತು ಸ್ಮಿರಾಸ್ತಿಗಳ ವಿವರ ಪಟ್ಟೆಯನ್ನು ಪೂರಕ ದಾಖಲೆಗಳೊಂದಿಗೆ ಮೂರು ತಿಂಗಳೊಳಗೆ ಸಲ್ಲಿಸತಕ್ಕದ್ದು.
(2) ಹಾಗೂ ತರುವಾಯ ಸರ್ಕಾರಿ ನೌಕರನು ಡಿಸೆಂಬರ್ 31ಕ್ಕೆ ಅಂತ್ಯಗೊಳ್ಳುವ ಪ್ರತಿ ಹನ್ನೆರಡು ತಿಂಗಳಿಗೊಮ್ಮೆ ತನ್ನ ಮತ್ತು ತನ್ನ ಕುಟುಂಬದ ಎಲ್ಲ ಸದಸ್ಯರ ಆಸ್ತಿಗಳ ಮತ್ತು ಹೊಣೆಗಾರಿಕೆಗಳ ವಾರ್ಷಿಕ ವಿವರ ಪಟ್ಟಿಯನ್ನು ಈ ಮುಂ೦ದಿನವುಗಳ ಬಗ್ಗೆ ಪೂರ್ಣ ವಿವರಗಳನ್ನು ಒಳಗೊಂಡಂ೦ತೆ ಸರ್ಕಾರವು ನಿರ್ದಿಷ್ಟಪಡಿಸಿದ ನಮೂನೆಯಲ್ಲಿ ಸಲ್ಲಿಸತಕ್ಕದ್ದು,-
(ಎ) ತಾನು ಅಥವಾ ತನ್ನ ಕುಟುಂಬದ ಯಾರೇ ಸದಸ್ಯವಿಗೆ ಪಿತ್ರಾರ್ಜತವಾಗಿ ಬಂದ ಅಥವಾ ತಾನು ಅಥವಾ ತನ್ನ ಕುಟುಂಬದ ಯಾರೇ ಸದಸ್ಯನು ಒಡೆತನ ಹೊಂದಿರುವ ಅಥವಾ ತನ್ನ ಹೆಸರಿನಲ್ಲಾಗಲೀ ಅಥವಾ ತನ್ನ ಕುಟುಂಬದ ಯಾರೇ ಸದಸ್ಯನ ಹೆಸರಿನಲ್ಲಾಗಲೀ ಅಥವಾ ಇತರ ಯಾರೇ ವ್ಯಕ್ತಿಗಳ ಹೆಸರಿನಲ್ಲಾಗಲೀ ಗುತ್ತಿಗೆ ಅಥವಾ ಅಡಮಾನದ ಮೂಲಕ ತನ್ನ ಅಥವಾ ತನ್ನ ಕುಟುಂಬದ ಯಾರೇ ಸದಸ್ಯನು ಅರ್ಜಿಸಿರುವ ಸ್ನಿರಾಸ್ತಿ;
(ಬಿ) ತನಗೆ ಅಥವಾ ತನ್ನ ಕುಟುಂಬದ ಯಾರೇ ಸದಸ್ಯರಿಗೆ ಪಿತ್ರಾರ್ಜಿತವಾಗಿ ಬಂದ ಅಥವಾ ಅದೇ ರೀತಿ ತಾನು ಅಥವಾ ತನ್ನ ಕುಟುಂಬದ ಯಾರೇ ಸದಸ್ಯನು ಒಡೆತನ ಹೊಂದಿದ, ಆರ್ಜಿಸಿದ ಅಥವಾ ಹೊಂದಿರುವ ಷೇರುಗಳು, ಡಿಬೆಂಚರುಗಳು, ಅಂಚೆ ಇಲಾಖೆಯ ಸಂಚಿತ ಅವಧಿ ಠೇವಣಿಗಳು ಮತ್ತು ಬ್ಯಾಂಕ್ ಠೇವಣಿಗಳೂ ಸೇರಿದಂತೆ ನಗದು;
(ಸಿ) ತನಗೆ ಅಥವಾ ತನ್ನ ಕುಟುಂಬದ ಯಾರೇ ಸದಸ್ಯವಿಗೆ ಪಿತ್ರಾರ್ಜತವಾಗಿ ಬಂದ ಅಥವಾ ಅದೇ ರೀತಿ ತಾನು ಅಥವಾ ತನ್ನ ಕುಟುಂಬದ ಯಾರೇ ಸದಸ್ಯನು ಒಡೆತನ ಹೊಂದಿದ, ಆರ್ಜಿಸಿದ ಅಥವಾ ಹೊಂದಿರುವ ಇತರ ಯಾವುದೇ ಚರಾಸ್ತಿಯ ಮೌಲ್ಯವು ಪ್ರಸ್ತುತ ಹೊಂದಿರುವ ಹುದ್ದೆಯಲ್ಲಿ ಪಡೆಯುತ್ತಿರುವ ಮೂಲವೇತನಕ್ಕಿಂತ ಹೆಚ್ಚಾಗಿದ್ದಲ್ಲಿ;
(ಡಿ) ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತಾನು ಅಥವಾ ತನ್ನ ಕುಟುಂಬದ ಯಾರೇ ಸದಸ್ಯನು ಮಾಡಿಕೊಂಡ ಸಾಲ ಅಥವಾ ಹೊತ್ತಿರುವ ಇತರ ಹೊಣೆಗಾರಿಕೆಗಳು;
ಟಿಪ್ಪಣಿ : ಎಲ್ಲ ವಿವರಪಟ್ಟಿಗಳಲ್ಲೂ ಹತ್ತು ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯ ಚರ ಬಾಬುಗಳ ಮೌಲ್ಯವನ್ನು ಸೇರಿಸಿ ಒಂದೇ ಮೊತ್ತದಲ್ಲಿ ತೋರಿಸಬಹುದು. ಬಟ್ಟೆಗಳು, ಪಾತ್ರೆಗಳು, ಪಿಂಗಾಣಿ ಸಾಮಾನುಗಳು ಅಥವಾ ಪುಸ್ತಕಗಳಂಥ ದಿನಬಳಕೆಯ ವಸ್ತುಗಳ ಮೌಲ್ಯವನ್ನು ಅಂಥ ಖವಿವರಪಟ್ಟ್ನಿಗಳಲ್ಲಿ ಸೇರಿಸಬೇಕಾಗಿಲ್ಲ.
(3) ಯಾರೇ ಸರ್ಕಾರಿ ನೌಕರನು ಅಥವಾ ಅವನ ಕುಟುಂಬದ ಯಾರೇ ಸದಸ್ಯನು ನಿಯಮಿಸಲಾದ ಪ್ರಾಧಿಕಾರಕ್ಕೆ ಮೊದಲೇ ತಿಳಿಸಿದ ಹೊರತು, ತನ್ನ ಸ್ವಂತ ಹೆಸರಿನಲ್ಲಾಗಲೀ ಅಥವಾ ತನ್ನ ಕುಟುಂಬದ ಯಾರೇ ಸದಸ್ಯನ ಹೆಸರಿನಲ್ಲಾಗಲೀ ಗುತ್ತಿಗೆಯ, ಅಡಮಾನದ, ಖರೀದಿಯ, ಮಾರಾಟದ, ಉಡುಗೊರೆಯ ಮೂಲಕ ಅಥವಾ ಅನ್ಯಥಾ ಯಾವುದೇ ಸ್ಥಿರ ಸ್ವತ್ತನ್ನು ಆರ್ಜಿಸತಕ್ಕದ್ದಲ್ಲ ಅಥವಾ ವಿಲೇ ಮಾಡತಕ್ಕದ್ದಲ್ಲ:
BOOS. ಒಬ್ಬ ಸರ್ಕಾರಿ ನೌಕರನು ಸಮರ್ಥನೀಯ ಕಾರಣಗಳಿಂದಾಗಿ ನಿಯಮಿತ ಪ್ರಾಧಿಕಾರಿಗೆ ಮೊದಲೇ ತಿಳಿಸದೇ ಯಾವುದೇ ಸ್ಥಿರ ಸ್ವತ್ತನ್ನು ಅರ್ಜಿಸಿದ್ದಲ್ಲಿ ಅಥವಾ ವಿಲೇ ಮಾಡಿದಲ್ಲಿ ಆತ ಅಂತಹ ವ್ಯವಹಾರ ಕೈಗೊಂಡ ಎರಡು ತಿಂಗಳ ಒಳಗಾಗಿ ವಿವರಗಳು ಹಾಗೂ ಪೂರಕ ದಾಖಲೆಗಳು ಹಾಗೂ ಸಮರ್ಥನೀಯ ಕಾರಣಗಳೊಂದಿಗೆ ನಿಯಮಿತ ಪ್ರಾಧಿಕಾರಿಗೆ ವರದಿ ಮಾಡತಕ್ಕದ್ದು. ನಿಯಮಿತ ಪ್ರಾಧಿಕಾರಿಯು ಸರ್ಕಾರಿ ನೌಕರನು ನೀಡಿದ ಕಾರಣಗಳು ಅಂಗೀಕಾರಾರ್ಹವೆಂದು ತೃಪ್ತಿಪಟ್ಟಲ್ಲಿ, ಸರ್ಕಾರಿ ನೌಕರನು ಸಲ್ಲಿಸಿದ ದಾಖಲೆಗಳು ಹಾಗೂ ವಿವರಗಳನ್ನು ಪರಿಶೀಲಿಸಿ. ಅಂತಹ ವ್ಯವಹರಣೆಯನ್ನು ಘಟನೋತ್ತರವಾಗಿ ಟಿಪ್ಪಣಿ ಮಾಡಿಕೊಳ್ಳಬಹುದು.
ಪರಂತು, ಸರ್ಕಾರಿ ನೌಕರನು, ಅಂ೦ಥ ಯಾವುದೇ ವ್ಯವಹಾರವನ್ನು,- ಸರ್ಕಾರಿ ನೌಕರನೊಂದಿಗೆ ಅಧಿಕೃತ ವ್ಯವಹಾರವನ್ನು ಹೊಂದಿರುವ ವ್ಯಕ್ತಿಯೊಂದಿಗೆ ಮಾಡುತ್ತಿರುವಲ್ಲಿ ಅದಕ್ಕೆ ನಿಯಮಿಸಲಾದ ಪ್ರಾಧಿಕಾರದ ಪೂರ್ವ ಮಂಜೂರಾತಿಯನ್ನು ಪಡೆದುಕೊಳ್ಳತಕ್ಕದ್ದು:
ಮತ್ತೂ ಪರಂತು ಈ ಉಪನಿಯಮದಲ್ಲಿರುವುದು ಯಾವುದೂ, ಸರ್ಕಾರಿ ನೌಕರನ ಕುಟುಂಬದ ಸದಸ್ಯನು ಸರ್ಕಾರಿ ನೌಕರನದೇ/ಳದೇ ವಿಧಿಗಳಿಂದ ಬೇರೆಯದೇ ಆದ ಆತನ/ ಆಕೆಯ ಸ್ವಂತ ನಿಧಿಗಳಿಂದ (ಉಡುಗೊರೆಗಳು, ಪಿತ್ರಾರ್ಜಿತ, ಮೊದಲಾದವುಗಳೂ ಸೇರಿದಂತೆ) ಆತನ ಅಥವಾ ಆಕೆಯ ಸ್ವಂತ ಹೆಸರಿನಲ್ಲಿ ಮತ್ತು ಆತನ ಅಥವಾ ಆಕೆಯ ಸ್ವಂತ ಹಕ್ಕಿವಿಂದ ಮಾಡಿಕೊಂಡ ವ್ಯವಹಾರಗಳಿಗೆ ಅನ್ವಯವಾಗತಕ್ಕದ್ದಲ್ಲ.
(4) ಪ್ರತಿಯೊಬ್ಬ ಸರ್ಕಾರಿ ನೌಕರನು ತನ್ನ ಸ್ವಂತ ಹೆಸರಿನಲ್ಲಾಗಲೀ ಅಥವಾ ತನ್ನ ಕುಟುಂಬದ ಯಾರೇ ಸದಸ್ಯನ ಹೆಸರಿನಲ್ಲಾಗಲೀ ತಾನು ಅಥವಾ ತನ್ನ ಕುಟುಂಬದ ಯಾರೇ ಸದಸ್ಯರು ಒಡೆತನ ಹೊಂದಿರುವ ಅಥವಾ ಧಾರಣ ಮಾಡಿರುವ ಚರಾಸ್ಥಿಯ ಸಂಬಂಧದಲ್ಲಿ ಮಾಡುವ ಪ್ರತಿಯೊಂದು ವ್ಯವಹಾರವನ್ನು, ಯಾವುದೇ ಹುದ್ದೆಯನ್ನು ಹೊಂದಿರುವ ಸರ್ಕಾರಿ ನೌಕರನ ಸಂಬಂಧದಲ್ಲಿ ಅಂತಹ ಸ್ವತ್ತಿನ ಮೌಲ್ಯವು ಸರ್ಕಾರಿ ನೌಕರನ ಮಾಸಿಕ ಮೂಲವೇತನ ಮೀರಿದರೆ. ನಿಯಮಿಸಿದ ಪ್ರಾಧಿಕಾರಕ್ಕೆ ವರದಿ ಮಾಡತಕ್ಕದ್ದು:
ಪರಂತು, ಸರ್ಕಾರಿ ನೌಕರನು, OOP ಯಾವುದೇ ವ್ಯವಹಾರವನ್ನು, ಸರ್ಕಾರಿ ನೌಕರನೊಂದಿಗೆ ಅಧಿಕೃತ ವ್ಯವಹಾರಗಳನ್ನು ಹೊಂದಿರುವ ವ್ಯಕ್ತಿಯೊಂದಿಗೆ ಮಾಡುತ್ತಿರುವಲ್ಲಿ; ನಿಯಮಿಸಲಾದ ಪ್ರಾಧಿಕಾರದ ಪೂರ್ವ ಮಂಜೂರಾತಿಯನ್ನು ಪಡೆದುಕೊಳ್ಳತಕ್ಕದ್ದು:
ಮತ್ತೂ BOOS ಈ ಉಪನಿಯಮದಲ್ಲಿರುವುದು ಯಾವುದೂ, ಸ್ವತಃ ಸರ್ಕಾರಿ ನೌಕರನದೇ ಆದ ಸ್ವಂತ ನಿಧಿಗಳಿಂದ ಭಿನ್ನವಾಗಿ ಸರ್ಕಾರೀ ನೌಕರನ ಕುಟುಂಬ ಸದಸ್ಯನು (ಉಡುಗೊರೆಗಳು, ಪಿತ್ರಾರ್ಜಿತ, ಮೊದಲಾದವುಗಳೂ ಸೇರಿದಂತೆ) ತನ್ನದೇ ಸ್ವಂತ ನಿಧಿಗಳಿಂದ ತನ್ನ ಸ್ವಂತ ಹೆಸರಿನಲ್ಲಿ ಮತ್ತು ತನ್ನ ಸ್ವಂತ ಹಕ್ಕಿನಿಂದ ಮಾಡಿಕೊಂಡ ವ್ಯವಹಾರಗಳಿಗೆ ಅನ್ವಯವಾಗತಕ್ಕದ್ದಲ್ಲ.
(5) ಪ್ರತಿಯೊಬ್ಬ ಸರ್ಕಾರಿ ನೌಕರನು, ತನ್ನ ಸಂಬಳ ಮತ್ತು ಭತ್ಯೆಗಳು, ವಿಮೆ ಅಥವಾ ಭವಿಷ್ಯನಿಧಿಯನ್ನು ಹೊರತುಪಡಿಸಿ ಇತರ ಮೂಲಗಳಿಂದ ತಾನು ಅಥವಾ ತನ್ನ ಕುಟುಂಬದ ಯಾರೇ ಸದಸ್ಯನು ಸ್ವೀಕರಿಸಿದ ನಗದಿಗೆ ಸಂಬಂಧಿಸಿದ ಪ್ರತಿಯೊಂದು ವ್ಯವಹಾರವನ್ನು, ಯಾವುದೇ ಹುದ್ದೆಯನ್ನು ಧಾರಣ ಮಾಡಿರುವ ಸರ್ಕಾರಿ ನೌಕರನ ಸಂದರ್ಭದಲ್ಲಿ, ಅಂಥ ನಗದು ಸರ್ಕಾರಿ ನೌಕರರ ಮಾಸಿಕ ಮೂಲ ವೇತನವನ್ನು ಮೀರಿದ್ದರೆ ನಿಯಮಿಸಲಾದ ಪ್ರಾಧಿಕಾರಕ್ಕೆ ವರದಿ ಮಾಡತಕ್ಕದ್ದು.
(6) ಉಪನಿಯಮ (1)ರಲ್ಲಿ ಏನೇ ಒಳಗೊಂಡಿದ್ದರೂ, ಸರ್ಕಾರವು ಅಥವಾ ನಿಯಮಿಸಲಾದ ಪ್ರಾಧಿಕಾರವು ಯಾವುದೇ ಕಾಲದಲ್ಲಿ, ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ, ಸರ್ಕಾರಿ ನೌಕರನನ್ನು, ಆ ಆದೇಶದಲ್ಲಿ ನಿರ್ದಿಷ್ಟಪಡಿಸಿದ ಅವಧಿಯೊಳಗೆ ತಾನು ಅಥವಾ ತನ್ನ ಕುಟುಂಬದ ಯಾರೇ ಸದಸ್ಯನು ಅಥವಾ ತನ್ನ ಪರವಾಗಿ ತನ್ನ ಕುಟುಂಬದ ಯಾರೇ ಸದಸ್ಯನು ಹೊಂದಿದ ಅಥವಾ ಆರ್ಜಿಸಿದ GOW ಚರ ಅಥವಾ ಸ್ಮಿರ ಸ್ವತ್ತಿನ ಪೂರ್ಣ ಮತ್ತು ಸಮಗ್ರ ವಿವರಪಟ್ಟಿಯನ್ನು ಆ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂ೦ತೆ ಒದಗಿಸುವಂತೆ ಅಗತ್ಯಪಡಿಸಬಹುದು. ಅಂಥ ವಿವರ ಪಟ್ಟಿಯು, ಅಂಥ ಸ್ವತ್ತನ್ನು ಯಾವ ರೀತಿಯಲ್ಲಿ ಅಥವಾ ಯಾವ ಮೂಲಗಳಿಂದ ಆರ್ಜಿಸಲಾಗಿದೆಯೋ ಆ ಐಬಿವರಗಳನ್ನು ಒಳಗೊಂಡಿರಬೇಕೆಂದು ಸರ್ಕಾರವು ಅಥವಾ ನಿಯಮಿಸಲಾದ ಪ್ರಾಧಿಕಾರವು ಅಗತ್ಯಪಡಿಸಿದರೆ ಆ ವಿವರಗಳನ್ನು ಒಳಗೊಂಡಿತರಕ್ಕದ್ದು.
ವಿವರಣೆ: ಈ ನಿಯಮದ ಉದ್ದೇಶಗಳಿಗಾಗಿ,-
(1) "MAR" ಎಂದರೆ ಸರ್ಕಾರಿ ನೌಕರನೊಂದಿಗೆ ಯಾವುದೇ ಅಧಿಕೃತ ವ್ಯವಹಾರಗಳನ್ನು ಹೊಂದಿರುವ ವ್ಯಕ್ತಿಯಿಂದ ಪಡೆದುಕೊಂಡಿರುವುದನ್ನು ಅಥವಾ ಆ ವ್ಯಕ್ತಿಗೆ ನೀಡಲಾಗಿರುವುದನ್ನು ಹೊರತುಪಡಿಸಿ, ವರ್ಷದಿಂದ ವರ್ಷಕ್ಕೆ ಅಥವಾ ಒಂದು ವರ್ಷ ಮೀರಿದ ಯಾವುದೇ ಅವಧಿಗೆ ಅಥವಾ ವಾರ್ಷಿಕ ಬಾಡಿಗೆ ಬರುವಂತಿರುವ ಸ್ಮಿರಾಸ್ತಿಯ ಗುತ್ತಿಗೆ ಎಂದು ಅರ್ಥ.
(2) "ಚರಾಸ್ತಿ" DOW ಪದಾವಳಿಯು,-
(ಎ) ಒಡವೆಗಳು, ವಿಮಾ ಪಾಲಿಸಿಗಳು, ಭವಿಷ್ಯ ನಿಧಿ, ಷೇರುಗಳು, ಭದ್ರತಾ ಪತ್ರಗಳು, ಅಂಚೆ ಇಲಾಖೆಯ ಸಂಚಿತ ಅವಧಿಯ ಠೇವಣಿಗಳು ಮತ್ತು ಡಿಬೆಂಚರುಗಳು;
(ಬಿ) . ಅಂಥ ಸರ್ಕಾರಿ ನೌಕರರು ಭದ್ರತೆ ಪಡೆದು ಅಥವಾ ಭದ್ರತೆ ಪಡೆಯದೆ ನೀಡಿದ ಸಾಲಗಳು;
(ಸಿ), ಮೋಟರ್ ವಾಹನಗಳ ಅಧಿನಿಯಮ, 1988ರ (ಕೇಂದ್ರ ಅಧಿನಿಯಮ 1988ರ ಸಂಖ್ಯೆ 59ರಲ್ಲಿ ಪರಿಭಾಷಿಸಲಾದಂಥ “ಮೋಟರ್ ವಾಹನಗಳು" ಅಥವಾ ವಾಹನಗಳು ಅಥವಾ ಇತರ ಯಾವುದೇ ಸಾಗಣೆ ಸಾಧನಗಳು; ಮತ್ತು
(ಡಿ) ರೆಫ್ರಿಜಿರೇಟರುಗಳು, ದೂರದರ್ಶನ ಸೆಟ್ಟುಗಳು, ಮತ್ತು ವಿದ್ಯುನ್ಮಾನ ಸಾಧನಗಳಾದಂತಹ ಕಂಪ್ಯೂಟರ್, ಮೊಬೈಲ್ ಪೋನ್, ಲ್ಯಾಪ್ಟಾಪ್ ಶ್ರವಣ ಮತ್ತು ದೃಶ್ಯ ಸಾಧನಗಳು, ಇತ್ಯಾದಿಗಳನ್ನು ಒಳಗೊಳ್ಳುತ್ತದೆ. 25. ಭಾರತದ ಹೊರಗೆ ಇರುವ ಸ್ಥಿರ ಸ್ವತ್ತನ್ನು ಆರ್ಜಿಸುವುದಕ್ಕೆ ಮತ್ತು ವಿಲೇ ಮಾಡುವುದಕ್ಕೆ ಮತ್ತು ವಿದೇಶಿಯರೊಂ೦ದಿಗೆ ವ್ಯವಹಾರಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ನಿರ್ಬಂಧಗಳು, ಇತ್ಯಾದಿ : 24ನೇ ನಿಯಮದ 4)ನೇ ಉಪನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಯಾರೇ ಸರ್ಕಾರಿ ನೌಕರನು ನಿಯಮಿಸಿದ ಪ್ರಾಧಿಕಾರದ ಪೂರ್ವ ಮಂಜೂರಾತಿ ಪಡೆದ ಹೊರತು,-
(ಎ) ತನ್ನ ಹೆಸರಿನಲ್ಲಿ ಅಥವಾ ತನ್ನ ಕುಟುಂಬದ ಯಾರೇ ಸದಸ್ಯರ ಹೆಸರಿನಲ್ಲಿ ಭಾರತದ ಹೊರಗೆ ಇರುವ ಯಾವುದೇ ಸ್ಥಿರ ಸ್ವತ್ತನ್ನು ಖರೀದಿಯ, ಅಡಮಾನದ, ಗುತ್ತಿಗೆಯ, ಉಡುಗೊರೆಯ ಮೂಲಕ ಅಥವಾ ಅನ್ಯಥಾ ಆರ್ಜಿಸತಕ್ಕದ್ದಲ್ಲ.
(ಬಿ) ತನ್ನ ಹೆಸರಿನಲ್ಲಿ ಅಥವಾ ತನ್ನ ಕುಟುಂಬದ ಯಾರೇ ಸದಸ್ಯನ ಹೆಸರಿನಲ್ಲಿ, ತಾನು ಆರ್ಜಿಸಿದ ಅಥವಾ ಧಾರಣ ಮಾಡಿದ, ಭಾರತದ ಹೊರಗಿರುವ ಯಾವುದೇ ಸ್ಥಿರಸ್ವತ್ತನ್ನು ಮಾರಾಟದ, ಅಡಮಾನದ, ದಾನದ ಮೂಲಕ ಅಥವಾ ಅನ್ಯಥಾ ವಿಲೇ ಮಾಡತಕ್ಕದ್ದಲ್ಲ ಅಥವಾ ಅವುಗಳ ಸಂಬಂಧದಲ್ಲಿ ಯಾವುದೇ ಗುತ್ತಿಗೆಯನ್ನು ನೀಡತಕ್ಕದ್ದಲ್ಲ.
(2) (i) ಯಾವುದೇ ಸ್ಥಿರ ಸ್ವತ್ತನ್ನು ತನ್ನ ಹೆಸರಿನಲ್ಲಿ ಅಥವಾ ತನ್ನ ಕುಟುಂಬದ ಯಾರೇ ಸದಸ್ಯನ ಹೆಸರಿನಲ್ಲಿ ಖರೀದಿಯ, ಅಡಮಾನದ, ದಾನದ ಮೂಲಕ ಅಥವಾ ಅನ್ಯಥಾ ಅರ್ಜಿಸಲು;
(ii) ತನ್ನ ಹೆಸರಿನಲ್ಲಿ ಅಥವಾ ತನ್ನ ಕುಟುಂಬದ ಯಾರೇ ಸದಸ್ಯನ ಹೆಸರಿನಲ್ಲಿ ಅರ್ಜಿಸಿದ ಅಥವಾ ಧಾರಣ ಮಾಡಿದ ಯಾವುದೇ ಸ್ಥಿರಸ್ವತ್ತನ್ನು ಮಾರಾಟದ, ಅಡಮಾನದ, ಉಡುಗೊರೆಯ ಮೂಲಕ ಅಥವಾ ಅನ್ಯಥಾ ವಿಲೇ ಮಾಡಲು ಅಥವಾ ಅವುಗಳ ಸಂಬಂಧದಲ್ಲಿ ಯಾವುದೇ ಗುತ್ತಿಗೆಯನ್ನು ನೀಡಲು - ಯಾರೇ ವಿದೇಶೀಯನೊಂದಿಗೆ, ವಿದೇಶೀ ಸರ್ಕಾರದೊಂದಿಗೆ, ವಿದೇಶೀ ಸಂಘಟನೆಯೊಂದಿಗೆ ಅಥವಾ ಸಂಬಂಧಪಟ್ಟ ಇತರ ಸಂಸ್ಥೆಯೊಂದಿಗೆ ಯಾವುದೇ ವ್ಯವಹಾರವನ್ನು ನಡೆಸತಕ್ಕದ್ದಲ್ಲ. 26. ಸರ್ಕಾರಿ ನೌಕರರ ಕೃತ್ಯಗಳ ಮತ್ತು ನಡತೆಯ ಸಮರ್ಥನೆ: (1) ವಿಯಮಿಸಲಾದ ಪ್ರಾಧಿಕಾರದ ಪೂರ್ವಾನುಮೋದನೆ ಪಡೆಯದ ಹೊರತು ಯಾರೇ ಸರ್ಕಾರಿ ನೌಕರನು ಸರ್ಕಾರದ ಯಾವ ಅಧಿಕೃತ ಕೃತ್ಯವು ಪ್ರತಿಕೂಲ ಟೀಕೆಯ ಅಥವಾ ಮಾನಹಾನಿ ಸ್ವರೂಪದ ನಿಂದನೆಯ ವಸ್ತು ವಿಷಯವಾಗಿರುವುದೋ ಆ ಯಾವುದೇ ಅಧಿಕೃತ ಕೃತ್ಯದ ಸಮರ್ಥನೆಗಾಗಿ ಯಾವುದೇ ನ್ಯಾಯಾಲಯಕ್ಕೆ ಅಥವಾ ಶತ್ರಿಕೆಗೆ ಮೊರೆಹೋಗತಕ್ಕದ್ದಲ್ಲ.
(2) ಈ ನಿಯಮದಲ್ಲಿರುವುದು ಯಾವುದೂ, ಸರ್ಕಾರಿ ನೌಕರನು ತನ್ನ ಖಾಸಗಿ ಚಾರಿತ್ರ್ಯವನ್ನು ಅಥವಾ ಖಾಸಗಿ ವ್ಯಕ್ತಿಯಾಗಿ ತಾನು ಮಾಡಿದ ಯಾವುದೇ ಕೃತ್ಯವನ್ನು ಸಮರ್ಥಿಸಿಕೊಳ್ಳುವುದನ್ನು ನಿಷೇಧಿಸುತ್ತದೆ ಎಂದು ಭಾವಿಸತಕ್ಕದ್ದಲ್ಲ ಮತ್ತು ಆತನ ಖಾಸಗಿ ಚಾರಿತ್ರ್ಯವನ್ನು ಅಥವಾ ಖಾಸಗಿ ವ್ಯಕ್ತಿಯಾಗಿ ಆತನು ಮಾಡಿದ ಯಾವುದೇ ಕೃತ್ಯವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಕ್ರಮವನ್ನು ಕೈಗೊಂಡಿರುವಲ್ಲಿ ಸರ್ಕಾರಿ ನೌಕರನು ಅಂಥ ಕ್ರಮ ಕುರಿತಂತೆ ನಿಯಮಿಸಿದ ಪ್ರಾಧಿಕಾರಿಗೆ ಒಂದು ವರದಿಯನ್ನು ಸಲ್ಲಿಸತಕ್ಕದ್ದು.
ವಿವರಣೆ:- ಸರ್ಕಾರಿ ನೌಕರನ ಸೇವಾ ಷರತ್ತುಗಳನ್ನು ವಿನಿಯಮಗೊಳಿಸುವ ನಿಯಮಗಳ ಅಡಿಯಲ್ಲಿ ಆತನ ಹಕ್ಕುಗಳನ್ನು ಜಾರಿಗೊಳಿಸುವಂತೆ ಕೋರಿ ಆತನು ಸಕ್ಷಮ ನ್ಯಾಯಾಲಯದ ಮುಂದೆ ರಿಟ್ ಅರ್ಜಿ ಸಲ್ಲಿಸುವುದಕ್ಕೆ ಅಥವಾ ಕರ್ನಾಟಕ ಆಡಳಿತ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸುವುದಕ್ಕೆ ಈ ನಿಯಮವು ಅನ್ವಯಿಸತಕ್ಕದ್ದಲ್ಲ.