(1) ಯಾರೇ ಸರ್ಕಾರಿ ನೌಕರನು, ನಿಯಮಿಸಲಾದ ಪ್ರಾಧಿಕಾರದಿಂದ ಪೂರ್ವ ಮಂಜೂರಾತಿಯನ್ನು ಪಡೆದ ಹೊರತು, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯ ವ್ಯಾಪಾರದಲ್ಲಿ ಅಥವಾ ವ್ಯವಹಾರದಲ್ಲಿ ತೊಡಗತಕ್ಕದ್ದಲ್ಲ ಅಥವಾ ಯಾವುದೇ ಇತರೆ ಉದ್ಯೋಗಕ್ಕಾಗಿ. ಮಾತುಕತೆ ನಡೆಸತಕ್ಕದ್ದಲ್ಲ ಅಥವಾ ಯಾವುದೇ ಇತರ ಉದ್ಯೋಗವನ್ನು ಕೈಗೊಳ್ಳತಕ್ಕದ್ದಲ್ಲ:
ಪರಂತು, ಸರ್ಕಾರಿ ನೌಕರನು ಅಂಥ ಮಂಜೂರಾತಿಯನ್ನು ಪಡೆಯದೆ ಸಾಮಾಜಿಕ ಅಥವಾ ಧರ್ಮಾರ್ಥ ಸ್ವರೂಪದ ಗೌರವಾರ್ಥ ಕೆಲಸಗಳನ್ನು ಅಥವಾ ಸಾಹಿತ್ಯ, ಕಲಾತ್ಮಕ ಅಥವಾ ವೈಜ್ಞಾನಿಕ ಸ್ವರೂಪದ ಸಾಂದರ್ಭಿಕ ಕೆಲಸಗಳನ್ನು ಈ ಮುಂದಿನ ಷರತ್ತುಗಳಿಗೊಳಪಟ್ಟು ಕೈಗೊಳ್ಳಬಹುದು, ಎಂದರೆ:-
(i) ಅಂಥ ಯಾವುದೇ ಕೆಲಸಗಳನ್ನು ತಾನು ಕೈಗೊಂಡ ಒಂದು ತಿಂಗಳೊಳಗಾಗಿ ಅವನು ಸರ್ಕಾರಕ್ಕೆ ಅದರ ಸಂಪೂರ್ಣ ವಿವರಗಳನ್ನು ವರದಿ ಮಾಡತಕ್ಕದ್ದು;
(ii) ಅದರಿಂದ ಆತನ ಅಧಿಕೃತ ಕರ್ತವ್ಯಗಳಿಗೆ ತೊಂದರೆಯಾಗಬಾರದು; ಮತ್ತು
(ii) ಯಾವುದೇ ಅಂಥ ಕೆಲಸವನ್ನು ಮುಂದುವರೆಸಬಾರದೆಂದು ಸರ್ಕಾರವು ನಿರ್ದೇಶಿಸಿದರೆ ಅವನು ಅಂಥ ಕೆಲಸವನ್ನು ವಿಲ್ಲಿಸತಕ್ಕದ್ದು:
ಮತ್ತೂ Bd0S, ಯಾವುದೇ ಅಂಥ ಕೆಲಸವು ಚುನಾವಣೀಯ ಪದವನ್ನು ಧಾರಣಮಾಡುವುದನ್ನು ಒಳಗೊಂಡಿದ್ದರೆ, ನಿಯಮಿಸಲಾದ ಪ್ರಾಧಿಕಾರದ ಪೂರ್ವ ಮಂ೦ಜೂರಾತಿಯಿಲ್ಲದೆ ಅಂತಹ ಯಾವುದೇ ಪದದ ಚುನಾವಣೆಗೆ ಸ್ವರ್ಧಿಸತಕ್ಕದ್ದಲ್ಲ.
ವಿವರಣೆ I: ಎರಡನೇ ಪರಂತುಕದಲ್ಲಿ ಉಲ್ಲೇಖಿಸಲಾದ ಚುನಾವಣೀಯ ಪದಕ್ಕಾಗಿ ಸ್ವರ್ಧಿಸುವ ಅಭ್ಯರ್ಥಿಯ ಅಥವಾ ಅಭ್ಯರ್ಥಿಗಳ ಪರವಾಗಿ ಸರ್ಕಾರಿ ನೌಕರನು ಪ್ರಚಾರ ಮಾಡುವುದನ್ನು ಈ ಉಪನಿಯಮದ ಉಲ್ಲಂಂಘನೆಯೆಂದು ಭಾವಿಸತಕ್ಕದ್ದು.
ವಿವರಣೆ Il: ಸರ್ಕಾರಿ ನೌಕರನು ತನ್ನ ಅಥವಾ ತನ್ನ ಪತ್ನಿ ಅಥವಾ ಪತಿಯ ಅಥವಾ ತನ್ನ ಕುಟುಂಬದ ಯಾರೇ ಇತರ ಸದಸ್ಯನ ಒಡೆತನದಲ್ಲಿರುವ ಅಥವಾ ನಿರ್ವಹಣೆಯಲ್ಲಿರುವ ವ್ಯವಹಾರವನ್ನು ಅಥವಾ ವಿಮಾ ಏಜೆನ್ಸಿಯನ್ನು ಅಥವಾ ಕಮೀಷನ್ ಏಜೆನ್ಸಿಯನ್ನು ಬೆಂಬಲಿಸಿ ಪ್ರಚಾರ ಮಾಡುವುದನ್ನು ಈ ಉಪ-ನಿಯಮದ ಉಲಂ೦ಂಫನೆಯೆಂದು ಭಾವಿಸತಕ್ಕದ್ದು.
(2) ಪ್ರತಿಯೊಬ್ಬ ಸರ್ಕಾರಿ ನೌಕರನು ಅಥವಾ ಅವನ ಕುಟುಂಬದ ಯಾರೇ ಸದಸ್ಯನು ವ್ಯಾಪಾರದಲ್ಲಿ ಅಥವಾ ವ್ಯವಹಾರದಲ್ಲಿ ತೊಡಗಿದ್ದರೆ ಅಥವಾ ವಿಮಾ ಏಜೆನ್ಸಿಯ ಅಥವಾ ಕಮೀಷನ್ ಏಜೆನ್ಸಿಯ ಒಡೆತನ ಹೊಂದಿದ್ದರೆ ಅಥವಾ ನಿರ್ವಹಣೆ ಮಾಡುತ್ತಿದ್ದರೆ ಆ ಬಗ್ಗೆ ನಿಯಮಿಸಲಾದ ಪ್ರಾಧಿಕಾರಕ್ಕೆ ವರದಿ ಮಾಡತಕ್ಕದ್ದು.
(3) ಯಾರೇ ಸರ್ಕಾರಿ ನೌಕರನು ತನ್ನ ಪದೀಯ ಕರ್ತವ್ಯಗಳನ್ನು ನಿರ್ವಹಿಸುವಾಗ ಹೊರತು, ಕಂಪನಿಗಳ ಅಧಿನಿಯಮ, 1956ರ (1956ರ ಕೇಂದ್ರ ಅಧಿನಿಯಮ 1) ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಮೇರೆಗೆ ನೋಂದಾಯಿಸಬೇಕಾದ ಅಗತ್ಯವಿರುವ ಯಾವುದೇ ಬ್ಯಾಂಕನ್ನು ಅಥವಾ ಇತರ ಕಂಪನಿಯನ್ನು ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ಯಾವುದೇ ಸಹಕಾರ ಸಂಘವನ್ನು ನಿಯಮಿಸಲಾದ ಪ್ರಾಧಿಕಾರದ ಪೂರ್ವ ಮಂ೦ಜೂರಾತಿ ಪಡೆಯದೆ ನೋಂದಾಯಿಸುವ, ಉತ್ತೇಜಿಸುವ ಅಥವಾ ನಿರ್ವಹಣೆ ಮಾಡುವ ಕಾರ್ಯದಲ್ಲಿ ಪಾಲ್ಕೊಳ್ಳತಕ್ಕದ್ದಲ್ಲ: ಪರಂತು, ಸರ್ಕಾರಿ ನೌಕರನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959 (ಕರ್ನಾಟಕ ಅಧಿನಿಯಮ 1959ರ 11)ರ ಮೇರೆಗೆ ನೋಂದಾಯಿ ತವಾದ ಅಥವಾ ನೋಂದಾಯಿತವಾಗಿದೆಯೆಂದು ಭಾವಿಸಲಾದ ಪ್ರಮುಖವಾಗಿ ಸರ್ಕಾರಿ ನೌಕರರ ಪ್ರಯೋಜನಗಳಿಗಾಗಿ ಸಹಕಾರ ಸಂಘವನ್ನು ಅಥವಾ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ, 1960 (ಕರ್ನಾಟಕ ಅಧಿನಿಯಮ 1960ರ 17ರ ಮೇರೆಗೆ ನೋಂದಾಯಿತವಾದ ಅಥವಾ ನೋಂದಾಯಿತವಾಗಿದೆಯೆಂದು ಭಾವಿಸಲಾದ ಸಾಹಿತ್ಯಕ, ವೈಜ್ನಾನಿಕ ಅಥವಾ ಧರ್ಮಾರ್ಥ ಸಂಘವನ್ನು ನೋಂದಾಯಿಸುವ, ಉತ್ತೇಜಿಸುವ ಅಥವಾ ನಿರ್ವಹಣೆ ಮಾಡುವ ಕಾರ್ಯದಲ್ಲಿ ಪಾಲ್ಕೊಳ್ಳಬಹುದು.
(4) ಯಾರೇ ಸರ್ಕಾರಿ ನೌಕರನು ವಿಯಮಿಸಿದ ಪ್ರಾಧಿಕಾರದಿಂದ ಸಾಮಾನ್ಯ ಅಥವಾ ವಿಶೇಷ ಮಂಜೂರಾತಿ ಪಡೆಯದೆ ಯಾವುದೇ ಸಾರ್ವಜನಿಕ ಸಂಸ್ಥೆಗೆ ಅಥವಾ ಯಾರೇ ಖಾಸಗಿ ವ್ಯಕ್ತಿಗೆ ಮಾಡಿಕೊಟ್ಟ ಕೆಲಸಕ್ಕಾಗಿ ಯಾವುದೇ ಶುಲ್ಕವನ್ನು ತೆಗೆದುಕೊಳ್ಳತಕ್ಕದ್ದಲ್ಲ.