(1) ಖಾಸಗಿ ಸಂಸ್ಥೆ ಇತ್ಯಾದಿಗಳಲ್ಲಿ ಭೋಧಕ ಮತ್ತು ಭೋಧಕೇತರ ವೈದ್ಯ ಹುದ್ದೆಗಳನ್ನು ಹೊಂದಿರುವ ಸರ್ಕಾರಿ ನೌಕರರು ಭಾಗವಹಿಸುವುದು: ವೈದ್ಯರ ಅಥವಾ ವೈದ್ಯಕೀಯ ಅಧಿಕಾರಿಗಳ ಯಾವುದೇ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಹೊಂದಿರುವ ಸರ್ಕಾರಿ ನೌಕರನು, ಯಾವುದೇ ಖಾಸಗಿ ನರ್ಸಿಂಗ್ ಹೋಮನ್ನು, ಆಸ್ಪತ್ರೆಯನ್ನು, ಡಯಾಗ್ನೋಸ್ಟಿಕ್ ಪ್ರಯೋಗಾಲಯವನ್ನು, ಔಷಧಾಲಯವನ್ನು ಅಥವಾ ಸಂಬಂಧಪಟ್ಟ ಸಲಂಸ್ಥೆಗಳನ್ನು ನಡೆಸತಕ್ಕದ್ದಲ್ಲ ಅಥವಾ ಅವುಗಳಲ್ಲಿ ಹಣಕಾಸಿನ ಹಿತಾಸಕ್ತಿಯನ್ನು ಹೊಂದಿರತಕ್ಕದ್ದಲ್ಲ. ಹಣವನ್ನು ಪಾವತಿಸುವ ರೋಗಿಗಳನ್ನು ಅವನು ರೂಢಿಗತವಾಗಿ ತನ್ನ ಸ್ವಂತ ಮನೆಯಲ್ಲಿ 24 ಗಂಟಿಗಳಿಗಿಂತ ಹೆಚ್ಚಾಗಿ ಇಟ್ಟುಕೊಳ್ಳತಕ್ಕದ್ದಲ್ಲ. ಆದಾಗ್ಯೂ, ಆತನು ಕರ್ತವ್ಯದ ವೇಳೆಯನ್ನು ಹೊರತುಪಡಿಸಿ ಬೇರೆ ಸಮಯದಲ್ಲಿ ಖಾಸಗಿ ನರ್ಸಿಂಗ್ ಹೋಮ್ ಅಥವಾ ಆಸ್ಪತ್ರೆಯ ರೊಗಿಗಳಿಗೆ ಚಿಕಿತ್ಸೆ ನೀಡಬಹುದು. ಪರಂತು, ನರ್ಸಿಂಗ್ Belo ಅಥವಾ ಆಸ್ಪತ್ರೆಯು ತನ್ನ ಸ್ವಂತ ಕೇಸ್ಗಳನ್ನು ದಾಖಲಿಸುವುದಕ್ಕೋಸ್ಕರವೇ ಮೀಸಲಾಗಿರದೆ ಇತರೆ ಯಾರೇ ನೋಂದಾಯಿತ ವೈದ್ಯರ ರೋಗಿಗಳ ದಾಖಲಾತಿಗೆ ಅವಕಾಶವಿರಬೇಕು.
(2) ಯಾವುದೇ ಪದನಾಮದಲ್ಲಿ ಅಥವಾ ಯಾವುದೇ ಪದೀಯ ಸಾಮರ್ಥ್ಯದಲ್ಲಿ ಬೋಧನಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಯಾರೇ ಸರ್ಕಾರಿ ನೌಕರನು, ಸ್ವತಃ ತಾನೇ ಅಥವಾ ಮತ್ತೊಬ್ಬ ವ್ಯಕ್ತಿಯ ಅಥವಾ ನಿಕಾಯದ ಹೆಸರಿನಲ್ಲಿ ಯಾವುದೇ ಹೆಸರಿನ ಖಾಸಗಿ ಟ್ಯುಟೋರಿಯಲ್ನ್ನು ಅಥವಾ ವಾಣಿಜ್ಯ ಆಧಾರದ ಮೇಲೆ ಯಾವುದೇ ಶೈಕ್ಷಣಿಕ ಅಥವಾ ವೃತ್ತಿಪರ ತರಗತಿಗಳಿಗೆ ಟ್ಯೂಷನ್ಗಳನ್ನು ನಡೆಸುವ ಸಂಸ್ಥೆಯನ್ನು ಸ್ಥಾಪಿಸತಕ್ಕದ್ದಲ್ಲ ಅಥವಾ ಆ ಖಾಸಗಿ ಟ್ಯುಟೋರಿಯಲ್ನಲ್ಲಿ ಹಣಕಾಸಿನ ಹಿತಾಸಕ್ತಿಯನ್ನು ಹೊಂದಿರತಕ್ಕದ್ದಲ್ಲ ಅಥವಾ ಅಂಥ ಟ್ಯುಟೋರಿಯಲ್ಗಳಲ್ಲಿ ಟ್ಯೂಶನ್ ಹೇಳಿಕೊಡತಕ್ಕದ್ದಲ್ಲ.
(3) ಯಾವುದೇ ವೃತ್ತಿಪರ ಅಥವಾ ತಾಂತ್ರಿಕ ಕೌಶಲ್ಯಗಳ ಅಗತ್ಯತೆ ಇರುವ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಯಾರೇ ಸರ್ಕಾರಿ ನೌಕರನು, ವಿಯಮಿಸಿದ ಪ್ರಾಧಿಕಾರವು ಅನುಮತಿಸಿದ ಹೊರತು, ಹಣಕಾಸಿನ ಲಾಭವನ್ನು ಹೊಂದುವ ಯಾವುದೇ ಖಾಸಗಿ ಉದ್ದೇಶಕ್ಕಾಗಿ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ತನ್ನ ವೃತ್ತಿ ಅಥವಾ ತಾಂತ್ರಿಕ ಕೌಶಲ್ಯಗಳನ್ನು ಬಳಕೆ ಮಾಡಿಕೊಳ್ಳತಕ್ಕದ್ದಲ್ಲ. 20. ಸಾರ್ವಜನಿಕ ಹಣವನ್ನು ವೆಚ್ಚ ಮಾಡುವಾಗ ಹಣಕಾಸು ಸ್ವತ್ತಿನ ನಿಯಮಗಳನ್ನು ಪಾಲಿಸುವುದು ಮತ್ತು ಸೌಕರ್ಯಗಳನ್ನು ಸೂಕ್ತವಾಗಿ ಬಳಕೆ ಮಾಡುವುದು ಇತ್ಯಾದಿ. (1) (i) ಪ್ರತಿಯೊಬ್ಬ ಸರ್ಕಾರಿ ನೌಕರನು, ಸರ್ಕಾರದ ಹಣ ಮತ್ತು ಸಂಪನ್ಮೂಲಗಳಿಂದ ಖರ್ಚುಗಳನ್ನು ಭರಿಸುವ ಸಂದರ್ಭದಲ್ಲಿ ಸಾಮಾನ್ಯ ವಿವೇಚನೆಯುಳ್ಳ ಒಬ್ಬ ವ್ಯಕ್ತಿಯಾಗಿ ಆತನು ತನ್ನ ಸ್ವಂತ ಹಣವನ್ನು ಹೇಗೆ ಮಿತವ್ಯಯದಲ್ಲಿ ಖರ್ಚು ಮಾಡುತ್ತಿದ್ದನೋ ಅದೇ ಜಾಣ್ಮೆಯನ್ನು ಇಲ್ಲಿಯೂ ವಹಿಸತಕ್ಕದ್ದು.
(ii) ಸರ್ಕಾರಿ ನೌಕರನು ವೆಚ್ಚವನ್ನು ಮಂಜೂರು ಮಾಡುವ ತನ್ನ ಅಧಿಕಾರಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತನ್ನ ಸ್ವಂತ ಅನುಕೂಲ ಉಂಟು ಮಾಡುವ ಆದೇಶವನ್ನು ಹೊರಡಿಸಲು ಚಲಾಯಿಸತಕ್ಕದ್ದಲ್ಲ.
(iii) ಸರ್ಕಾರಿ ರಾಜಸ್ವಗಳನ್ನು:
(ಎ) ಮೊಬಲಗಿನ ಕ್ಲೇಮನ್ನು ನ್ಯಾಯಾಲಯವು ಜಹಾರಿಗೊಳಿಸಬಹುದಾದ ಹೊರತು; ಅಥವಾ
(ಬಿ) . ವೆಚ್ಚವು ಅಂಗೀಕೃತ ನೀತಿ ಅಥವಾ ಪದ್ಧತಿಗೆ ಅನುಗುಣವಾಗಿದ್ದ ಹೊರತು - ಒಬ್ಬ ವಿರ್ದಿಷ್ಟ ವ್ಯಕ್ತಿ ಅಥವಾ ಸಮುದಾಯದ ಒಂದು ವರ್ಗದ ಪ್ರಯೋಜನಕ್ಕಾಗಿ ಬಳಕೆ ಮಾಡಿಕೊಳ್ಳತಕ್ಕದ್ದಲ್ಲ.
(iv) ಯಾರೇ ಸರ್ಕಾರಿ ನೌಕರನು, ತನ್ನ ಸ್ವಯಂ ಮಂಜೂರಾತಿ ಅಧಿಕಾರಗಳನ್ನು ಮೀರಿ ಮುಂದಿನ ದಿನಗಳಲ್ಲಿ ವೆಚ್ಚ ಮಾಡುವುದನ್ನು ಒಳಗೊಳ್ಳುವ ಸಾಧ್ಯತೆ ಇರುವಂತಹ ಯಾವುದೇ ವೆಚ್ಚವನ್ನು ಮಂಜೂರು ಮಾಡತಕ್ಕದ್ದಲ್ಲ.
) ಪ್ರಯಾಣ ಭತ್ಯೆಗಳಂತಕಹ ಒಂದು ನಿರ್ದಿಷ್ಟ ಬಗೆಯ ವೆಚ್ಚವನ್ನು ಭರಿಸಲಿಕ್ಕೆ ಮಂಜೂರಾದ ಭತ್ಯೆಗಳ ಮೊಬಲಗನ್ನು, ಅದನ್ನು ಸ್ವೀಕರಿಸುವವರಿಗೆ ಅದು ಅವರ ಒಟ್ಟು ಲಾಭದ ಮೂಲಗಳಲ್ಲ ಎಂಬ ಹಾಗೆ ನಿಯಂತ್ರಿಸತಕ್ಕದ್ದು.
(vi) ಪ್ರತಿಯೊಬ್ಬ ಸರ್ಕಾರಿ ನೌಕರನು ಕೇವಲ ಹಣಕಾಸಿನ ವಿಷಯಗಳಲ್ಲಿ ಸಂಪೂರ್ಣ ನಿಷ್ಠತೆಯನ್ನು ಪಾಲಿಸುವುದು ಮಾತ್ರವೇ ಅಲ್ಲದೆ, ಆತನು ಖರ್ಚು ಮಾಡಿದ ಅಥವಾ ಆತನ ನಿಯಂತ್ರಣದಲ್ಲಿರುವ ಎಲ್ಲಾ ಸಾರ್ವಜನಿಕ ನಿಧಿಗಳಿಗಳಿಗೆ ಸಾಧ್ಯವಿರುವ ಉತ್ತಮ ಮೌಲ್ಯವು ದೊರೆಯುವಂತೆ ನಿರಂತರವಾಗಿ ನೋಡಿಕೊಳ್ಳುವುದು ಮತ್ತು ಸಾರ್ವಜನಿಕ ನಿಧಿಗಳು ಹಲವಾರು ಬಗೆಯಲ್ಲಿ ಪೋಲು ವೆಚ್ಚವಾಗದಂ೦ತೆ ಕಟ್ಟುನಿಟ್ಮಾಗಿ ರಕ್ಷಿಸಿಕೊಳ್ಳುವುದೂ ಕೂಡ ಪ್ರತಿಯೊಬ್ಬ ಸರ್ಕಾರಿ ನೌಕರನ ಕರ್ತವ್ಯವಾಗಿರುತ್ತದೆ.
(2) ಯಾರೇ ಸರ್ಕಾರಿ ನೌಕರನು ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಅನುವಾಗುವಂತೆ ಸರ್ಕಾರವು ಆತನಿಗೆ ಒದಗಿಸಲಾದಂತಹ ಸೌಲಭ್ಯಗಳನ್ನು ಆತನು ದುರ್ಬಳಕೆ ಮಾಡುವುದಾಗಲಿ/ ದುರುಪಯೋಗ ಪಡಿಸಿಕೊಳ್ಳುವುದಾಗಲಿ ಅಥವಾ ನವಿರ್ಲಕ್ಷ್ಯತೆಯಿಂದ ಬಳಕೆ ಮಾಡುವುದಾಗಲಿ ಮಾಡತಕ್ಕದ್ದಲ್ಲ ಅಥವಾ ಖಾಸಗಿ ಉದ್ದೇಶಗಳಿಗಾಗಿ ಬಳಕೆ ಮಾಡತಕ್ಕದ್ದಲ್ಲ.
(3) . ಯಾರೇ ಸರ್ಕಾರಿ ನೌಕರನು, ತನಗೆ BOWE ಮಾಡಲಾಗಿರುವ ಸರ್ಕಾರಿ ವಸತಿ ಸೌಕರ್ಯವನ್ನು ಉಪ-ಬಾಡಿಗೆ, ಭೋಗ್ಯ ಅಥವಾ ಇನ್ನಾವುದೇ ರೀತಿಯಲ್ಲಿ wed ವ್ಯಕ್ತಿಯ ಅನುಭೋಗಕ್ಕೆ ನೀಡತಕ್ಕದ್ದಲ್ಲ.
(4) ಯಾರೇ ಸರ್ಕಾರಿ ನೌಕರನು ವಾಸ್ತವವಾಗಿ ಬಳಕೆ ಮಾಡಿಕೊಂಡಿರದ ಯಾವುದೇ ಸೌಲಭ್ಯಗಳಿಗಾಗಿ ಹಣವನ್ನು ಕ್ಲೇಮು (Claim) ಮಾಡತಕ್ಕದ್ದಲ್ಲ.