ಸರ್ಕಾರಿ ನೌಕರನಿಗೆ ತತ್ಕಾಲದಲ್ಲಿ ಅನ್ವಯವಾಗಬಹುದಾದ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಅನುಮತಿಸಿರುವುದು ಏನೇ ಇದ್ದರೂ,-
(1) ಯಾರೇ ಸರ್ಕಾರಿ ನೌಕರನು, ಜೀವಂತ ಪತಿ ಅಥವಾ ಪತ್ನಿಯನ್ನು ಹೊಂದಿರುವ ವ್ಯಕ್ತಿಯೊಂದಿಗೆ ವಿವಾಹ ಅಥವಾ ವಿವಾಹ ಒಪ್ಪಂದ ಮಾಡಿಕೊಳ್ಳತಕ್ಕದ್ದಲ್ಲ;
(2) ಜೀವಂತ ಪತಿ ಅಥವಾ ಪತ್ನಿಯನ್ನು ಹೊಂದಿರುವ ಯಾರೇ ಸರ್ಕಾರಿ ನೌಕರನು, ಯಾರೇ ವ್ಯಕ್ತಿಯೊಂದಿಗೆ ವಿವಾಹ ಅಥವಾ ವಿವಾಹ ಒಪ್ಪಂದ ಮಾಡಿಕೊಳ್ಳತಕ್ಕದ್ದಲ್ಲ:
ಪರಂತು, ಸರ್ಕಾರೀ ನೌಕರನು ಉಪನಿಯಮ (1) ಅಥವಾ ಉಪನಿಯಮ (2ರಲ್ಲಿ ಉಲ್ಲೇಖಿಸಲಾದಂಂಥ ಯಾವುದೇ ವಿವಾಹವನ್ನು ಮಾಡಿಕೊಳ್ಳಲು ಅಥವಾ ವಿವಾಹ ಒಪ್ಪಂದ ಮಾಡಿಕೊಳ್ಳಲು ಸಾಕಷ್ಟು ಮತ್ತು ಸಿಂಧುವಾದ ಕಾರಣಗಳಿವೆಯೆಂದು ಮತ್ತು ಅದು ಕಾನೂನಾತಹವಾಗಿ ಅಂಗೀಕಾರಾರ್ಹವೆಂದು ಮನದಟ್ಟಾದರೆ, ನಿಯಮಿಸಲಾದ ಪ್ರಾಧಿಕಾರವು ಅನುಮತಿ ನೀಡಬಹುದು.
(3) ಭಾರತ ರಾಷ್ಟ್ರೀಯನಲ್ಲದ ಇತರೆ ವ್ಯಕ್ತಿಯೊಂದಿಗೆ ವಿವಾಹವಾಗಿರುವ ಅಥವಾ ವಿವಾಹವಾಗುವ ಯಾರೇ ಸರ್ಕಾರಿ ನೌಕರನು, ನಿಯಮಿಸಿದ ಪ್ರಾಧಿಕಾರಕ್ಕೆ ಕೂಡಲೇ ಆ ಸಂಗತಿಯನ್ನು ತಿಳಿಸತಕ್ಕದ್ದು.