ಸರ್ಕಾರಿ ನೌಕರನು ಸಾಲ ಮಾಡುವುದನ್ನು ರೂಢಿ ಮಾಡಿಕೊಳ್ಳದಂತೆ ಅಥವಾ ದಿವಾಳಿಯಾಗದಂತೆ ತನ್ನ ಖಾಸಗೀ ವ್ಯವಹಾರಗಳನ್ನು ನಿರ್ವಹಿಸತಕ್ಕದ್ದು. ಯಾವ ಸರ್ಕಾರಿ ನೌಕರನ ADDR, ಅವನಿಂದ ಬಾಕಿಬರಬೇಕಾದ ಯಾವುದೇ ಸಾಲದ ವಸೂಲಿಗಾಗಿ ಅಥವಾ ಅವನನ್ನು ದಿವಾಳಿ ಎಂದು ನ್ಯಾಯ ವಿರ್ಣಯ ಮಾಡುವುದಕ್ಕಾಗಿ ಯಾವುವೇ ಕಾನೂನು ವ್ಯವಹರಣೆಗಳನ್ನು ಹೂಡಲಾಗಿದೆಯೋ ಆ ಸರ್ಕಾರಿ ನೌಕರನು ತಕ್ಷಣವೇ ಆ ಕಾನೂನು ವ್ಯವಹರಣೆಗಳ ಪೂರ್ಣ ಸಂಗತಿಗಳನ್ನು ನಿಯಮಿಸಲಾದ ಪಾಾಧಿಕಾರಕ್ಕೆ ವರದಿ ಮಾಡತಕ್ಕದ್ದು.
ಟಿಪ್ಪಣಿ:- ಸಾಮಾನ್ಯ ಎಚ್ಚರಿಕೆ ವಹಿಸಿದರೂ ಮುಂಗಾಣಲು ತನ್ನಿಂದ ಸಾಧ್ಯವಾಗದಿದ್ದ ಅಥವಾ ತನ್ನ ಹತೋಟಿಯನ್ನು ಮೀರಿದಂಥ ಪರಿಸ್ಥಿತಿಗಳ ಪರಿಣಾಮವಾಗಿ ತಾನು ಸಾಲಗಾರ ಅಥವಾ ದಿವಾಳಿ ಆಗಬೇಕಾಯಿತೆಂದು ಮತ್ತು ತನ್ನ BOD ವೆಚ್ಚವು ಅಥವಾ ಕೆಟ್ಟ ಅಭ್ಯಾಸಗಳು ಅದಕ್ಕೆ ಕಾರಣವಲ್ಲವೆಂದು ರುಜುವಾತುಪಡಿಸುವ ಹೊಣೆಯು ಸರ್ಕಾರಿ ನೌಕರನ ಮೇಲೆ ಇರತಕ್ಕದ್ದು.
ವಿವರಣೆ:- ಸರ್ಕಾರಿ ನೌಕರನನ್ನು, ದಿವಾಳಿಯೆಂದು ವಿರ್ಣಯಿಸಿದರೆ ಅಥವಾ ಘೋಷಿಸಿದರೆ ಅಥವಾ ಸಾಮಾನ್ಯ ಸನ್ನಿವೇಶಗಳಲ್ಲಿ ಅವನು ಒಟ್ಟು . ಎರಡು ವರ್ಷಗಳ ಅವಧಿಯೊಳಗೆ ಮರುಪಾವತಿಸಲಾಗದಷ್ಟು ಮೊತ್ತದ ಸಾಲ ಮಾಡಿದ್ದರೆ ಅಥವಾ ಆಗಾಗ್ಗೆ ತನ್ನ ಸಂಬಳದ ಒಂದು ಭಾಗವನ್ನು ಸಾಲಕ್ಕಾಗಿ ಲಗತ್ತು ಮಾಡಿದ್ದರೆ ಅಥವಾ ಅದನ್ನು ಹಾಗೆ ನಿರಂತರವಾಗಿ ಎರಡು ವರ್ಷಗಳ ಅವಧಿಗೆ ಲಗತ್ತು ಮಾಡಿದ್ದರೆ ಅಥವಾ ಸಾಮಾನ್ಯ ಸನ್ನಿವೇಶಗಳಲ್ಲಿ ಅವನು ಎರಡು ವರ್ಷಗಳ ಅವಧಿಯೊಳಗೆ ಮರು ಸಂದಾಯ ಮಾಡಲಾಗದ ಮೊತ್ತಕ್ಕೆ ಲಗತ್ತು ಮಾಡಿದ್ದರೆ ಆಗ ಆತನು ಈ ನಿಯಮವನ್ನು ಉಲ್ಲಂಫಿಸಿದ್ಧಾನೆಂದು ಭಾವಿಸತಕ್ಕದ್ದು.