ಯಾರೇ ಸರ್ಕಾರಿ ನೌಕರನು ಕೆಲಸದ ಸ್ಥಳದಲ್ಲಿ ಅಥವಾ ಇತರೆ ಯಾವುದೇ ಸ್ಥಳದಲ್ಲಿ ಯಾರೇ ಮಹಿಳೆಯ GOAT ಕಿರುಕುಳದ ಯಾವುದೇ ಕೃತ್ಯದಲ್ಲಿ ಪಾಲ್ಕೊಳ್ಳತಕ್ಕದ್ದಲ್ಲ.
ವಿವರಣೆ.- ಈ ನಿಯಮದ ಉದ್ದೇಶಕ್ಕಾಗಿ "ಲೈಂಗಿಕ ಕಿರುಕುಳ" ಎಂಬುದು (ನೇರವಾದ ಅಥವಾ ಸೂಚ್ಯವಾದ) ಇಷ್ಟವಾಗದ ಲೈಂಗಿಕ ಉದ್ದೇಶವುಳ್ಳ ನಡತೆಯನ್ನು, ಎಂದರೆ,-
(ಎ) ಮೈಮುಟ್ಟುವುದು ಮತ್ತು ಒಲಿಸಿಕೊಳ್ಳಲು ಪ್ರಯತ್ನಿಸುವುದನ್ನು;
(ಬಿ) = ಲೈಂಗಿಕ ಅನುಗ್ರಹಕ್ಕಾಗಿ ಒತ್ತಾಯ ಮಾಡುವುದನ್ನು ಅಥವಾ ಬೇಡಿಕೊಳ್ಳುವುದನ್ನು;
(ಸಿ) ಲೈಂಗಿಕ ವರ್ಣನೆಯ ಮಾತುಗಳನ್ನಾಡುವುದನ್ನು;
(ಡಿ) ಅಶ್ಲೀಲ ಸಾಹಿತ್ಯ, ಚಿತ್ರಗಳನ್ನು ತೋರಿಸುವುದನ್ನು ಅಥವಾ;
(ಇ) ಯಾವುದೇ ಇತರ ಇಷ್ಟವಾಗದ ಲೈಂಗಿಕ ಸ್ವರೂಪದ ದೈಹಿಕ, ಮೌಖಿಕ ಅಥವಾ ಆಂಗಿಕ ವರ್ತನೆಯನ್ನು - ಒಳಗೊಳ್ಳುತ್ತದೆ.