(1) ಯಾರೇ ಸರ್ಕಾರಿ ನೌಕರನು ಯಾವುದೇ ಸ್ಥಾಕಿನಲ್ಲಿ, ಷೇರಿನಲ್ಲಿ ಅಥವಾ ಇತರ ಬಂಡವಾಳ ಹೂಡಿಕೆಯಲ್ಲಿ ಸಟ್ಟಾ ವ್ಯವಹಾರ ಮಾಡತಕ್ಕದ್ದಲ್ಲ.
ವಿವರಣೆ: ಷೇರುಗಳನ್ನು, ಭದ್ರತಾ ಪತ್ರಗಳನ್ನು ಅಥವಾ ಇತರ ಬಂಡವಾಳ ಹೂಡಿಕೆಗಳನ್ನು ಮೇಲಿಂದ ಮೇಲೆ ಖರೀದಿ ಮಾಡುವುದನ್ನು ಅಥವಾ ಮಾರಾಟ ಮಾಡುವುದನ್ನು ಅಥವಾ ಅವೆರಡನ್ನೂ ಮಾಡುವುದನ್ನು ಈ ಉಪನಿಯಮದ ಅರ್ಥ ವ್ಯಾಪ್ತಿಯೊಳಗೆ ಸಟ್ಟಾ ವ್ಯವಹಾರವೆಂದು ಭಾವಿಸತಕ್ಕದ್ದು.
(2) ಯಾರೇ ಸರ್ಕಾರಿ ನೌಕರನು, ತನ್ನ ಸರ್ಕಾರಿ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ತನ್ನನ್ನು ಪೇಚಿಗೆ ಸಿಲುಕಿಸುವ ಅಥವಾ ತನ್ನ ಮೇಲೆ ಪರಿಣಾಮ ಉಂಟು ಮಾಡುವ ಸಂಭವವಿರುವ ಯಾವುದೇ ಬಂಡವಾಳ ಹೂಡಿಕೆ ಮಾಡತಕ್ಕದ್ದಲ್ಲ ಅಥವಾ ತನ್ನ ಕುಟುಂಬದ ಯಾರೇ ವ್ಯಕ್ತಿಯು ಅಥವಾ ತನ್ನ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಯಾರೇ ವ್ಯಕ್ತಿಯು ಯಾವುದೇ ಬಂಡವಾಳ ಹೂಡಲು ಅನುಮತಿಸತಕ್ಕದ್ದಲ್ಲ.
(3) ಯಾವುದೇ ವ್ಯವಹಾರವು... 1)ನೇ ಉಪ-ನಿಯಮದಲ್ಲಿ ಅಥವಾ (2ನೇ ಉಪನಿಯಮದಲ್ಲಿ ಹೇಳಿರುವಂಥ ಸ್ವರೂಪದ್ದೇ ಎಂಬ ಯಾವುದೇ ಪ್ರಶ್ನೆ ಉದ್ಭವಿಸಿದರೆ, ಅದನ್ನು ಸರ್ಕಾರದ ತೀರ್ಮಾನಕ್ಕೆ ಒಪ್ಪಿಸತಕ್ಕದ್ದು ಮತ್ತು ಅದರ ಬಗ್ಗೆ ಸರ್ಕಾರದ ತೀರ್ಮಾನವು ಅಂ೦ತಿಮವಾಗಿರತಕ್ಕದ್ದು.
(4) (i) ಯಾರೇ ಸರ್ಕಾರಿ ನೌಕರನು, ನಿಯಮಿಸಿದ ಪ್ರಾಧಿಕಾರದ ಪೂರ್ವ ಮಂಜೂರಾತಿಯನ್ನು ಪಡೆದ ಹೊರತು ಮತ್ತು ತಾನೇ ಆಗಲಿ ಅಥವಾ ತನ್ನ ಕುಟುಂಬದ ಯಾರೇ ಸದಸ್ಯನ ಅಥವಾ ತನ್ನ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಇತರ ಯಾರೇ ವ್ಯಕ್ತಿಯ ಮೂಲಕ, ಬ್ಯಾಲಕಿಂಗ್ ವ್ಯವಹಾರವನ್ನು ನಡೆಸಲು ವಿಧ್ಯಕ್ಷವಾಗಿ ಅಧಿಕಾರ ಪಡೆದ ಸುಸ್ಥಾಪಿತ ಬ್ಯಾಂಕಿನ ಅಥವಾ ಫರ್ಮಿನ ಜೊತೆ ವ್ಯವಹಾರ ನಡೆಸುವ ಸಾಮಾನ್ಯ ಕ್ರಮದಲ್ಲಿ ಹೊರತು:
(ii) ತನ್ನ ಅಧಿಕಾರದ ಸ್ಥಳೀಯ ಪರಿಮಿತಿಯೊಳಗೆ ಇರುವಂಥ ಅಥವಾ ತಾನು ಯಾರೊಂದಿಗೆ ಅಧಿಕೃತ ವ್ಯವಹಾರ ನಡೆಸುವ ಸಂಂಭವವಿದೆಯೋ ಅಂಥ ಅಥವಾ ತನ್ನನ್ನು ಯಾವುದೇ ಹಣಕಾಸು ಬಾಧ್ಯತೆಯ ಅಡಿಯಲ್ಲಿ ಯಾರಿಗೆ ನಿಯೋಜಿಸಲಾಗಿದೆಯೋ ಅಂಥ ಯಾವುದೇ ವ್ಯಕ್ತಿ ಅಥವಾ ಫರ್ಮು ಅಥವಾ ಖಾಸಗಿ ನಿಯಮಿತ ಕಂಪನಿಗೆ ಅಥವಾ ಅವರಿಂದ ಅಥವಾ ಅವರೊಂದಿಗೆ ಸೇರಿ ತಾನೇ ಪ್ರಧಾನವಾಗಿ ಅಥವಾ ಏಜೆಂಟನಾಗಿ ಸಾಲ ನೀಡತಕ್ಕದ್ದಲ್ಲ ಅಥವಾ ಸಾಲ ಪಡೆಯತಕ್ಕದ್ದಲ್ಲ ಅಥವಾ ಹಣವನ್ನು ಠೇವಣಿ ಮಾಡತಕ್ಕದ್ದಲ್ಲ.
(iii) DAMON ಅಥವಾ ಹಣವನ್ನು ವಾಪಸ್ಸು ಮಾಡುವ ಕಾಲಕ್ಕೆ ಹಣದ ರೂಪದಲ್ಲಿ ಅಥವಾ ವಸ್ತು ರೂಪದಲ್ಲಿ ಕೊಡುವಂತೆ ವಿಧಿಸುವ ಅಥವಾ ಸಂದಾಯ ಮಾಡುವ ರೀತಿಯಲ್ಲಿ ಯಾರೇ ವ್ಯಕ್ತಿಗೆ ಹಣ ಸಾಲ ನೀಡತಕ್ಕದ್ದಲ್ಲ:
BOOS), ಸರ್ಕಾರಿ ನೌಕರನು ತನ್ನ ಸಂಬಂಧಿಕವಿಗೆ ಅಥವಾ ಸಂಬಂಧಿಕನಿಂದ ಅಥವಾ ಆಪ್ತ ಮಿತ್ರನಿಗೆ ಅಥವಾ ಆಪ್ತ ಮಿತ್ರನಿಂಂದ ತನ್ನ ಆರು ತಿಂಗಳ ಒಟ್ಟು ಉಪಲಬ್ಧಗಳನ್ನು ಮೀರದಷ್ಟು ಮೊತ್ತವನ್ನು ಕೇವಲ ತಾತ್ಕಾಲಿಕ ಸಾಲವಾಗಿ ಬಡ್ಡಿ ಇಲ್ಲದೆ ಕೊಡಬಹುದು ಅಥವಾ ತೆಗೆದುಕೊಳ್ಳಬಹುದು ಅಥವಾ ಪ್ರಾಮಾಣಿಕ ವ್ಯಾಪಾರಿಯೊಬ್ಬರೊಡನೆ. ಸಾಲದ ಲೆಕ್ಕ ಪತ್ರವನ್ನಿಟ್ಟುಕೊಳ್ಳಬಹುದು ಅಥವಾ ತನ್ನ ಖಾಸಗಿ ನೌಕರನಿಗೆ ಮುಂಗಡ ಸಂಬಳ ಕೊಡಬಹುದು:
ಮತ್ತೂ ಪರಂತು, ಈ ಉಪ-ನಿಯಮದಲ್ಲಿ ಇರುವುದು ಯಾವುದೂ, ನಿಯಮಿಸಲಾದ ಪ್ರಾಧಿಕಾರದ ಪೂರ್ವಾ ಮಂ೦ಜೂರಾತಿಯೊಂ೦ದಿಗೆ ಸರ್ಕಾರಿ ನೌಕರನು ಒಪ್ಪಂದ ಮಾಡಿಕೊಂಡ ಯಾವುದೇ ವ್ಯವಹರಣೆಗಳಿಗೆ ಸಂಬಂಧಿಸಿದಂತೆ ಅನ್ವಯವಾಗತಕ್ಕದ್ದಲ್ಲ.
(iv) ಯಾವ ಹುದ್ದೆಯ ಸ್ವರೂಪವು ಸರ್ಕಾರಿ ನೌಕರನು, (2ನೇ ಉಪನಿಯಮದ ಅಥವಾ (4)ನೇ ಉಪನಿಯಮದ ಯಾವುದೇ ಉಪಬಂಧವನ್ನು ಉಲ್ಲಂಘಿಸುವುದನ್ನು ಒಳಗೊಂಡಿರಬಹುದಾಗಿದೆಯೋ ಆ ಸ್ವರೂಪದ ಹುದ್ದೆಗೆ ಅವನು ನೇಮಕಗೊಂಡಾಗ ಅಥವಾ ವರ್ಗಾವಣೆಯಾದಾಗ, ಅವನು, ಅಂಥ ಸಂದರ್ಭಗಳನ್ನು ಸರ್ಕಾರಕ್ಕೆ ತಕ್ಷಣವೇ ವರದಿ ಮಾಡತಕ್ಕದ್ದು ಮತ್ತು ಆ ತರುವಾಯ ಸರ್ಕಾರವು ಮಾಡಬಹುದಾದಂಥ ಆದೇಶಕ್ಕೆ ಅನುಸಾರವಾಗಿ ಕಾರ್ಯ ನಿರ್ವಹಿಸತಕ್ಕದ್ದು.