(1) ಸರ್ಕಾರಿ ನೌಕರನು ಯಾವುದೇ ಮನವಿಯನ್ನು ಸಮುಚಿತ ಮಾರ್ಗದ ಮೂಲಕ ಮಾತ್ರ ಸಲ್ಲಿಸತಕ್ಕದ್ದು ಮತ್ತು ಅದನ್ನು ಸರ್ಕಾರಕ್ಕೆ ಸಂಬೋಧಿಸಿದಾಗಲೆಲ್ಲಾ ಅದರ ಮುಂಗಡ ಪ್ರತಿಯನ್ನು ಸಂಬಂಧಪಟ್ಟ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರಿಗೆ ಮಾತ್ರ ಸಲ್ಲಿಸತಕ್ಕದ್ದು, ಆದರೆ ಆ ಇಲಾಖೆಯ ಪ್ರಭಾರದಲ್ಲಿರುವ ಸಚಿವರಿಗೆ ಅಲ್ಲ.
(2) ಸರ್ಕಾರಿ ನೌಕರನು, ತನ್ನ ನಿಕಟ ಉನ್ನತ ಪ್ರಾಧಿಕಾರಿಗೆ ಸಲ್ಲಿಸಿದ ಮನವಿಯನ್ನು ಎರಡು BONY ಒಳಗಾಗಿ ಪರಿಗಣಿಸದಿದ್ದಲ್ಲಿ ಅಥವಾ ಆತನಿಗೆ ಹಿಂಬರಹ ನೀಡದಿದ್ದಲ್ಲಿ ಆತ ನಂತರದ ಉನ್ನತ ಪಾಧಿಕಾರಿಗೆ ತನ್ನ ಮನವಿಯನ್ನು ಸಲ್ಲಿಸಬಹುದಾಗಿದೆ.
(3) ಅವನು ಸಲ್ಲಿಸಿರುವ ಮನವಿಯು ಪರಿಗಣನೆಯಲ್ಲಿರುವಾಗ ಅಥವಾ ಅದಕ್ಕ ಈಗಾಗಲೇ ಹಿಂಬರಹ ನವೀಡಿರುವಾಗ ಅಥವಾ ಆತನ ಮನವಿಯ ಮೇಲೆ ಈಗಾಗಲೇ ನಿರ್ಣಯ ತೆಗೆದುಕೊಂಡಿರುವಾಗ ಅದೇ ಮನವಿಯನ್ನು ಪದೇ ಪದೇ ಸಲ್ಲಿಸತಕ್ಕದ್ದಲ್ಲ.