(1) ಈ ನಿಯಮಗಳನ್ನು ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಮತ್ತು ನಿಯಂತ್ರಣ) ನಿಯಮಗಳು, 2012 ಎಂದು ಕರೆಯತಕ್ಕದ್ದು.
(2) ಅವು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಮತ್ತು ನಿಯಂತ್ರಣ) ನಿಯಮಗಳು, 2012, Water Resources Department
2012 · PDF page 1
Hover any section to copy its link or text, ask Copilot about it, or bookmark it.
(1) ಈ ನಿಯಮಗಳಲ್ಲಿ ಅನ್ಯಥಾ ಅಗತ್ಯಪಡಿಸಿದ ಹೊರತು;
(ಎ) “ಅಧಿನಿಯಮ” ಎಂದರೆ, ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಮತ್ತು ನಿಯಂತ್ರಣ) ಅಧಿನಿಯಮ, 2011 (2011 ರ ಕರ್ನಾಟಕ ಅಧಿನಿಯಮ ಸಂಖ್ಯೆ 25)
(ಬಿ) "ನಮೂನೆ" ಎಂದರೆ ಈ ನಿಯಮಗಳಿಗೆ ಅನುಬಂಧಿಸಲಾದ ನಮೂನೆ;
(ಸಿ) "ಅನುಸೂಚಿ" ಎಂದರೆ ಈ ನಿಯಮಗಳಿಗೆ ಅನುಬಂಧಿಸಲಾದ ಅನುಸೂಚಿ.
(2) ಈ ನಿಯಮಗಳಲ್ಲಿ ಬಳಸಿರುವ ಆದರೆ ಪರಿಭಾಷಿಸಿರದ ಪದಗಳು ಮತ್ತು ಪದಾವಳಿಗಳು ಅಧಿನಿಯಮದಲ್ಲಿ ಅವುಗಳಿಗೆ ಕೊಟ್ಟಿರುವ ಅದೇ ಅರ್ಥವನ್ನು ಹೊಂದಿರತಕ್ಕದ್ದು.
(1) 10 ನೇ ಪ್ರಕರಣದ (3)ನೇ ಉಪ-ಪ್ರಕರಣದ ಅಡಿಯಲ್ಲಿ ಯಾವುದೇ ಪ್ರದೇಶವನ್ನು ಅಧಿಸೂಚಿತ ಪ್ರದೇಶ ಎಂಬುದಾಗಿ ಘೋಷಿಸಿದ ಅಧಿಸೂಚನೆಯನ್ನು ಸಂದರ್ಭಾನುಸಾರ ಜಿಲ್ಲಾಮಟ್ಟದಲ್ಲಿ ಹಿರಿಯ ಭೂವಿಜ್ಞಾನಿ ಅಥವಾ ಉಪನಿರ್ದೇಶಕರ ಕಛೇರಿ ಸೂಚನಾಫಲಕದಲ್ಲಿ ಮತ್ತು ಸಂಬಂಧಪಟ್ಟ ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತಿಯ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸತಕ್ಕದ್ದು.
(2) 10ನೇ ಪ್ರಕರಣದ 5ನೇ ಉಪ-ಪ್ರಕರಣದಡಿ ಅಧಿಸೂಚಿತ ಪ್ರದೇಶವನ್ನು ಅಧಿಸೂಚನೆಯಿಂದ ತೆಗೆದು ಹಾಕುವುದಕ್ಕಾಗಿನ ಕಾರ್ಯ ವಿಧಾನವು ಈ ಮುಂದಿನಂತಿರಕ್ಕದ್ದು, ಎಂದರೆ:-
(i) ನಿರ್ದೇಶಕರು ಅಧಿಸೂಚಿತ ಪ್ರದೇಶದಲ್ಲಿನ ಅಂತರ್ಜಲ ಮಟ್ಟದ ಏರಿಳಿತದ ಮತ್ತು 10 ನೇ ಪ್ರಕರಣದ (3) ನೇ ಉಪ-ಪ್ರಕರಣದ ಅಡಿಯಲ್ಲಿ ಘೋಷಿಸಲಾದ ಅಂಥ ಅಧಿಸೂಚಿತ ಪ್ರದೇಶದಲ್ಲಿನ ಅಂತರ್ಜಲ ಲಭ್ಯತೆಯ ಬಗ್ಗೆ ಹಿರಿಯ ಭೂವಿಜ್ಞಾನಿ ಅಥವಾ ಉಪ ನಿರ್ದೇಶಕರಿಂದ ಪ್ರತಿ ತಿಂಗಳು ವರದಿಯನ್ನು ಪಡೆಯತಕ್ಕದ್ದು.
(ii) ನಿರ್ದೇಶಕರು ಅಧಿಸೂಚಿತ ಪ್ರದೇಶದಲ್ಲಿನ ಪ್ರತಿ ತಿಂಗಳು ಹಿರಿಯ ಭೂವಿಜ್ಞಾನಿ ಅಥವಾ ಉಪ ನಿರ್ದೇಶಕರು ಕಳುಹಿಸಿದ ವರದಿಯನ್ನು ಪರಿಶೀಲಿಸತಕ್ಕದ್ದು ಮತ್ತು ಅವರು ಅಂಥ ಅಧಿಸೂಚಿತ ಪ್ರದೇಶದಲ್ಲಿ ಅಂತರ್ಜಲದ ಲಭ್ಯತೆಯು ಸುಧಾರಣೆಯಾಗಿದೆ ಎಂದು ಅಭಿಪ್ರಾಯ ಪಟ್ಟರೆ ಪ್ರಕರಣ 10ರ ಉಪ-ಪ್ರಕರಣ 2ರಂತೆ ಅಧಿಸೂಚನೆಯಿಂದ ತೆಗೆದುಹಾಕುವ ಬಗ್ಗೆ ವಿವಿಧ ತಜ್ಞ ಸಂಸ್ಥೆಗಳೊಂದಿಗೆ ಸಮಾಲೋಚಿಸತಕ್ಕದ್ದು.
(iii) ನಿರ್ದೇಶಕರು ವಿವಿಧ ತಜ್ಞ ಸಂಸ್ಥೆಗಳೊಂದಿಗೆ ಸಮಾಲೋಚಿಸಿದ ತರುವಾಯ ಅಧಿಸೂಚಿತ ಪ್ರದೇಶವನ್ನು ಅಧಿಸೂಚನೆಯಿಂದ ತೆಗೆದು ಹಾಕುವುದಕ್ಕೆ ಸಂಬಂಧಿಸಿದ ಶಿಫಾರಸ್ಸುಗಳ ಜೊತೆಯಲ್ಲಿ ಪ್ರಸ್ತಾವನೆಯನ್ನು ಪ್ರಾಧಿಕಾರಕ್ಕೆ ಕಳುಹಿಸುವುದು.
(iv) ಪ್ರಾಧಿಕಾರವು, ಅಧಿಸೂಚಿತ ಪ್ರದೇಶವನ್ನು ಅಧಿಸೂಚನೆಯಿಂದ ತೆಗೆದುಹಾಕುವ ಪ್ರಸ್ತಾವನೆಯನ್ನು ಮತ್ತು ನಿರ್ದೇಶಕರು ಇವರ ಶಿಫಾರಸ್ಸನ್ನು ಪರಿಗಣಿಸಿ, ಅಧಿಸೂಚಿತ ಪ್ರದೇಶವನ್ನು ಅಧಿಸೂಚನೆಯಿಂದ ತೆಗೆದುಹಾಕುವ ಆದೇಶ ಹೊರಡಿಸಲು ತನ್ನ ನಿರ್ದಿಷ್ಟ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವುದು.
(1) ಕುಡಿಯುವ ನೀರಿನ ಮತ್ತು ಕೃಷಿ ಉದ್ದೇಶಕ್ಕಾಗಿ ಅಧಿಸೂಚಿತ ಪ್ರದೇಶದಲ್ಲಿ ಬಾವಿ/ಕೊಳವೆಬಾವಿ ತೋಡುವುದಕ್ಕೆ/ ಕೊರೆಯುವುದಕ್ಕೆ ಮತ್ತು ಅಂತರ್ಜಲ ತೆಗೆಯಲು ಮತ್ತು ಬಳಸಲು ಪರ್ಮಿಟ್ ಮಂಜೂರಾತಿಗಾಗಿ ಅರ್ಜಿಯನ್ನು ನಮೂನೆ-1ಎ ನಲ್ಲಿ ಐವತ್ತು ರೂಪಾಯಿಗಳ ಶುಲ್ಕದ ಜೊತೆಯಲ್ಲಿ (ಅಧಿನಿಯಮದ ಪ್ರಕರಣ 11ರ ಉಪ-ಪ್ರಕರಣ 2) ಮತ್ತು
(i) ಕೃಷಿ ಭೂಮಿಗೆ ಸಂಬಂಧವಾಗಿ, ಅಂಥ ಕೃಷಿ ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಹಕ್ಕು ದಾಖಲೆಯ ಉದ್ಧೃತ ಭಾಗಗಳು (ಕರ್ನಾಟಕ ಭೂ ದಾಖಲೆಯ ಅಧಿನಿಯಮ 1964 ರಂತೆ)
(ii) ಗೃಹ ಬಳಕೆದಾರರ ಸಂಬಂಧವಾಗಿ, ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಿಂದ ನೀಡಿದ ಅಂಥ ಆಸ್ತಿಯ ಖಾತಾ ಪ್ರಮಾಣ ಪತ್ರ ಮತ್ತು ಸರ್ವೆ ನಂಬರ್, ವಿಳಾಸ ದಾಖಲೆ, ಸಂದರ್ಭಾನುಸಾರ ಸಂಬಂಧಪಟ್ಟ ಪುರಸಭಾ ನಿಗಮ, ಪಟ್ಟಣ ಪಂಚಾಯಿತಿ ಅಥವಾ ಗ್ರಾಮ ಪಂಚಾಯಿತಿಯಲ್ಲಿ ತೆರಿಗೆ ಪಾವತಿ ಮಾಡಿದ ರಶೀತಿಗಳು ಅಥವಾ ಕರ್ನಾಟಕ ಭೂ ದಾಖಲೆಯ ಅಧಿನಿಯಮ 1964 ರಂತೆ ಹಕ್ಕು ದಾಖಲೆಯ ಉದ್ಧೃತ ಭಾಗಗಳು, ಸೇರಿದಂತೆ ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು.
(2) ಕೈಗಾರಿಕಾ, ವಾಣಿಜ್ಯ ಅಥವಾ ಮನರಂಜನೆ ಉದ್ದೇಶಕ್ಕಾಗಿ ಅಧಿಸೂಚಿತ ಪ್ರದೇಶದಲ್ಲಿ ಬಾವಿ/ಕೊಳವೆಬಾವಿ ತೋಡುವುದಕ್ಕೆ ಅಥವಾ ಕೊರೆಯುವುದಕ್ಕೆ ಮತ್ತು ಅಂತರ್ಜಲ ಹೊರ ತೆಗೆಯಲು ಮತ್ತು ಬಳಸುವುದಕ್ಕೆ ಪರ್ಮಿಟ್ಗಾಗಿ ಅರ್ಜಿಯನ್ನು ಐದು ನೂರು ರೂಪಾಯಿಗಳ ಶುಲ್ಕದೊಂದಿಗೆ (ಅಧಿನಿಯಮದ ಪ್ರಕರಣ 11ರ ಉಪ-ಪ್ರಕರಣ 2) ನಮೂನೆ -1ಬಿ ನಲ್ಲಿ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು ಮತ್ತು ಅಂಥ ಕೈಗಾರಿಕಾ, ವಾಣಿಜ್ಯ, ಮನರಂಜನೆ ಸಂಸ್ಥೆಯ ಮಾಲಿಕತ್ವದ ಸಂಬಂಧವಾಗಿ ಸಕ್ಷಮ ಪ್ರಾಧಿಕಾರದಿಂದ ಮಂಜೂರು ಮಾಡಿದ ದಾಖಲೆಗಳನ್ನು ಜೊತೆಯಲ್ಲಿ ಲಗತ್ತಿಸತಕ್ಕದ್ದು.
(3) ಬಾವಿ/ಕೊಳವೆಬಾವಿ ತೋಡುವುದಕ್ಕೆ ಅಥವಾ ಕೊರೆಯುವುದಕ್ಕೆ ಮತ್ತು ಕೃಷಿ ಅಥವಾ ಕುಡಿಯುವ ನೀರಿನ ಉದ್ದೇಶಕ್ಕಾಗಿ ಅಂತರ್ಜಲ ತೆಗೆಯಲು ಮತ್ತು ಬಳಸಲು ಅನುಮತಿಗಾಗಿ ಅರ್ಜಿಯು ನಮೂನೆ-2ಎ ನಲ್ಲಿ ಇರತಕ್ಕದ್ದು ಮತ್ತು ನಿರಾಕರಣೆಯ ಆದೇಶವು ನಮೂನೆ-2ಬಿ ನಲ್ಲಿ ಇರತಕ್ಕದ್ದು. ಬಾವಿಗಳನ್ನು ತೋಡುವುದಕ್ಕೆ ಅಥವಾ ಕೊರೆಯುವುದಕ್ಕೆ ಮತ್ತು ಕೈಗಾರಿಕೆ ಮತ್ತು ಇತರ ಬಳಕೆಗಾಗಿ ಅರ್ಜಿಯು ನಮೂನೆ-3ಎ ನಲ್ಲಿ ಇರತಕ್ಕದ್ದು ಮತ್ತು ನಿರಾಕರಣೆಯ ಆದೇಶವು ನಮೂನೆ-3ಬಿ ನಲ್ಲಿ ಇರತಕ್ಕದ್ದು.
(1) ಅಂತರ್ಜಲವನ್ನು ಹೊರ ತೆಗೆಯುವುದಕ್ಕಾಗಿ ಬಾವಿಯನ್ನು ತೋಡುವ ಅಥವಾ ಕೊಳವೆ ಬಾವಿಗಳನ್ನು ಕೊರೆಯುವ ವ್ಯವಹಾರವನ್ನು ನಡೆಸಲು ಇಚ್ಛಿಸಿರುವ ವ್ಯಕ್ತಿಗಳು 13(3)ನೇ ಪ್ರಕರಣದ ಅಡಿಯಲ್ಲಿ ಕೊರೆಯುವ ಏಜೆನ್ಸಿಯ ನೋಂದಣಿ ಶುಲ್ಕ ಪ್ರತಿ ಕೊರೆಯುವ ರಿಗ್ಗೆ ಐದು ಸಾವಿರ ರೂಪಾಯಿನೊಂದಿಗೆ ಈ ಮುಂದಿನ ಷರತ್ತುಗಳಿಗೊಳಪಟ್ಟು ನಮೂನೆ-6 ರಲ್ಲಿ ಅರ್ಜಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು:-
(i) ಅವನು ಕನಿಷ್ಠ 900/200 ಪಿಎಸ್ಐ ಸಾಮರ್ಥ್ಯದ ಕೊರೆಯುವ ರಿಗ್ನ ಕಂಪ್ರೆಸ್ಸರ್ನ್ನು ಹೊಂದಿರತಕ್ಕದ್ದು;
(ii) ಅವನು ಕನಿಷ್ಠ 152 ಎಂಎಂ ವ್ಯಾಸದ ಕೊಳವೆಬಾವಿ ಕೊರೆಯುವ ಯಂತ್ರವನ್ನು ಹೊಂದಿರತಕ್ಕದ್ದು;
(iii) ಅವನು ಗಟ್ಟಿ ಬಂಡೆ ಇರುವ ಭೂ ಪ್ರದೇಶದಲ್ಲಿ ಅಂತರ್ಜಲ ತೆಗೆಯಲು ಬಾವಿ/ಕೊಳವೆಬಾವಿ ತೋಡುವ ಅಥವಾ ಕೊರೆಯುವ ಬಗ್ಗೆ ಕನಿಷ್ಠ ಮೂರು ವರ್ಷಗಳ ಅನುಭವವಿದ್ದು ಕನಿಷ್ಠ ಮೆಕಾನಿಕಲ್ ಇಂಜಿನಿಯರ್ನಲ್ಲಿ ಡಿಪ್ಲೊಮೊ ವಿದ್ಯಾರ್ಹತೆಯನ್ನು ಹೊಂದಿರುವಂಥ ಕೊರೆಯುವ ಕೆಲಸಗಾರನನ್ನು (ಡ್ರಿಲ್ಲರ್) ನೇಮಕ ಮಾಡಿಕೊಳ್ಳತಕ್ಕದ್ದು.
(2) ಪ್ರಾಧಿಕಾರವು 8(1)ನೇ ನಿಯಮದ ಅಡಿಯಲ್ಲಿ ನಿರ್ದಿಷ್ಟಪಡಿಸಲಾದ ಷರತ್ತುಗಳನ್ನು ಮನವರಿಕೆ ಮಾಡಿಕೊಂಡ ತರುವಾಯ ಪ್ರತಿಯೊಂದು ಕೊರೆಯುವ ಘಟಕವನ್ನು ನೋಂದಣಿ ಮಾಡಬಹುದು ಮತ್ತು ಎರಡು ವರ್ಷಗಳ ಅವಧಿಗೆ ನಮೂನೆ-7ಎ ನಲ್ಲಿ ನೋಂದಣಿ ಪ್ರಮಾಣಪತ್ರವನ್ನು ನೀಡಬಹುದು ಮತ್ತು ಅವರಿಗೆ ಮನವರಿಕೆಯಾಗದಿರುವ ಸಂದರ್ಭದಲ್ಲಿ ಅವರು ಸೂಕ್ತ ಕಾರಣಗಳೊಂದಿಗೆ ನಿರಾಕರಣೆಯ ಆದೇಶವನ್ನು ನಮೂನೆ -7ಬಿ ನಲ್ಲಿ ನೀಡಬಹುದು.
(3) ಪ್ರತಿಯೊಂದು ಕೊರೆಯುವ ಏಜೆನ್ಸಿಯು ನೋಂದಣಿ ಪ್ರಮಾಣ ಪತ್ರದಲ್ಲಿ ನಿರ್ದಿಷ್ಟ ಪಡಿಸಲಾದ ಷರತ್ತುಗಳನ್ನು ಪಾಲಿಸತಕ್ಕದ್ದು.
5ನೇ ಪ್ರಕರಣದ ಅಡಿಯಲ್ಲಿ ಅಧಿಕಾರೇತರ ಸದಸ್ಯರ ಮರು ನೇಮಕಾತಿಗಾಗಿ ಷರತ್ತುಗಳು ಈ ಮುಂದಿನಂತಿರತಕ್ಕದ್ದು:-
(1) ಅವರನ್ನು ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ನೇಮಕ ಮಾಡಿರುವುದನ್ನು 4ನೇ ಪ್ರಕರಣದ ಅಡಿಯಲ್ಲಿ ಅನರ್ಹಗೊಳಿಸತಕ್ಕದ್ದಲ್ಲ.
(2) ಅವರನ್ನು 6ನೇ ಪ್ರಕರಣದ ಅಡಿಯಲ್ಲಿ ಸದಸ್ಯನನ್ನು ತೆಗೆದುಹಾಕುವುದಕ್ಕಾಗಿ ಯಾವುದೇ ಷರತ್ತುಗಳಿಗೆ ಒಳಪಡಿಸತಕ್ಕದ್ದಲ್ಲ. 4. 5(3)ನೇ ಪ್ರಕರಣದ ಅಡಿಯಲ್ಲಿ ಸರ್ಕಾರೇತರ ಸದಸ್ಯರಿಗೆ ಭತ್ಯೆಗಳು:- ಸರ್ಕಾರದಿಂದ ನಾಮ ನಿರ್ದೇಶಿತನಾದ ಅಧಿಕಾರೇತರ ಸದಸ್ಯನು ಪ್ರತಿ ದಿನ 1000/- ರೂಪಾಯಿಗಳ ಸಭಾಭತ್ಯೆಗೆ ಅರ್ಹನಾಗಿರತಕ್ಕದ್ದು ಮತ್ತು ಪ್ರಯಾಣದ ಉದ್ದೇಶಕ್ಕಾಗಿ ಪ್ರಥಮ ದರ್ಜೆ ರೈಲು ದರಕ್ಕೆ ಹಕ್ಕುಳ್ಳವನಾಗಿರತಕ್ಕದ್ದು.
(1) ಅಧಿಸೂಚಿತ ಪ್ರದೇಶದಲ್ಲಿ ಪ್ರಸ್ತುತ ಅಂತರ್ಜಲ ಬಳಕೆದಾರರ ನೋಂದಣಿಗಾಗಿ ಅರ್ಜಿಯನ್ನು ಕುಡಿಯುವ ಮತ್ತು ಕೃಷಿ ಉದ್ದೇಶಕ್ಕಾಗಿ ಐವತ್ತು ರೂಪಾಯಿಯ ಶುಲ್ಕದೊಂದಿಗೆ ನಮೂನೆ-4 ರಲ್ಲಿ ಸಲ್ಲಿಸತಕ್ಕದ್ದು. ಕೈಗಾರಿಕೆ, ವಾಣಿಜ್ಯ, ಮನೋರಂಜನೆ ಅಥವಾ ಇತರ ಉದ್ದೇಶಕ್ಕಾಗಿ ಐದು ನೂರು ರೂಪಾಯಿಗಳ ಶುಲ್ಕವನ್ನು ಸಲ್ಲಿಸತಕ್ಕದ್ದು.
(2) ಪ್ರಸ್ತುತ ಅಂತರ್ಜಲ ಬಳಕೆದಾರನ ನೋಂದಣಿ ಪ್ರಮಾಣಪತ್ರವು ನಮೂನೆ-5ಎ ನಲ್ಲಿರತಕ್ಕದ್ದು.
(3) ನಿರಾಕರಣೆಯ ಆದೇಶವು ನಮೂನೆ - 5 ಬಿ ನಲ್ಲಿರತಕ್ಕದ್ದು.
ಪ್ರಾಧಿಕಾರದ ಲಿಖಿತ ಸೂಚನೆಗಳ ಪ್ರಕಾರ ಬಾವಿ ಕೊರೆಯುವ ಉಸ್ತುವಾರಿ ಹೊಂದಿರುವ ಪ್ರತಿಯೊಬ್ಬನು ಬಾವಿಯ ಪ್ರತಿ 50 ಮೀಟರ್ಗಳ ಅಂತರದ ಆಳದಲ್ಲಿನ ಮಣ್ಣು ಮತ್ತು ಶಿಲೆಯ ಮಾದರಿಗಳನ್ನು ಹಾಗೂ ಬಾವಿಯ ನಿರ್ಮಾಣ ಪೂರ್ಣಗೊಂಡ ತರುವಾಯ ಅಂತರ್ಜಲ ಮಾದರಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳತಕ್ಕದ್ದು. ಅಂಥ ಮಣ್ಣು ಮತ್ತು ಬಂಡೆಯ ಮಾದರಿಗಳನ್ನು ಬಿಸಿಲಿನಲ್ಲಿ ಒಣಗಿಸತಕ್ಕದ್ದು ಮತ್ತು ಅರ್ಧ ಕಿಲೋಗ್ರಾಂ ಸಾಮರ್ಥ್ಯದ ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿದ ಮಾದರಿಯ ಆಳವನ್ನು ಅವುಗಳ ಮೇಲೆ ಸೂಚಿಸಿ ಸಂಗ್ರಹಿಸತಕ್ಕದ್ದು. ಸಂಗ್ರಹಿಸಲ್ಪಟ್ಟ ಮಾದರಿಗಳನ್ನು ವಿವರಗಳೊಂದಿಗೆ ಮೂರು ದಿನಗಳೊಳಗೆ ಪ್ರಾಧಿಕಾರಕ್ಕೆ ನೀಡತಕ್ಕದ್ದು ಅದನ್ನು ಬಾವಿ ನಿರ್ಮಾಣಗೊಂಡ ದಿನಾಂಕದಿಂದ ಮೂರು ತಿಂಗಳವರೆಗೆ ಸಂರಕ್ಷಿಸತಕ್ಕದ್ದು. ಅಂತರ್ಜಲ ಮಾದರಿಗಳನ್ನು ಒಂದು ಲೀಟರ್ ಪ್ಲಾಸ್ಟಿಕ್ ಬಾಟಲ್ನಲ್ಲಿ (ಕಂಟೈನರ್) ಗಾಳಿ ಹೋಗದಂತೆ ಸಂಗ್ರಹಿಸತಕ್ಕದ್ದು ಮತ್ತು ಬಾವಿ ನಿರ್ಮಾಣದ ದಿನಾಂಕದಿಂದ ಮೂರು ತಿಂಗಳವರೆಗೆ ನೇರವಾಗಿ ಸೂರ್ಯನ ಬೆಳಕು ಬೀಳದಂತೆ ಸಂರಕ್ಷಿಸತಕ್ಕದ್ದು. ಯಾವ ಆಳದಿಂದ ಮಾದರಿಯನ್ನು ಯಾರಿಂದ ಸಂಗ್ರಹಿಸಲಾಗಿತ್ತೋ ಆ ವಿವರಗಳನ್ನು ಸಂಗ್ರಹಿಸಿದ ಚೀಲದ ಮೇಲೆ ದಾಖಲು ಮಾಡತಕ್ಕದ್ದು. ಈ ಮಾದರಿಗಳನ್ನು ಪ್ರಾಧಿಕಾರವು ಪರೀಕ್ಷಿಸತಕ್ಕದ್ದು.
(1) ಜಲ ಮಾಪಕ ಸಾಧನವನ್ನು ಅಳವಡಿಸಿಕೊಳ್ಳಬೇಕಾದ ಪ್ರತಿಯೊಬ್ಬ ಕೈಗಾರಿಕಾ ಅಥವಾ ವಾಣಿಜ್ಯ ಅಥವಾ ಇತರ ಅಂತರ್ಜಲ ಬಳಕೆದಾರನು ಅಂತರ್ಜಲ ಬಳಕೆಯ ಸಮರ್ಪಕ ನಿರ್ವಹಣೆಯ ಐಎಸ್ಐ (ISI) ನಿರ್ದಿಷ್ಟಪಡಿಸಿರುವ ಜಲ ಮಾಪಕ ಸಾಧನವನ್ನು ಅಳವಡಿಸತಕ್ಕದ್ದು ಮತ್ತು ಪ್ರತಿ ತಿಂಗಳು ಹೊರತೆಗೆದ ಒಟ್ಟು ಪ್ರಮಾಣದ ಅಂತರ್ಜಲದ ಮಾಹಿತಿಯನ್ನು ಜಿಲ್ಲಾ ಮಟ್ಟದ ಪ್ರಾಧಿಕಾರದ ನಿರ್ದಿಷ್ಟ ಅಧಿಕಾರಿಗೆ ಒದಗಿಸತಕ್ಕದ್ದು.
(2) ಪ್ರತಿಯೊಂದು ಕೊರೆಯುವ ಏಜೆನ್ಸಿಯು ಕೊರೆದ ಕೊಳವೆ ಬಾವಿಯ ಆಳದೊಂದಿಗೆ ಸ್ಥಳ, ದಿನಾಂಕ ಮತ್ತು ಕೊಳವೆ ಬಾವಿಗಳ ಸಂಖ್ಯೆ, ಪ್ರತಿಯೊಂದು ಕೊಳವೆ ಬಾವಿಯ ಕೇಸಿಂಗ್ ಮತ್ತು ಇಳುವರಿಯ ಮಾಹಿತಿಯನ್ನು ಪ್ರತಿ ತಿಂಗಳು ಸಂಬಂಧಪಟ್ಟ ಜಿಲ್ಲೆಯ ಪ್ರಾಧಿಕಾರದ ನಿರ್ದಿಷ್ಟ ಅಧಿಕಾರಿಗೆ ಒದಗಿಸತಕ್ಕದ್ದು.
ಪ್ರಾಧಿಕಾರದ ನಿಧಿಗಳನ್ನು ಈ ಮುಂದಿನ ಉದ್ದೇಶಗಳಿಗಾಗಿ ಬಳಸತಕ್ಕದ್ದು, ಎಂದರೆ:-
(i) ಪ್ರಾಧಿಕಾರದ ಸದಸ್ಯರ ಪ್ರಯಾಣ ವೆಚ್ಚ;
(ii) ಪ್ರಾಧಿಕಾರದ ಸರ್ಕಾರೇತರ ಸದಸ್ಯರಿಗೆ ಸಭಾ ಭತ್ಯೆ;
(iii) ಪ್ರಾಧಿಕಾರದ ಸಭೆಗಳಿಗೆ ಸಂಬಂಧಿಸಿದ ವೆಚ್ಚ;
(iv) ಪ್ರಾಧಿಕಾರಕ್ಕೆ ಬೇಕಾಗಿರುವ ಲೇಖನ ಸಾಮಾಗ್ರಿ;
(v) ಈ ಅಧಿನಿಯಮದ ಅಡಿಯಲ್ಲಿ ತನ್ನ ಅಧಿಕಾರಗಳನ್ನು ಚಲಾಯಿಸುವಲ್ಲಿ ಪ್ರಾಧಿಕಾರದಿಂದ ಭರಿಸಲಾದ ವೆಚ್ಚ;
(vi) ಪ್ರಾಧಿಕಾರದ ಕೆಲಸಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ಅಧ್ಯಯನಗಳಿಗಾಗಿ ಬೇಕಾದ ಉಪಕರಣಗಳ ಖರೀದಿ ಮತ್ತು ದುರಸ್ತಿ ವೆಚ್ಚ;
(vii) ಪ್ರಾಧಿಕಾರಕ್ಕೆ ಬೇಕಾಗಿರುವ ವಾಹನಗಳ ಖರೀದಿ ಮತ್ತು ಅಂಥ ವಾಹನಗಳ ಇಂಧನ ಮತ್ತು ದುರಸ್ತಿ ವೆಚ್ಚಗಳು;
(viii) ಪ್ರಾಧಿಕಾರಕ್ಕೆ ಬೇಕಾಗಿರುವ ಪೀಠೋಪಕರಣ, ಗಣಕಯಂತ್ರಗಳು, ಜೆರಾಕ್ಸ್ ಯಂತ್ರ, ಬೆರಳಚ್ಚು ಯಂತ್ರಗಳು ಮತ್ತು ಇತರ ಕಛೇರಿ ಸಾಮಾಗ್ರಿಗಳ ಖರೀದಿ ವೆಚ್ಚ;
(ix) ಪ್ರಾಧಿಕಾರದ ದೂರವಾಣಿ, ವಿದ್ಯುತ್ ಮತ್ತು ನೀರಿನ ಬಿಲ್ಲುಗಳ ಪಾವತಿಗೆ ಸಂಬಂಧಿಸಿದ ವೆಚ್ಚಗಳು;
(x) ಪ್ರಾಧಿಕಾರದ ಸಿಬ್ಬಂದಿಯ ವೇತನ ಮತ್ತು ಭತ್ಯೆಗಳು ಹಾಗೂ ಇತರ ವೆಚ್ಚಗಳು;