ನಮೂನೆ - 3ಎ
(6ನೇ ನಿಯಮ)
ಕೈಗಾರಿಕೆ /ವಾಣಿಜ್ಯ/ ಮನರಂಜನೆ ಅಥವಾ ಇತರೆ ಬಳಕೆಗಾಗಿ ಬಾವಿ/ಕೊಳವೆಬಾವಿ ತೋಡುವುದಕ್ಕಾಗಿ/ ಕೊರೆಯುವುದಕ್ಕಾಗಿ ಅನುಮತಿ
ಕು/ ಶ್ರೀ/ ಶ್ರೀಮತಿ/ ........ ವಿಳಾಸ ........ ........ ಇವರಿಗೆ ........ ತಾಲ್ಲೂಕು ........ ಗ್ರಾಮ/ಪಟ್ಟಣದಲ್ಲಿ ........ ಸರ್ವೆ ನಂ/ ಪ್ಲಾಟ್ನಂ ನಲ್ಲಿ ಈ ಮುಂದಿನ ಷರತ್ತುಗಳಿಗೊಳಪಟ್ಟು ಕೈಗಾರಿಕೆ /ವಾಣಿಜ್ಯ/ ಮನರಂಜನೆ ಅಥವಾ ಇತರೆ ನೀರಿನ ಬಳಕೆಗಾಗಿ ನೀರನ್ನು ಪಡೆಯುವುದಕ್ಕಾಗಿ ........ ಮೀಟರ್ ಆಳದವರೆಗೆ ಬಾವಿ/ ಕೊಳವೆ ಬಾವಿಯನ್ನು ತೋಡುವುದಕ್ಕಾಗಿ/ ಕೊರೆಯುವುದಕ್ಕಾಗಿ ಅನುಮತಿ ನೀಡಲಾಗಿದೆ.
-
ಬಾವಿ/ಕೊಳವೆಬಾವಿಯನ್ನು ಯಾವ ಉದ್ದೇಶಕ್ಕಾಗಿ ಕೋರಲಾಗಿದೆಯೋ ಅದನ್ನು ಹೊರತು ಪಡಿಸಿ ಯಾವುದೇ ಉಪಯೋಗಕ್ಕಾಗಿ ನೀರನ್ನು ಪಡೆಯಲು ಅವುಗಳನ್ನು ಬಳಸತಕ್ಕದ್ದಲ್ಲ.
-
ನೀರು ವ್ಯರ್ಥವಾಗುವುದನ್ನು ತಪ್ಪಿಸಲು ನೀರು ತೆಗೆಯುವುದನ್ನು ಉತ್ತಮವಾಗಿ ನಿರ್ವಹಿಸತಕ್ಕದ್ದು.
-
ಬಳಸಿದ ನೀರನ್ನು ಪುನ: ಶುದ್ಧೀಕರಿಸತಕ್ಕದ್ದು.ಮತ್ತು ಅಗತ್ಯ ಶುದ್ಧೀಕರಣದ ನಂತರ ಮರು ಬಳಕೆ ಮಾಡತಕ್ಕದ್ದು.
-
ಬಾವಿಯ ಹತ್ತಿರದಲ್ಲಿ ಮಳೆ ನೀರು ಸಂಗ್ರಹಣೆಗಾಗಿ ನಿರ್ಮಿತಿಗಳನ್ನು (ಲಗತ್ತಿಸಿದ ತಾಂತ್ರಿಕ ಅಭಿಪ್ರಾಯಗಳ ಪ್ರಕಾರ) ನಿರ್ಮಾಣ ಮಾಡತಕ್ಕದ್ದು.
-
ಬಾವಿ/ಕೊಳವೆಬಾವಿಯಿಂದ ನೀರನ್ನು ಹೊರತೆಗೆಯುವ ಆಧಾರ ಮೇಲೆ ನೀರಿನ ಬಳಕೆಯು ಕಾಲಕಾಲಕ್ಕೆ ಜಾರಿಗೊಳಿಸಬಹುದಾದ ವಿನಿಯಮನಕ್ಕೆ ಒಳಪಟ್ಟಿರುತ್ತದೆ.
-
ಅಂತರ್ಜಲ ಸಂಪನ್ಮೂಲದ ಮಾಲಿನ್ಯವನ್ನು ತಡೆಗಟ್ಟತಕ್ಕದ್ದು.
-
ಜಲಮಾಪಕ ಅಳವಡಿಸಿಕೊಳ್ಳಬೇಕು ಮತ್ತು ಅಂತರ್ಜಲ ಹೊರತೆಗೆದ ಮೇಲೆ ದತ್ತಾಂಶವನ್ನು ನಿರ್ವಹಿಸಬೇಕು ಮತ್ತು ಅದನ್ನು ಪ್ರತಿ ತಿಂಗಳು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
ಸ್ಥಳ:
ದಿನಾಂಕ:
ನಿಯೋಜಿತ ಅಧಿಕಾರಿಯ ಸಹಿ
ಕರ್ನಾಟಕ ಅಂತರ್ಜಲ ಪ್ರಾಧಿಕಾರ
(ಮೊಹರೊಂದಿಗೆ)