ನಮೂನೆ - 11
(16ನೇ ನಿಯಮ)
ಪ್ರಗತಿ ವರದಿ
| ಕ್ರ. ಸಂ. | ಕಾರ್ಯಕ್ರಮದ ವಿವರಗಳು | ಭೌತಿಕ ಗುರಿ | ಆರ್ಥಿಕ ಗುರಿ | ಭೌತಿಕ ಸಾಧನೆ | ಆರ್ಥಿಕ ಸಾಧನೆ | ಷರಾಗಳು |
| 1. | ||||||
| 2. | ||||||
| 3. | ||||||
| 4. |
ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ: ಕರ್ನಾಟಕ ಅಂತರ್ಜಲ ಪ್ರಾಧಿಕಾರ ರಚನೆ ಕುರಿತು.
ಓದಲಾಗಿದೆ: ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಯಮನ ಹಾಗೂ ನಿಯಂತ್ರಣ) ವಿಧೇಯಕ 2011, ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆ ದಿನಾಂಕ: 07.04.2011.
ಪ್ರಸ್ತಾವನೆ:
ಅಂತರ್ಜಲವನ್ನು ವಿವೇಚನಾರಹಿತವಾಗಿ ಬಳಸುತ್ತಿರುವುದರಿಂದ ಅಂತರ್ಜಲದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿರುವುದನ್ನು ಹಾಗೂ ಅಂತರ್ಜಲ ಅತಿಬಳಕೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು, ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಯಮನ ಹಾಗೂ ನಿಯಂತ್ರಣ) ವಿಧೇಯಕ 2011ನ್ನು ಜಾರಿಗೆ ತರಲಾಗಿದೆ. ಮೇಲೆ ಓದಲಾದ ಅಧಿನಿಯಮದ ಅಧ್ಯಾಯ - 2 ರ ನಿಯಮ-3(1)ರಲ್ಲಿ ಅಂತರ್ಜಲ ಪ್ರಾಧಿಕಾರ ರಚನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ವಿಧೇಯಕವನ್ನು ಅನುಷ್ಠಾನಗೊಳಿಸಿ ಕಾರ್ಯನಿರ್ವಹಿಸಲು ಅನುವಾಗುವಂತೆ ಪ್ರಾಧಿಕಾರವನ್ನು ರಚಿಸಲು ಪರಿಶೀಲಿಸಿದೆ.
ಮೇಲಿನ ಅಂಶಗಳ ಹಿನ್ನಲೆಯಲ್ಲಿ ಸರ್ಕಾರವು ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ: ಸನೀಇ 13 ಅಜಅ 2011, ಬೆಂಗಳೂರು, ದಿನಾಂಕ: 16ನೇ ಮಾರ್ಚ್ 2012.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಯಮನ ಹಾಗೂ ನಿಯಂತ್ರಣ) ವಿಧೇಯಕ 2011ರ ಅಡಿಯಲ್ಲಿ ಅಂತರ್ಜಲ ಪ್ರಾಧಿಕಾರ ರಚನೆಯ ಕುರಿತು ಇಡೀ ಕರ್ನಾಟಕ ರಾಜ್ಯಕ್ಕೆ ಏಕರೂಪದ ನಿಯಮಗಳನ್ನು ಅನುಷ್ಠಾನಗೊಳಿಸಲು ಬೆಂಗಳೂರನ್ನು ಕೇಂದ್ರ ಕಛೇರಿಯನ್ನಾಗಿರಿಸಿ, ಕರ್ನಾಟಕ ಅಂತರ್ಜಲ ಪ್ರಾಧಿಕಾರವನ್ನು ಈ ಕೆಳಕಂಡ ಸದಸ್ಯರನ್ನೊಳಗೊಂಡಂತೆ ರಚಿಸಲಾಗಿದೆ.
-
ಸರ್ಕಾರದ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ, (ಸಣ್ಣ ನೀರಾವರಿ) – ಅಧ್ಯಕ್ಷರು
-
ಗಣಿ ಮತ್ತು ಭೂವಿಜ್ಞಾನ ಇಲಾಖೆ ಆಯುಕ್ತರು ಅಥವಾ ನಿರ್ದೇಶಕರು, -ಸದಸ್ಯ ಕಾರ್ಯದರ್ಶಿ
-
ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಒಬ್ಬರು ಪ್ರತಿನಿಧಿ.
-
ಪ್ರಾದೇಶಿಕ ನಿರ್ದೇಶಕರು, ಕೇಂದ್ರಿಯ ಅಂತರ್ಜಲ ಮಂಡಳ, ಭಾರತ ಸರ್ಕಾರ.
-
ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯುಳ್ಳ ವಿದ್ಯುತ್ ಸರಬರಾಜು ಕಂಪನಿಯ ಚೀಫ್ ಇಂಜನಿಯರ್ ದರ್ಜೆಗಿಂತ ಕಡಿಮೆಯಲ್ಲದ ಒಬ್ಬ ಪ್ರತಿನಿಧಿ.
-
ಚೀಫ್ ಇಂಜನಿಯರ್, ಆರ್.ಡಿ.ಇ.ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.
-
ಇಂಜಿನಿಯರ್ ಇನ್ ಚೀಫ್, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಆನಂದರಾವ್ ವೃತ್ತ, ಬೆಂಗಳೂರು.
-
ರಾಜ್ಯ ಸರ್ಕಾರವು ಸಾಮ ನಿರ್ದೇಶಿಸುವ ಚೀಫ್ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ.
-
ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳ.
-
ಕೃಷಿ ಆಯುಕ್ತರು / ನಿರ್ದೇಶಕರು, ಕೃಷಿ ಇಲಾಖೆ.
-
ಮುಖ್ಯ ಮಹಾ ಪ್ರಬಂಧಕರು, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಬೆಂಗಳೂರು.
-
ಸರ್ಕಾರದಿಂದ ನಾಮ ನಿರ್ದೇಶಿಸುವ 4 ಜನ ರೈತ ಪ್ರತಿನಿಧಿಗಳು – ತದನಂತರ ನಾಮ ನಿರ್ದೇಶಿಸಲು ಕ್ರಮ ಕೈಗೊಳ್ಳಲಾಗುವುದು.
-
ಚೀಫ್ ಇಂಜನಿಯರ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಅಭಿವೃದ್ಧಿ ಮಂಡಳ.
-
ಚೀಫ್ ಇಂಜನಿಯರ್, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳ.
-
ಸರ್ಕಾರದಿಂದ ನಾಮನಿರ್ದೇಶಿಸುವ ಇಬ್ಬರು ಅಂತರ್ಜಲ ವಿಷಯಗಳಲ್ಲಿ ಪರಿಣಿತಿ ಹೊಂದಿರುವವರು / ಪ್ರಾಯೋಗಿಕ ಅನುಭವ ಹೊಂದಿರುವವರು – ತದನಂತರ ನಾಮ ನಿರ್ದೇಶಿಸಲು ಕ್ರಮ ಕೈಗೊಳ್ಳಲಾಗುವುದು.