(1) ಈ ನಿಯಮಗಳನ್ನು ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಮತ್ತು ನಿಯಂತ್ರಣ) ನಿಯಮಗಳು, 2012 ಎಂದು ಕರೆಯತಕ್ಕದ್ದು.
(2) ಅವು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಮತ್ತು ನಿಯಂತ್ರಣ) ನಿಯಮಗಳು, 2012, Water Resources Department
2012 · PDF page 1
Hover any section to copy its link or text, ask Copilot about it, or bookmark it.
(1) ಈ ನಿಯಮಗಳಲ್ಲಿ ಅನ್ಯಥಾ ಅಗತ್ಯಪಡಿಸಿದ ಹೊರತು;
(ಎ) “ಅಧಿನಿಯಮ” ಎಂದರೆ, ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಮತ್ತು ನಿಯಂತ್ರಣ) ಅಧಿನಿಯಮ, 2011 (2011 ರ ಕರ್ನಾಟಕ ಅಧಿನಿಯಮ ಸಂಖ್ಯೆ 25)
(ಬಿ) "ನಮೂನೆ" ಎಂದರೆ ಈ ನಿಯಮಗಳಿಗೆ ಅನುಬಂಧಿಸಲಾದ ನಮೂನೆ;
(ಸಿ) "ಅನುಸೂಚಿ" ಎಂದರೆ ಈ ನಿಯಮಗಳಿಗೆ ಅನುಬಂಧಿಸಲಾದ ಅನುಸೂಚಿ.
(2) ಈ ನಿಯಮಗಳಲ್ಲಿ ಬಳಸಿರುವ ಆದರೆ ಪರಿಭಾಷಿಸಿರದ ಪದಗಳು ಮತ್ತು ಪದಾವಳಿಗಳು ಅಧಿನಿಯಮದಲ್ಲಿ ಅವುಗಳಿಗೆ ಕೊಟ್ಟಿರುವ ಅದೇ ಅರ್ಥವನ್ನು ಹೊಂದಿರತಕ್ಕದ್ದು.
5ನೇ ಪ್ರಕರಣದ ಅಡಿಯಲ್ಲಿ ಅಧಿಕಾರೇತರ ಸದಸ್ಯರ ಮರು ನೇಮಕಾತಿಗಾಗಿ ಷರತ್ತುಗಳು ಈ ಮುಂದಿನಂತಿರತಕ್ಕದ್ದು:-
(1) ಅವರನ್ನು ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ನೇಮಕ ಮಾಡಿರುವುದನ್ನು 4ನೇ ಪ್ರಕರಣದ ಅಡಿಯಲ್ಲಿ ಅನರ್ಹಗೊಳಿಸತಕ್ಕದ್ದಲ್ಲ.
(2) ಅವರನ್ನು 6ನೇ ಪ್ರಕರಣದ ಅಡಿಯಲ್ಲಿ ಸದಸ್ಯನನ್ನು ತೆಗೆದುಹಾಕುವುದಕ್ಕಾಗಿ ಯಾವುದೇ ಷರತ್ತುಗಳಿಗೆ ಒಳಪಡಿಸತಕ್ಕದ್ದಲ್ಲ. 4. 5(3)ನೇ ಪ್ರಕರಣದ ಅಡಿಯಲ್ಲಿ ಸರ್ಕಾರೇತರ ಸದಸ್ಯರಿಗೆ ಭತ್ಯೆಗಳು:- ಸರ್ಕಾರದಿಂದ ನಾಮ ನಿರ್ದೇಶಿತನಾದ ಅಧಿಕಾರೇತರ ಸದಸ್ಯನು ಪ್ರತಿ ದಿನ 1000/- ರೂಪಾಯಿಗಳ ಸಭಾಭತ್ಯೆಗೆ ಅರ್ಹನಾಗಿರತಕ್ಕದ್ದು ಮತ್ತು ಪ್ರಯಾಣದ ಉದ್ದೇಶಕ್ಕಾಗಿ ಪ್ರಥಮ ದರ್ಜೆ ರೈಲು ದರಕ್ಕೆ ಹಕ್ಕುಳ್ಳವನಾಗಿರತಕ್ಕದ್ದು.
(1) ಅಧಿಸೂಚಿತ ಪ್ರದೇಶದಲ್ಲಿ ಪ್ರಸ್ತುತ ಅಂತರ್ಜಲ ಬಳಕೆದಾರರ ನೋಂದಣಿಗಾಗಿ ಅರ್ಜಿಯನ್ನು ಕುಡಿಯುವ ಮತ್ತು ಕೃಷಿ ಉದ್ದೇಶಕ್ಕಾಗಿ ಐವತ್ತು ರೂಪಾಯಿಯ ಶುಲ್ಕದೊಂದಿಗೆ ನಮೂನೆ-4 ರಲ್ಲಿ ಸಲ್ಲಿಸತಕ್ಕದ್ದು. ಕೈಗಾರಿಕೆ, ವಾಣಿಜ್ಯ, ಮನೋರಂಜನೆ ಅಥವಾ ಇತರ ಉದ್ದೇಶಕ್ಕಾಗಿ ಐದು ನೂರು ರೂಪಾಯಿಗಳ ಶುಲ್ಕವನ್ನು ಸಲ್ಲಿಸತಕ್ಕದ್ದು.
(2) ಪ್ರಸ್ತುತ ಅಂತರ್ಜಲ ಬಳಕೆದಾರನ ನೋಂದಣಿ ಪ್ರಮಾಣಪತ್ರವು ನಮೂನೆ-5ಎ ನಲ್ಲಿರತಕ್ಕದ್ದು.
(3) ನಿರಾಕರಣೆಯ ಆದೇಶವು ನಮೂನೆ - 5 ಬಿ ನಲ್ಲಿರತಕ್ಕದ್ದು.
(1) ಕುಡಿಯುವ ನೀರಿನ ಮತ್ತು ಕೃಷಿ ಉದ್ದೇಶಕ್ಕಾಗಿ ಅಧಿಸೂಚಿತ ಪ್ರದೇಶದಲ್ಲಿ ಬಾವಿ/ಕೊಳವೆಬಾವಿ ತೋಡುವುದಕ್ಕೆ/ ಕೊರೆಯುವುದಕ್ಕೆ ಮತ್ತು ಅಂತರ್ಜಲ ತೆಗೆಯಲು ಮತ್ತು ಬಳಸಲು ಪರ್ಮಿಟ್ ಮಂಜೂರಾತಿಗಾಗಿ ಅರ್ಜಿಯನ್ನು ನಮೂನೆ-1ಎ ನಲ್ಲಿ ಐವತ್ತು ರೂಪಾಯಿಗಳ ಶುಲ್ಕದ ಜೊತೆಯಲ್ಲಿ (ಅಧಿನಿಯಮದ ಪ್ರಕರಣ 11ರ ಉಪ-ಪ್ರಕರಣ 2) ಮತ್ತು
(i) ಕೃಷಿ ಭೂಮಿಗೆ ಸಂಬಂಧವಾಗಿ, ಅಂಥ ಕೃಷಿ ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಹಕ್ಕು ದಾಖಲೆಯ ಉದ್ಧೃತ ಭಾಗಗಳು (ಕರ್ನಾಟಕ ಭೂ ದಾಖಲೆಯ ಅಧಿನಿಯಮ 1964 ರಂತೆ)
(ii) ಗೃಹ ಬಳಕೆದಾರರ ಸಂಬಂಧವಾಗಿ, ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಿಂದ ನೀಡಿದ ಅಂಥ ಆಸ್ತಿಯ ಖಾತಾ ಪ್ರಮಾಣ ಪತ್ರ ಮತ್ತು ಸರ್ವೆ ನಂಬರ್, ವಿಳಾಸ ದಾಖಲೆ, ಸಂದರ್ಭಾನುಸಾರ ಸಂಬಂಧಪಟ್ಟ ಪುರಸಭಾ ನಿಗಮ, ಪಟ್ಟಣ ಪಂಚಾಯಿತಿ ಅಥವಾ ಗ್ರಾಮ ಪಂಚಾಯಿತಿಯಲ್ಲಿ ತೆರಿಗೆ ಪಾವತಿ ಮಾಡಿದ ರಶೀತಿಗಳು ಅಥವಾ ಕರ್ನಾಟಕ ಭೂ ದಾಖಲೆಯ ಅಧಿನಿಯಮ 1964 ರಂತೆ ಹಕ್ಕು ದಾಖಲೆಯ ಉದ್ಧೃತ ಭಾಗಗಳು, ಸೇರಿದಂತೆ ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು.
(2) ಕೈಗಾರಿಕಾ, ವಾಣಿಜ್ಯ ಅಥವಾ ಮನರಂಜನೆ ಉದ್ದೇಶಕ್ಕಾಗಿ ಅಧಿಸೂಚಿತ ಪ್ರದೇಶದಲ್ಲಿ ಬಾವಿ/ಕೊಳವೆಬಾವಿ ತೋಡುವುದಕ್ಕೆ ಅಥವಾ ಕೊರೆಯುವುದಕ್ಕೆ ಮತ್ತು ಅಂತರ್ಜಲ ಹೊರ ತೆಗೆಯಲು ಮತ್ತು ಬಳಸುವುದಕ್ಕೆ ಪರ್ಮಿಟ್ಗಾಗಿ ಅರ್ಜಿಯನ್ನು ಐದು ನೂರು ರೂಪಾಯಿಗಳ ಶುಲ್ಕದೊಂದಿಗೆ (ಅಧಿನಿಯಮದ ಪ್ರಕರಣ 11ರ ಉಪ-ಪ್ರಕರಣ 2) ನಮೂನೆ -1ಬಿ ನಲ್ಲಿ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು ಮತ್ತು ಅಂಥ ಕೈಗಾರಿಕಾ, ವಾಣಿಜ್ಯ, ಮನರಂಜನೆ ಸಂಸ್ಥೆಯ ಮಾಲಿಕತ್ವದ ಸಂಬಂಧವಾಗಿ ಸಕ್ಷಮ ಪ್ರಾಧಿಕಾರದಿಂದ ಮಂಜೂರು ಮಾಡಿದ ದಾಖಲೆಗಳನ್ನು ಜೊತೆಯಲ್ಲಿ ಲಗತ್ತಿಸತಕ್ಕದ್ದು.
(3) ಬಾವಿ/ಕೊಳವೆಬಾವಿ ತೋಡುವುದಕ್ಕೆ ಅಥವಾ ಕೊರೆಯುವುದಕ್ಕೆ ಮತ್ತು ಕೃಷಿ ಅಥವಾ ಕುಡಿಯುವ ನೀರಿನ ಉದ್ದೇಶಕ್ಕಾಗಿ ಅಂತರ್ಜಲ ತೆಗೆಯಲು ಮತ್ತು ಬಳಸಲು ಅನುಮತಿಗಾಗಿ ಅರ್ಜಿಯು ನಮೂನೆ-2ಎ ನಲ್ಲಿ ಇರತಕ್ಕದ್ದು ಮತ್ತು ನಿರಾಕರಣೆಯ ಆದೇಶವು ನಮೂನೆ-2ಬಿ ನಲ್ಲಿ ಇರತಕ್ಕದ್ದು. ಬಾವಿಗಳನ್ನು ತೋಡುವುದಕ್ಕೆ ಅಥವಾ ಕೊರೆಯುವುದಕ್ಕೆ ಮತ್ತು ಕೈಗಾರಿಕೆ ಮತ್ತು ಇತರ ಬಳಕೆಗಾಗಿ ಅರ್ಜಿಯು ನಮೂನೆ-3ಎ ನಲ್ಲಿ ಇರತಕ್ಕದ್ದು ಮತ್ತು ನಿರಾಕರಣೆಯ ಆದೇಶವು ನಮೂನೆ-3ಬಿ ನಲ್ಲಿ ಇರತಕ್ಕದ್ದು.
(1) 10 ನೇ ಪ್ರಕರಣದ (3)ನೇ ಉಪ-ಪ್ರಕರಣದ ಅಡಿಯಲ್ಲಿ ಯಾವುದೇ ಪ್ರದೇಶವನ್ನು ಅಧಿಸೂಚಿತ ಪ್ರದೇಶ ಎಂಬುದಾಗಿ ಘೋಷಿಸಿದ ಅಧಿಸೂಚನೆಯನ್ನು ಸಂದರ್ಭಾನುಸಾರ ಜಿಲ್ಲಾಮಟ್ಟದಲ್ಲಿ ಹಿರಿಯ ಭೂವಿಜ್ಞಾನಿ ಅಥವಾ ಉಪನಿರ್ದೇಶಕರ ಕಛೇರಿ ಸೂಚನಾಫಲಕದಲ್ಲಿ ಮತ್ತು ಸಂಬಂಧಪಟ್ಟ ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತಿಯ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸತಕ್ಕದ್ದು.
(2) 10ನೇ ಪ್ರಕರಣದ 5ನೇ ಉಪ-ಪ್ರಕರಣದಡಿ ಅಧಿಸೂಚಿತ ಪ್ರದೇಶವನ್ನು ಅಧಿಸೂಚನೆಯಿಂದ ತೆಗೆದು ಹಾಕುವುದಕ್ಕಾಗಿನ ಕಾರ್ಯ ವಿಧಾನವು ಈ ಮುಂದಿನಂತಿರಕ್ಕದ್ದು, ಎಂದರೆ:-
(i) ನಿರ್ದೇಶಕರು ಅಧಿಸೂಚಿತ ಪ್ರದೇಶದಲ್ಲಿನ ಅಂತರ್ಜಲ ಮಟ್ಟದ ಏರಿಳಿತದ ಮತ್ತು 10 ನೇ ಪ್ರಕರಣದ (3) ನೇ ಉಪ-ಪ್ರಕರಣದ ಅಡಿಯಲ್ಲಿ ಘೋಷಿಸಲಾದ ಅಂಥ ಅಧಿಸೂಚಿತ ಪ್ರದೇಶದಲ್ಲಿನ ಅಂತರ್ಜಲ ಲಭ್ಯತೆಯ ಬಗ್ಗೆ ಹಿರಿಯ ಭೂವಿಜ್ಞಾನಿ ಅಥವಾ ಉಪ ನಿರ್ದೇಶಕರಿಂದ ಪ್ರತಿ ತಿಂಗಳು ವರದಿಯನ್ನು ಪಡೆಯತಕ್ಕದ್ದು.
(ii) ನಿರ್ದೇಶಕರು ಅಧಿಸೂಚಿತ ಪ್ರದೇಶದಲ್ಲಿನ ಪ್ರತಿ ತಿಂಗಳು ಹಿರಿಯ ಭೂವಿಜ್ಞಾನಿ ಅಥವಾ ಉಪ ನಿರ್ದೇಶಕರು ಕಳುಹಿಸಿದ ವರದಿಯನ್ನು ಪರಿಶೀಲಿಸತಕ್ಕದ್ದು ಮತ್ತು ಅವರು ಅಂಥ ಅಧಿಸೂಚಿತ ಪ್ರದೇಶದಲ್ಲಿ ಅಂತರ್ಜಲದ ಲಭ್ಯತೆಯು ಸುಧಾರಣೆಯಾಗಿದೆ ಎಂದು ಅಭಿಪ್ರಾಯ ಪಟ್ಟರೆ ಪ್ರಕರಣ 10ರ ಉಪ-ಪ್ರಕರಣ 2ರಂತೆ ಅಧಿಸೂಚನೆಯಿಂದ ತೆಗೆದುಹಾಕುವ ಬಗ್ಗೆ ವಿವಿಧ ತಜ್ಞ ಸಂಸ್ಥೆಗಳೊಂದಿಗೆ ಸಮಾಲೋಚಿಸತಕ್ಕದ್ದು.
(iii) ನಿರ್ದೇಶಕರು ವಿವಿಧ ತಜ್ಞ ಸಂಸ್ಥೆಗಳೊಂದಿಗೆ ಸಮಾಲೋಚಿಸಿದ ತರುವಾಯ ಅಧಿಸೂಚಿತ ಪ್ರದೇಶವನ್ನು ಅಧಿಸೂಚನೆಯಿಂದ ತೆಗೆದು ಹಾಕುವುದಕ್ಕೆ ಸಂಬಂಧಿಸಿದ ಶಿಫಾರಸ್ಸುಗಳ ಜೊತೆಯಲ್ಲಿ ಪ್ರಸ್ತಾವನೆಯನ್ನು ಪ್ರಾಧಿಕಾರಕ್ಕೆ ಕಳುಹಿಸುವುದು.
(iv) ಪ್ರಾಧಿಕಾರವು, ಅಧಿಸೂಚಿತ ಪ್ರದೇಶವನ್ನು ಅಧಿಸೂಚನೆಯಿಂದ ತೆಗೆದುಹಾಕುವ ಪ್ರಸ್ತಾವನೆಯನ್ನು ಮತ್ತು ನಿರ್ದೇಶಕರು ಇವರ ಶಿಫಾರಸ್ಸನ್ನು ಪರಿಗಣಿಸಿ, ಅಧಿಸೂಚಿತ ಪ್ರದೇಶವನ್ನು ಅಧಿಸೂಚನೆಯಿಂದ ತೆಗೆದುಹಾಕುವ ಆದೇಶ ಹೊರಡಿಸಲು ತನ್ನ ನಿರ್ದಿಷ್ಟ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವುದು.
(1) ಅಂತರ್ಜಲವನ್ನು ಹೊರ ತೆಗೆಯುವುದಕ್ಕಾಗಿ ಬಾವಿಯನ್ನು ತೋಡುವ ಅಥವಾ ಕೊಳವೆ ಬಾವಿಗಳನ್ನು ಕೊರೆಯುವ ವ್ಯವಹಾರವನ್ನು ನಡೆಸಲು ಇಚ್ಛಿಸಿರುವ ವ್ಯಕ್ತಿಗಳು 13(3)ನೇ ಪ್ರಕರಣದ ಅಡಿಯಲ್ಲಿ ಕೊರೆಯುವ ಏಜೆನ್ಸಿಯ ನೋಂದಣಿ ಶುಲ್ಕ ಪ್ರತಿ ಕೊರೆಯುವ ರಿಗ್ಗೆ ಐದು ಸಾವಿರ ರೂಪಾಯಿನೊಂದಿಗೆ ಈ ಮುಂದಿನ ಷರತ್ತುಗಳಿಗೊಳಪಟ್ಟು ನಮೂನೆ-6 ರಲ್ಲಿ ಅರ್ಜಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು:-
(i) ಅವನು ಕನಿಷ್ಠ 900/200 ಪಿಎಸ್ಐ ಸಾಮರ್ಥ್ಯದ ಕೊರೆಯುವ ರಿಗ್ನ ಕಂಪ್ರೆಸ್ಸರ್ನ್ನು ಹೊಂದಿರತಕ್ಕದ್ದು;
(ii) ಅವನು ಕನಿಷ್ಠ 152 ಎಂಎಂ ವ್ಯಾಸದ ಕೊಳವೆಬಾವಿ ಕೊರೆಯುವ ಯಂತ್ರವನ್ನು ಹೊಂದಿರತಕ್ಕದ್ದು;
(iii) ಅವನು ಗಟ್ಟಿ ಬಂಡೆ ಇರುವ ಭೂ ಪ್ರದೇಶದಲ್ಲಿ ಅಂತರ್ಜಲ ತೆಗೆಯಲು ಬಾವಿ/ಕೊಳವೆಬಾವಿ ತೋಡುವ ಅಥವಾ ಕೊರೆಯುವ ಬಗ್ಗೆ ಕನಿಷ್ಠ ಮೂರು ವರ್ಷಗಳ ಅನುಭವವಿದ್ದು ಕನಿಷ್ಠ ಮೆಕಾನಿಕಲ್ ಇಂಜಿನಿಯರ್ನಲ್ಲಿ ಡಿಪ್ಲೊಮೊ ವಿದ್ಯಾರ್ಹತೆಯನ್ನು ಹೊಂದಿರುವಂಥ ಕೊರೆಯುವ ಕೆಲಸಗಾರನನ್ನು (ಡ್ರಿಲ್ಲರ್) ನೇಮಕ ಮಾಡಿಕೊಳ್ಳತಕ್ಕದ್ದು.
(2) ಪ್ರಾಧಿಕಾರವು 8(1)ನೇ ನಿಯಮದ ಅಡಿಯಲ್ಲಿ ನಿರ್ದಿಷ್ಟಪಡಿಸಲಾದ ಷರತ್ತುಗಳನ್ನು ಮನವರಿಕೆ ಮಾಡಿಕೊಂಡ ತರುವಾಯ ಪ್ರತಿಯೊಂದು ಕೊರೆಯುವ ಘಟಕವನ್ನು ನೋಂದಣಿ ಮಾಡಬಹುದು ಮತ್ತು ಎರಡು ವರ್ಷಗಳ ಅವಧಿಗೆ ನಮೂನೆ-7ಎ ನಲ್ಲಿ ನೋಂದಣಿ ಪ್ರಮಾಣಪತ್ರವನ್ನು ನೀಡಬಹುದು ಮತ್ತು ಅವರಿಗೆ ಮನವರಿಕೆಯಾಗದಿರುವ ಸಂದರ್ಭದಲ್ಲಿ ಅವರು ಸೂಕ್ತ ಕಾರಣಗಳೊಂದಿಗೆ ನಿರಾಕರಣೆಯ ಆದೇಶವನ್ನು ನಮೂನೆ -7ಬಿ ನಲ್ಲಿ ನೀಡಬಹುದು.
(3) ಪ್ರತಿಯೊಂದು ಕೊರೆಯುವ ಏಜೆನ್ಸಿಯು ನೋಂದಣಿ ಪ್ರಮಾಣ ಪತ್ರದಲ್ಲಿ ನಿರ್ದಿಷ್ಟ ಪಡಿಸಲಾದ ಷರತ್ತುಗಳನ್ನು ಪಾಲಿಸತಕ್ಕದ್ದು.
ಪ್ರಾಧಿಕಾರದ ಲಿಖಿತ ಸೂಚನೆಗಳ ಪ್ರಕಾರ ಬಾವಿ ಕೊರೆಯುವ ಉಸ್ತುವಾರಿ ಹೊಂದಿರುವ ಪ್ರತಿಯೊಬ್ಬನು ಬಾವಿಯ ಪ್ರತಿ 50 ಮೀಟರ್ಗಳ ಅಂತರದ ಆಳದಲ್ಲಿನ ಮಣ್ಣು ಮತ್ತು ಶಿಲೆಯ ಮಾದರಿಗಳನ್ನು ಹಾಗೂ ಬಾವಿಯ ನಿರ್ಮಾಣ ಪೂರ್ಣಗೊಂಡ ತರುವಾಯ ಅಂತರ್ಜಲ ಮಾದರಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳತಕ್ಕದ್ದು. ಅಂಥ ಮಣ್ಣು ಮತ್ತು ಬಂಡೆಯ ಮಾದರಿಗಳನ್ನು ಬಿಸಿಲಿನಲ್ಲಿ ಒಣಗಿಸತಕ್ಕದ್ದು ಮತ್ತು ಅರ್ಧ ಕಿಲೋಗ್ರಾಂ ಸಾಮರ್ಥ್ಯದ ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿದ ಮಾದರಿಯ ಆಳವನ್ನು ಅವುಗಳ ಮೇಲೆ ಸೂಚಿಸಿ ಸಂಗ್ರಹಿಸತಕ್ಕದ್ದು. ಸಂಗ್ರಹಿಸಲ್ಪಟ್ಟ ಮಾದರಿಗಳನ್ನು ವಿವರಗಳೊಂದಿಗೆ ಮೂರು ದಿನಗಳೊಳಗೆ ಪ್ರಾಧಿಕಾರಕ್ಕೆ ನೀಡತಕ್ಕದ್ದು ಅದನ್ನು ಬಾವಿ ನಿರ್ಮಾಣಗೊಂಡ ದಿನಾಂಕದಿಂದ ಮೂರು ತಿಂಗಳವರೆಗೆ ಸಂರಕ್ಷಿಸತಕ್ಕದ್ದು. ಅಂತರ್ಜಲ ಮಾದರಿಗಳನ್ನು ಒಂದು ಲೀಟರ್ ಪ್ಲಾಸ್ಟಿಕ್ ಬಾಟಲ್ನಲ್ಲಿ (ಕಂಟೈನರ್) ಗಾಳಿ ಹೋಗದಂತೆ ಸಂಗ್ರಹಿಸತಕ್ಕದ್ದು ಮತ್ತು ಬಾವಿ ನಿರ್ಮಾಣದ ದಿನಾಂಕದಿಂದ ಮೂರು ತಿಂಗಳವರೆಗೆ ನೇರವಾಗಿ ಸೂರ್ಯನ ಬೆಳಕು ಬೀಳದಂತೆ ಸಂರಕ್ಷಿಸತಕ್ಕದ್ದು. ಯಾವ ಆಳದಿಂದ ಮಾದರಿಯನ್ನು ಯಾರಿಂದ ಸಂಗ್ರಹಿಸಲಾಗಿತ್ತೋ ಆ ವಿವರಗಳನ್ನು ಸಂಗ್ರಹಿಸಿದ ಚೀಲದ ಮೇಲೆ ದಾಖಲು ಮಾಡತಕ್ಕದ್ದು. ಈ ಮಾದರಿಗಳನ್ನು ಪ್ರಾಧಿಕಾರವು ಪರೀಕ್ಷಿಸತಕ್ಕದ್ದು.
(1) ಜಲ ಮಾಪಕ ಸಾಧನವನ್ನು ಅಳವಡಿಸಿಕೊಳ್ಳಬೇಕಾದ ಪ್ರತಿಯೊಬ್ಬ ಕೈಗಾರಿಕಾ ಅಥವಾ ವಾಣಿಜ್ಯ ಅಥವಾ ಇತರ ಅಂತರ್ಜಲ ಬಳಕೆದಾರನು ಅಂತರ್ಜಲ ಬಳಕೆಯ ಸಮರ್ಪಕ ನಿರ್ವಹಣೆಯ ಐಎಸ್ಐ (ISI) ನಿರ್ದಿಷ್ಟಪಡಿಸಿರುವ ಜಲ ಮಾಪಕ ಸಾಧನವನ್ನು ಅಳವಡಿಸತಕ್ಕದ್ದು ಮತ್ತು ಪ್ರತಿ ತಿಂಗಳು ಹೊರತೆಗೆದ ಒಟ್ಟು ಪ್ರಮಾಣದ ಅಂತರ್ಜಲದ ಮಾಹಿತಿಯನ್ನು ಜಿಲ್ಲಾ ಮಟ್ಟದ ಪ್ರಾಧಿಕಾರದ ನಿರ್ದಿಷ್ಟ ಅಧಿಕಾರಿಗೆ ಒದಗಿಸತಕ್ಕದ್ದು.
(2) ಪ್ರತಿಯೊಂದು ಕೊರೆಯುವ ಏಜೆನ್ಸಿಯು ಕೊರೆದ ಕೊಳವೆ ಬಾವಿಯ ಆಳದೊಂದಿಗೆ ಸ್ಥಳ, ದಿನಾಂಕ ಮತ್ತು ಕೊಳವೆ ಬಾವಿಗಳ ಸಂಖ್ಯೆ, ಪ್ರತಿಯೊಂದು ಕೊಳವೆ ಬಾವಿಯ ಕೇಸಿಂಗ್ ಮತ್ತು ಇಳುವರಿಯ ಮಾಹಿತಿಯನ್ನು ಪ್ರತಿ ತಿಂಗಳು ಸಂಬಂಧಪಟ್ಟ ಜಿಲ್ಲೆಯ ಪ್ರಾಧಿಕಾರದ ನಿರ್ದಿಷ್ಟ ಅಧಿಕಾರಿಗೆ ಒದಗಿಸತಕ್ಕದ್ದು.
ಪ್ರಾಧಿಕಾರದ ನಿಧಿಗಳನ್ನು ಈ ಮುಂದಿನ ಉದ್ದೇಶಗಳಿಗಾಗಿ ಬಳಸತಕ್ಕದ್ದು, ಎಂದರೆ:-
(i) ಪ್ರಾಧಿಕಾರದ ಸದಸ್ಯರ ಪ್ರಯಾಣ ವೆಚ್ಚ;
(ii) ಪ್ರಾಧಿಕಾರದ ಸರ್ಕಾರೇತರ ಸದಸ್ಯರಿಗೆ ಸಭಾ ಭತ್ಯೆ;
(iii) ಪ್ರಾಧಿಕಾರದ ಸಭೆಗಳಿಗೆ ಸಂಬಂಧಿಸಿದ ವೆಚ್ಚ;
(iv) ಪ್ರಾಧಿಕಾರಕ್ಕೆ ಬೇಕಾಗಿರುವ ಲೇಖನ ಸಾಮಾಗ್ರಿ;
(v) ಈ ಅಧಿನಿಯಮದ ಅಡಿಯಲ್ಲಿ ತನ್ನ ಅಧಿಕಾರಗಳನ್ನು ಚಲಾಯಿಸುವಲ್ಲಿ ಪ್ರಾಧಿಕಾರದಿಂದ ಭರಿಸಲಾದ ವೆಚ್ಚ;
(vi) ಪ್ರಾಧಿಕಾರದ ಕೆಲಸಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ಅಧ್ಯಯನಗಳಿಗಾಗಿ ಬೇಕಾದ ಉಪಕರಣಗಳ ಖರೀದಿ ಮತ್ತು ದುರಸ್ತಿ ವೆಚ್ಚ;
(vii) ಪ್ರಾಧಿಕಾರಕ್ಕೆ ಬೇಕಾಗಿರುವ ವಾಹನಗಳ ಖರೀದಿ ಮತ್ತು ಅಂಥ ವಾಹನಗಳ ಇಂಧನ ಮತ್ತು ದುರಸ್ತಿ ವೆಚ್ಚಗಳು;
(viii) ಪ್ರಾಧಿಕಾರಕ್ಕೆ ಬೇಕಾಗಿರುವ ಪೀಠೋಪಕರಣ, ಗಣಕಯಂತ್ರಗಳು, ಜೆರಾಕ್ಸ್ ಯಂತ್ರ, ಬೆರಳಚ್ಚು ಯಂತ್ರಗಳು ಮತ್ತು ಇತರ ಕಛೇರಿ ಸಾಮಾಗ್ರಿಗಳ ಖರೀದಿ ವೆಚ್ಚ;
(ix) ಪ್ರಾಧಿಕಾರದ ದೂರವಾಣಿ, ವಿದ್ಯುತ್ ಮತ್ತು ನೀರಿನ ಬಿಲ್ಲುಗಳ ಪಾವತಿಗೆ ಸಂಬಂಧಿಸಿದ ವೆಚ್ಚಗಳು;
(x) ಪ್ರಾಧಿಕಾರದ ಸಿಬ್ಬಂದಿಯ ವೇತನ ಮತ್ತು ಭತ್ಯೆಗಳು ಹಾಗೂ ಇತರ ವೆಚ್ಚಗಳು;
ಪ್ರಾಧಿಕಾರದ ನಿಧಿಯ ಲೆಕ್ಕ ಪತ್ರಗಳನ್ನು ಈ ಮುಂದಿನಂತೆ ನಿರ್ವಹಿಸತಕ್ಕದ್ದು, ಎಂದರೆ:–
(1) ಪ್ರಾಧಿಕಾರದ ನಿಧಿಯ ಲೆಕ್ಕ ಪತ್ರಗಳನ್ನು ಲೆಕ್ಕ ಪತ್ರಗಳ ಪ್ರಭಾರ ಹೊಂದಿದ ಪ್ರಾಧಿಕಾರದ ಲೆಕ್ಕ ಪತ್ರ ಅಧಿಕಾರಿಯು ನಿರ್ವಹಿಸುವುದು.
(2) ಪ್ರಾಧಿಕಾರದ ನಿಧಿಯ ಲೆಕ್ಕ ಪತ್ರಗಳನ್ನು ದ್ವಿನಮೂದು ಪದ್ಧತಿಯಲ್ಲಿ ನಿರ್ವಹಿಸುವುದು.
(3) ಆಂತರಿಕ ಲೆಕ್ಕ ಪರಿಶೋಧನೆಯನ್ನು ಲೆಕ್ಕಪತ್ರಗಳ ಶಾಖೆಯು ಮಾಡತಕ್ಕದ್ದು.
(4) ಕರ್ನಾಟಕ ಸರ್ಕಾರದ ಕರ್ನಾಟಕ ಆರ್ಥಿಕ ಸಂಹಿತೆಯು, ಕರ್ನಾಟಕ ಖಜಾನೆ ಸಂಹಿತೆಯಲ್ಲಿ ನಿರ್ದಿಷ್ಟಪಡಿಸಲಾದ ಲೆಕ್ಕ ಪತ್ರಗಳ ನಿರ್ವಹಣೆ, ಲೆಕ್ಕ ಪರಿಶೋಧನೆ ಮತ್ತು ಇತ್ಯರ್ಥಕ್ಕೆ ಸಂಬಂಧಿಸಿದಂತೆ ಎಲ್ಲಾ ನಿಯಮಗಳು ಮತ್ತು ವಿನಿಯಮನಗಳು, ಪ್ರಾಧಿಕಾರದ ಲೆಕ್ಕ ಪತ್ರಗಳು ಮತ್ತು ಲೆಕ್ಕ ಪರಿಶೋಧನೆಗೂ ಸಹ ಅನ್ವಯಿಸತಕ್ಕದ್ದು.
(5) ಲೋಕೋಪಯೋಗಿ ಇಲಾಖೆಯ ಎಸ್ ಆರ್ ದರಪಟ್ಟಿಗಳು ಯಥಾವತ್ ಪ್ರಾಧಿಕಾರದ ಟೆಂಡರ್ಗಳಿಗೂ ಅನ್ವಯವಾಗತಕ್ಕದ್ದು.
(6) ಲೋಕೋಪಯೋಗಿ ಇಲಾಖೆ ಸಂಹಿತೆಯ ಉಪಬಂಧಗಳು ಯಥಾವತ್ ಪ್ರಾಧಿಕಾರಕ್ಕೂ ಸಹ ಅನ್ವಯಿಸತಕ್ಕದ್ದು.
ಪ್ರಾಧಿಕಾರವು ಈ ಮುಂದಿನ ರೀತಿಯಲ್ಲಿ ವಾರ್ಷಿಕ ವರದಿಯನ್ನು ಸಿದ್ಧಪಡಿಸತಕ್ಕದ್ದು, ಎಂದರೆ:–
(1) ವರದಿ ಸಿದ್ಧಪಡಿಸುವ ಕಾರ್ಯಕ್ರಮಗಳ ಪಟ್ಟಿಯು (ಕ್ಯಾಲೆಂಡರ್ ಆಫ್ ಈವೆಂಟ್ಸ್) ಈ ಮುಂದಿನಂತಿದೆ:–
(i) ಏಪ್ರಿಲ್ 1ನೇ ತಾರೀಖಿನಿಂದ ಏಪ್ರಿಲ್ 15 ನೇ ತಾರೀಖಿನವರೆಗೆ, ವಿವಿಧ ಕಛೇರಿಗಳಿಂದ ನಮೂನೆ-11ರಲ್ಲಿ ಪ್ರಗತಿಯ ವರದಿಯನ್ನು ಸಂಗ್ರಹಿಸುವುದು.
(ii) ಏಪ್ರಿಲ್ 15ನೇ ತಾರೀಖಿನಿಂದ ಏಪ್ರಿಲ್ 30ನೇ ತಾರೀಖಿನವರೆಗೆ, ವಿವಿಧ ಕಛೇರಿಗಳಿಂದ ಬಂದ ಪ್ರಗತಿಯ ವರದಿಯನ್ನು ಹೊಂದಾಣಿಕೆ ಮಾಡುವುದು.
(iii) ಮೇ ಮೊದಲನೆಯ ವಾರದಲ್ಲಿ ಪ್ರಾಧಿಕಾರದ ಅನುಮೋದನೆಯ ತರುವಾಯ ವರದಿಯನ್ನು ಪ್ರಕಟಿಸುವುದು.
(2) ವರದಿಯು ಈ ಮುಂದಿನ ವಿವರಗಳನ್ನೊಳಗೊಂಡಿರತಕ್ಕದ್ದು:–
(i) ಆಡಳಿತಾತ್ಮಕ ವಿವರಗಳು ಮತ್ತು ವಾರ್ಷಿಕ ಗುರಿಗಳು;
(ii) ಕಾರ್ಯಕ್ರಮಗಳ ಸಾಧನೆ ವಿವರಗಳು;
(iii) ಜಮಾ ಖರ್ಚು ಪಟ್ಟಿಯೊಂದಿಗೆ ಹಣಕಾಸಿನ ವಿವರಗಳು;
(iv) ಮುಂಬರುವ ವರ್ಷದ ಯೋಜನಾ ವಿವರಗಳು ಮತ್ತು ಮುನ್ನೋಟ.
(3) ವರದಿಯು ಸಂಬಂಧಪಟ್ಟ ರೇಖಾಚಿತ್ರಗಳೊಂದಿಗೆ ಪ್ರಾಧಿಕಾರದ ಎಲ್ಲಾ ಸಾಂಖ್ಯಿಕ ದತ್ತಾಂಶಗಳನ್ನೊಳಗೊಂಡಿರತಕ್ಕದ್ದು.
(4) ಪ್ರಗತಿಯನ್ನು ರೇಖಾಚಿತ್ರಗಳ ರೂಪದಲ್ಲಿ ತೋರಿಸತಕ್ಕದ್ದು.
(5) ವಾರ್ಷಿಕ ವರದಿಯ ಪ್ರತಿಯನ್ನು ವಿಧಾನ ಮಂಡಲದ ಸದನದಲ್ಲಿ ಮಂಡಿಸುವುದಕ್ಕಾಗಿ ಮುಂಚಿತವಾಗಿ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
(6) ವಾರ್ಷಿಕ ವರದಿಯನ್ನು ಪ್ರಾಧಿಕಾರದ ವೆಬ್ ಸೈಟ್ನಲ್ಲಿ ಅಳವಡಿಸತಕ್ಕದ್ದು ಹಾಗೂ ಮುಟ ಒಂದಕ್ಕೆ ರೂ. ಒಂದರಂತೆ ಅಥವಾ ಮುದ್ರಿಸುವ ಬೆಲೆ ಇವುಗಳಲ್ಲಿ ಯಾವುದು ಕನಿಷ್ಟವೋ ಅದನ್ನು ಪಾವತಿಸಿಕೊಂಡು ಸಾರ್ವಜನಿಕರಿಗೆ ದೊರೆಯುವಂತೆ ಅವಕಾಶ ಕಲ್ಪಿಸತಕ್ಕದ್ದು.
(1) ಪ್ರಾಧಿಕಾರದ ಬಜೆಟ್ನ್ನು ಅನುಬಂಧ-8 ರಲ್ಲಿ ನಿರ್ದಿಷ್ಟ ಪಡಿಸಿಲಾದ ನಮೂನೆಗಳಲ್ಲಿ ಅಂದಾಜು ರಾಜಸ್ವ ಜಮೆಗಳು ಮತ್ತು ವೆಚ್ಚದ ವಿವರಗಳನ್ನು ಸಂಗ್ರಹಿಸುವ ಮೂಲಕ ಮುಂದಿನ ಹಣಕಾಸು ವರ್ಷ ಪ್ರಾರಂಭಗೊಳ್ಳುವ ಮೂರು ತಿಂಗಳು ಮುಂಚಿತವಾಗಿ ಪ್ರಾಧಿಕಾರದ ಅಧ್ಯಕ್ಷರು ಸಿದ್ಧಪಡಿಸತಕ್ಕದ್ದು ಮತ್ತು ಬಜೆಟ್ಗೆ ಪ್ರಾಧಿಕಾರದ ಅನುಮೋದನೆಯನ್ನು ಪಡೆದು ಅದನ್ನು ಸರ್ಕಾರಕ್ಕೆ ಕಳುಹಿಸತಕ್ಕದ್ದು.
(2) ವಿವಿಧ ಕಛೇರಿಗಳಿಂದ ರಾಜಸ್ವ ಜಮೆಗಳನ್ನು ಸಂಗ್ರಹಿಸಿದ ನಂತರ, ಅಂದಾಜು ರಾಜಸ್ವ ಜಮೆಯನ್ನು ಮತ್ತು ಪ್ರಾರಂಭಿಕ ಶಿಲ್ಕನ್ನು ಪರಿಗಣಿಸಿ ನೌಕರರ ಸಂಬಳ ಮತ್ತು ಭತ್ಯೆಗಳಿಗೆ ಮತ್ತು ಕಛೇರಿ ವೆಚ್ಚಗಳಿಗೆ ಉಪಬಂಧವನ್ನು ಕಲ್ಪಿಸಿ ಬಜೆಟ್ನ್ನು ಸಿದ್ಧಪಡಿಸತಕ್ಕದ್ದು.
(3) ವಾರ್ಷಿಕ ಕಾರ್ಯಕ್ರಮಗಳಿಗೆ ಬಜೆಟ್ನ್ನು ಸಿದ್ಧಪಡಿಸುವಾಗ, ಎರಡು ಹಂತದ ಬಜೆಟ್ನ್ನು ಸಿದ್ಧಪಡಿಸುವುದು. ಮೊದಲನೆಯದಾಗಿ ಬಜೆಟ್ ಹಂಚಿಕೆಯನ್ನು ಚಾಲ್ತಿಯಲ್ಲಿರುವ ಕಾರ್ಯಕ್ರಮಗಳಿಗೆ ಮಾಡತಕ್ಕದ್ದು ಮತ್ತು ತದನಂತರ ನಿಧಿಯ ಲಭ್ಯತೆಯ ಆಧಾರದ ಮೇಲೆ ಹೊಸ ಕಾರ್ಯಕ್ರಮಗಳಿಗೆ ಬಜೆಟ್ ಹಂಚಿಕೆಯನ್ನು ಅನುಬಂಧ-10ಎ ಮತ್ತು 10-ಬಿ ನ ನಿಗದಿತ ನಮೂನೆಗಳಲ್ಲಿ ಮಾಡಬಹುದಾಗಿದೆ.
ಪ್ರಾಧಿಕಾರಕ್ಕೆ ಬರಬೇಕಾದ ಬಾಕಿ ಮೊತ್ತವನ್ನು ವಾರ್ಷಿಕ ಶೇಕಡಾ 18ರ ಬಡ್ಡಿಯೊಂದಿಗೆ ಭೂ ಕಂದಾಯದ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡತಕ್ಕದ್ದು. 18. ಅಪರಾಧಗಳ ರಾಜಿ: 32 ನೇ ಪ್ರಕರಣದ ಅಡಿಯಲ್ಲಿ ಎಸಗಿದ ಅಪರಾಧಗಳನ್ನು ದಂಡ ಮೊತ್ತದ ಎರಡರಷ್ಟನ್ನು ಪಾವತಿಸಿ ರಾಜಿ ಮಾಡಿಕೊಳ್ಳಬಹುದು. 19. ಮಳೆ ನೀರಿನ ಸಂಗ್ರಹಣೆ ಮತ್ತು ಅಂತರ್ಜಲ ಮರುಪೂರಣ: ಪ್ರಾಧಿಕಾರವು ಮರುಪೂರಣಕ್ಕೆ ಯೋಗ್ಯವಾದ ಪ್ರದೇಶಗಳನ್ನು ಗುರುತಿಸತಕ್ಕದ್ದು ಮತ್ತು ಮರುಪೂರಣಕ್ಕೆ ಯೋಗ್ಯವಾದ ಪ್ರದೇಶಗಳಲ್ಲಿ ಮಾತ್ರ ಮಳೆ ನೀರು ಸಂಗ್ರಹಣೆ ನಿರ್ಮಾಣಗಳನ್ನು ಅನುಷ್ಠಾನಗೊಳಿಸಲು ಸ್ಥಳೀಯ ಪ್ರಾಧಿಕಾರಕ್ಕೆ ನಿರ್ದೇಶನ ನೀಡತಕ್ಕದ್ದು. ಬಾವಿ/ ಕೊಳವೆಬಾವಿಯನ್ನು ನಿರ್ಮಿಸಲು ಅನುಮತಿ ಕೋರುವ ಯಾವುದೇ ವ್ಯಕ್ತಿಯು ಪ್ರಾಧಿಕಾರಕ್ಕೆ ಸಂಬಂಧಪಟ್ಟ ತಾಂತ್ರಿಕ ಅಧಿಕಾರಿಯು ನೀಡಿದ ತಾಂತ್ರಿಕ ಅಭಿಪ್ರಾಯವನ್ನು ಪಾಲಿಸತಕ್ಕದ್ದು.