(1) ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) ‘ಅಧಿನಿಯಮ’ ಎಂದರೆ, ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011 (2012ರ ಕರ್ನಾಟಕ ಅಧಿನಿಯಮ 1);
(ಬಿ) ‘ನಮೂನೆ’ ಎಂದರೆ ಈ ನಿಯಮಗಳಿಗೆ ಲಗತ್ತಾದ ನಮೂನೆ;
(ಸಿ) ‘ಪ್ರಕರಣ’ ಎಂದರೆ ಅಧಿನಿಯಮದ ಪ್ರಕರಣ.
(2) ಈ ನಿಯಮಗಳಲ್ಲಿ ಬಳಸಲಾದ ಆದರೆ ಪರಿಭಾಷಿಸಿರದ ಪದಗಳು ಮತ್ತು ಪದಾವಳಿಗಳು ಅಧಿನಿಯಮದಲ್ಲಿ ಅವುಗಳಿಗೆ ಗೊತ್ತುಪಡಿಸಿದ ಅರ್ಥಗಳನ್ನು ಹೊಂದಿರತಕ್ಕದ್ದು.