(1) ಎಲ್ಲಾ ಸನ್ನಿವೇಶಗಳಲ್ಲೂ ಕೇಳುವಿಕೆಯ (ಹಿಯರಿಂಗ್) ದಿನಾಂಕವನ್ನು ಕನಿಷ್ಠ ಏಳು ದಿನಗಳ ಮೊದಲು ಅರ್ಜಿದಾರನಿಗೆ ಅಥವಾ ಹೆಸರಿಸಲಾದ ಅಧಿಕಾರಿಗೆ ಅಥವಾ ಸಂದರ್ಭಾನುಸಾರವಾಗಿ ಸಕ್ಷಮ ಅಧಿಕಾರಿಗೆ ತಿಳಿಸತಕ್ಕದ್ದು.
(2) ಅರ್ಜಿದಾರ ಅಥವಾ ಹೆಸರಿಸಲಾದ ಅಧಿಕಾರಿ ಅಥವಾ ಸಂದರ್ಭಾನುಸಾರವಾಗಿ ಸಕ್ಷಮ ಅಧಿಕಾರಿಯು ಕೇಳುವಿಕೆಯ ಸಂದರ್ಭದಲ್ಲಿ ಖುದ್ದಾಗಿ ಅಥವಾ ಆತನಿಂದ ಪ್ರಾಧಿಕೃತನಾದ ವ್ಯಕ್ತಿಯು ಹಾಜರಿರತಕ್ಕದ್ದು.
(3) ಕೇಳುವಿಕೆಯ ದಿನಾಂಕವನ್ನು ಸೂಕ್ತವಾಗಿ ತಿಳಿಸಿದ್ದಾಗ್ಯೂ ಯಾಮೊಬ್ಬ ಪಕ್ಷಕಾರನು ಕೇಳುವಿಕೆಯ ದಿನಾಂಕದಂದು ಗೈರು ಹಾಜರಾದರೆ ಅರ್ಜಿಯನ್ನು ಏಕ ಪಕ್ಷೀಯವಾಗಿ ತೀರ್ಮಾನಿಸಬಹುದು.