ಸಕ್ಷಮ ಅಧಿಕಾರಿಯು, ಪರಿಹಾರ ವೆಚ್ಚವನ್ನು ವಿಧಿಸುವ ಆದೇಶದ ಪ್ರತಿಯನ್ನು ಸ್ವೀಕರಿಸಿದ ಮೇಲೆ ಹೆಸರಿಸಲಾದ ಅಧಿಕಾರಿ ಅಥವಾ ಸಂದರ್ಭಾನುಸಾರವಾಗಿ ಸಕ್ಷಮ ಅಧಿಕಾರಿ ಅಥವಾ ಮೇಲ್ಮನವಿ ಅಧಿಕಾರಿಯು ನಿರ್ಧರಿಸಬಹುದಾದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮುಂಬರುವ ವೇತನದಿಂದ ಅಥವಾ ಗೌರವಧನದಿಂದ ಅಥವಾ ಪರಿಶ್ರಮ ಧನದಿಂದ ಪರಿಹಾರ ವೆಚ್ಚವನ್ನು ವಸೂಲು ಮಾಡುವಂತೆ ಮಾಡತಕ್ಕದ್ದು ಮತ್ತು ಅದನ್ನು ಸಂಬಂಧಪಟ್ಟ ಇಲಾಖೆಗಳ ಲೆಕ್ಕಶೀರ್ಷಿಕೆ ಅಡಿಯಲ್ಲಿ ಜಮೆ ಮಾಡತಕ್ಕದ್ದು ಹಾಗೂ ಚಲನ್ನಿನ ಪ್ರತಿಯನ್ನು ಸಂಬಂಧಿಸಿದ ಹೆಸರಿಸಲಾದ ಅಧಿಕಾರಿಗೆ ಕಳುಹಿಸತಕ್ಕದ್ದು.
Loading…