ಸಕ್ಷಮ ಅಧಿಕಾರಿ ಅಥವಾ ಮೇಲ್ಮನವಿ ಪ್ರಾಧಿಕಾರಿಯು ಅರ್ಜಿಯ ಮೇಲಿನ ಕೇಳುವಿಕೆಯ ಮಾಹಿತಿಯನ್ನು ಈ ಮುಂದಿನ ಯಾವುದಾದರೂ ಒಂದು ವಿಧಾನದಲ್ಲಿ ತಿಳಿಸತಕ್ಕದ್ದು, ಎಂದರೆ:-
(1) ಖುದ್ದಾಗಿ ನೀಡುವುದು;
(2) ಸ್ವೀಕೃತಿಯೊಡನೆ ನೋಂದಾಯಿತ ಅಂಚೆಯ ಮೂಲಕ; ಅಥವಾ
(3) ದೂರವಾಣಿ/ಫ್ಯಾಕ್ಸ್ /ಇ-ಮೇಲ್/ಎಸ್.ಎಂ.ಎಸ್. ಮೂಲಕ (ಅರ್ಜಿದಾರರನ್ನು ಶೀಘ್ರ ಸಂಪರ್ಕ ಇರುವ ಯಾವುದೇ ವಿಧಾನದ ಮೂಲಕ).
(4) ಕೆ.ಜಿ.ಎಸ್.ಸಿ. ತಂತ್ರಾಂಶದಲ್ಲಿಯೂ ಈ ಮಾಹಿತಿಯನ್ನು ಅಳವಡಿಸತಕ್ಕದ್ದು.