(1) ಸಾರ್ವಜನಿಕ ಪ್ರಾಧಿಕಾರದ ಹೆಸರಿಸಲಾದ ಅಧಿಕಾರಿ ಮತ್ತು ಆತನ ಅಧೀನ ಸಾರ್ವಜನಿಕ ನೌಕರನು, ಸಾಮಾನ್ಯ ಸಾರ್ವಜನಿಕ ಅನುಕೂಲಕ್ಕಾಗಿ, ತನ್ನ ಕಚೇರಿಯಲ್ಲಿ ಲಭ್ಯವಿರುವ ಸೇವೆಗಳ ಬಗೆಗಿನ ಎಲ್ಲಾ ಯುಕ್ತ ಮಾಹಿತಿಯನ್ನು ಅಧಿನಿಯಮದ ಷೆಡ್ಯೂಲ್ನಲ್ಲಿ ನಿಗದಿಪಡಿಸಿರುವಂತೆ ಸೂಚನಾಫಲಕದ ಮೇಲೆ ಪ್ರದರ್ಶಿಸತಕ್ಕದ್ದು. ಅಧಿನಿಯಮದ 3ನೇ ಪ್ರಕರಣದ (2)ನೇ ಉಪಪ್ರಕರಣದನ್ವಯ ಸೇವೆಗಳನ್ನು ಸ್ವೀಕರಿಸುವುದಕ್ಕಾಗಿ ಕಾಲಮಿತಿಯನ್ನೊಳಗೊಂಡ ಗೊತ್ತುಪಡಿಸಲಾದ ಸೇವೆಗಳು, ದಾಖಲೆಗಳ ತಪಶೀಲು ಪಟ್ಟಿ (ಚೆಕ್ ಲಿಸ್ಟ್), ನಿಗದಿತ ಶುಲ್ಕ, ಕಡ್ಡಾಯವಾಗಿ ನೀಡಬೇಕಾದ ಸ್ವೀಕೃತಿ ಪತ್ರ, ತಿರಸ್ಕರಿಸಿದ ಅರ್ಜಿಗಳಿಗೆ ನಿರ್ದಿಷ್ಟವಾದ ಕಾರಣ, ವಿಳಂಬ ಮತ್ತು ಸೇವೆಯನ್ನು ಕಾಲಮಿತಿಯೊಳಗೆ ನೀಡದ ಕಾರಣ ಸಕ್ಷಮ ಅಧಿಕಾರಿಯಿಂದ ಪರಿಹಾರ ವೆಚ್ಚವನ್ನು ಪಡೆಯುವ ಕಾರ್ಯವಿಧಾನ, ಮೇಲ್ಮನವಿ ಅಧಿಕಾರಿಯವರನ್ನು ಸಂಪರ್ಕಿಸಬೇಕಾದ ವಿವರಗಳನ್ನು, ಅರ್ಜಿಗಳ ಸ್ಥಿತಿಗತಿಗಳ ನಿರ್ವಹಣೆಗಾಗಿ ಕಾರ್ಯವಿಧಾನ ಪ್ರದರ್ಶಿಸತಕ್ಕದ್ದು.(ನಮೂನೆ-ಅ) ಇಂತಹ ಸೂಚನಾ ಫಲಕವನ್ನು ಕಛೇರಿಯ ಮುಂಭಾಗದಲ್ಲಿ ಪ್ರದರ್ಶಿಸತಕ್ಕದ್ದು. ಹಾಗೂ ಅಧಿಕೃತ ಅರ್ಜಿಗಳ ಸಾಕಷ್ಟು ಪ್ರತಿಗಳನ್ನು ಅರ್ಜಿ ಸ್ವೀಕೃತ ಕೌಂಟರುಗಳಲ್ಲಿ ಒದಗಿಸತಕ್ಕದ್ದು.
(2) ಸಾರ್ವಜನಿಕ ಆದಿಪತ್ಯದಲ್ಲಿ ಅಂಥ ಮಾಹಿತಿಯನ್ನು ಪ್ರದರ್ಶನ ಮಾಡಿರದ ಪ್ರಕರಣದಲ್ಲಿ, ಸಕ್ಷಮ ಅಧಿಕಾರಿಯು, ಹೆಸರಿಸಲಾದ ಅಧಿಕಾರಿಯ ಮೂಲಕ ಸುಧಾರಣಾ ಕ್ರಮವನ್ನು ಪ್ರಾರಂಭಿಸತಕ್ಕದ್ದು.